ಲೈಂಗಿಕ ಕ್ರಿಯೆ ವೇಳೆ ಹೃದಯಾಘಾತದಿಂದ ವೃದ್ಧ ಸಾವು: ಗಂಡನ ಸಹಾಯದಿಂದ ಮೃತ ದೇಹ ಸಾಗಿಸಿದ್ದ ಮಹಿಳೆ..!?

ಬಾಲಸುಬ್ರಮಣಿಯನ್ ಮನೆಗೆಲಸ ಮಾಡುವ ಮಹಿಳೆಯೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಇದೇ ನವೆಂಬರ್​ 16 ರಂದು ಮೊಮ್ಮಗನನ್ನ ಶಾಲೆಗೆ ಬಿಟ್ಟು ಬಳಿಕ ಮಹಿಳೆಯ ಮನೆಗೆ ತೆರಳಿದ್ದ. ಮನೆಗೆ ಕರೆ ಮಾಡಿದ್ದ ವೃದ್ಧ ಸ್ವಲ್ಪ ಕೆಲಸ ಇದೆ. ಮನೆಗೆ ತಡವಾಗಿ ಬರುತ್ತೇನೆ ಎಂದಿದ್ದ.

Written by - VISHWANATH HARIHARA | Edited by - Bhavishya Shetty | Last Updated : Nov 26, 2022, 02:12 PM IST
    • ಲೈಂಗಿಕ‌ ಕ್ರಿಯೆ ನಡೆಸುವಾಗ ಹೃದಯಾಘಾತದಿಂದ ವೃದ್ಧ ಮೃತ
    • ಮನೆಗೆಲಸ ಮಾಡುವ ಮಹಿಳೆಯೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ
    • ಮಹಿಳೆ ತನ್ನ ಗಂಡನ ಜೊತೆ ಸೇರಿ ಮೃತ ದೇಹವನ್ನು ಸಾಗಿಸಿದ್ದಳು
ಲೈಂಗಿಕ ಕ್ರಿಯೆ ವೇಳೆ ಹೃದಯಾಘಾತದಿಂದ ವೃದ್ಧ ಸಾವು: ಗಂಡನ ಸಹಾಯದಿಂದ ಮೃತ ದೇಹ ಸಾಗಿಸಿದ್ದ ಮಹಿಳೆ..!?
Elderly Death During Sex

ಬೆಂಗಳೂರು: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಜೊತೆ ಲೈಂಗಿಕ‌ ಕ್ರಿಯೆ ನಡೆಸುವಾಗ ಹೃದಯಾಘಾತದಿಂದ ವೃದ್ಧನೊಬ್ಬ ಮೃತಪಟ್ಟಿದ್ದಾನೆ. ಜೆ.ಪಿ.ನಗರದ ಪುಟ್ಟೇನಹಳ್ಳಿಯ ನಿವಾಸಿ ಬಾಲಸುಬ್ರಮಣಿಯನ್ (67) ಮೃತಪಟ್ಟವ.

ಇದನ್ನೂ ಓದಿ: Income Tax: ಮನೆಯಲ್ಲಿ ಈ ಮಿತಿಗಿಂತ ಹೆಚ್ಚು ಹಣವಿಟ್ಟರೆ ಭಾರೀ ಸಮಸ್ಯೆ: ಈಗಲೇ ತಿಳಿದುಕೊಳ್ಳಿ ನಿಯಮ

ಬಾಲಸುಬ್ರಮಣಿಯನ್ ಮನೆಗೆಲಸ ಮಾಡುವ ಮಹಿಳೆಯೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಇದೇ ನವೆಂಬರ್​ 16 ರಂದು ಮೊಮ್ಮಗನನ್ನ ಶಾಲೆಗೆ ಬಿಟ್ಟು ಬಳಿಕ ಮಹಿಳೆಯ ಮನೆಗೆ ತೆರಳಿದ್ದ. ಮನೆಗೆ ಕರೆ ಮಾಡಿದ್ದ ವೃದ್ಧ ಸ್ವಲ್ಪ ಕೆಲಸ ಇದೆ. ಮನೆಗೆ ತಡವಾಗಿ ಬರುತ್ತೇನೆ ಎಂದಿದ್ದ.

ಆದರೆ ಬೆಳಗ್ಗೆಯಾದರೂ ಬಾಲಸುಬ್ರಮಣಿಯನ್ ಮನೆಗೆ ವಾಪಸ್ಸಾಗಿರಲಿಲ್ಲ. ಹೀಗಾಗಿ ಮನೆಯವರು ನವೆಂಬರ್​ 17 ರಂದು ಪೊಲೀಸ್​ ಠಾಣೆಗೆ ಬಾಲಸುಬ್ರಮಣಿಯನ್ ಕಾಣೆಯಾಗಿದ್ದಾರೆ ಎಂದು ದೂರು ಸಲ್ಲಿಸಿದ್ದರು.  ಈ ಸಂಬಂಧ ಪೊಲೀಸರು ಶಂಕೆಯ ಮೇರೆಗೆ ಮಹಿಳೆಯನ್ನ ವಿಚಾರಣೆ ನಡೆಸಿದಾಗ ನಡೆದ ಸಂಗತಿಯೆಲ್ಲ ಬಾಯಿ ಬಿಟ್ಟಿದ್ದಾಳೆ.

ಮಹಿಳೆ ಜೊತೆ ಬಾಲಸುಬ್ರಮಣಿಯನ್ ದೈಹಿಕ ಸಂಪರ್ಕ ಹೊಂದಿದಾಗ ಹೃದಯಾಘಾತವಾಗಿ ಅಲ್ಲೇ ಮೃತಪಟ್ಟಿದ್ದಾರೆ. ಇದರಿಂದ ಮಹಿಳೆಗೆ ಭಯ ಶುರುವಾಗಿತ್ತು. ಈ ಸಂಗತಿಯನ್ನ ಮಹಿಳೆ ತಕ್ಷಣ ತನ್ನ ಪತಿಗೆ ತಿಳಿಸಿದ್ದಾಳೆ. ಬಾಲಸುಬ್ರಮಣಿಯನ್ ದೇಹ ಮನೆಯಲ್ಲಿದ್ದರೆ ಕೊಲೆ ಎಂದು ಕೇಸ್ ಆಗುತ್ತೆ ಎಂದು ಹೆದರಿ ಮೃತದೇಹವನ್ನ ಮಹಿಳೆ, ಪತಿ ಹಾಗೂ ಇನ್ನೊಬ್ಬ ಸಂಬಂಧಿ ಸೇರಿ ಬೆಡ್​ಶೀಟ್​ನಲ್ಲಿ ಸುತ್ತಿ ಕಟ್ಟಿದ್ದಾರೆ. ನಂತರ ಪ್ಲಾಸ್ಟಿಕ್​ ಬ್ಯಾಗ್​ನಲ್ಲಿ ತುಂಬಿ  ಮೃತದೇಹವನ್ನ ಜೆ.ಪಿ.ನಗರದ ನಿರ್ಜನ ಪ್ರದೇಶದ ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದರು.

ಇದನ್ನೂ ಓದಿ: Free Netflix ಮತ್ತು Amazon Prime ನೊಂದಿಗೆ ಅನಿಯಮಿತ ಕರೆ ನೀಡುತ್ತೆ Jioದ ಈ ಅಗ್ಗದ ಪ್ಲಾನ್‌!

ಸದ್ಯ ಸಾಕ್ಷಿನಾಶ ಕೇಸ್ ಅಡಿ ಮಹಿಳೆ ಮತ್ತು ಪತಿ ಮೇಲೆ ಪುಟ್ಟೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಸದ್ಯ ಮಹಿಳೆ ಮತ್ತು ಪತಿ ಜಾಮೀನು ಪಡೆದು ಹೊರ ಬಂದಿದ್ದಾರೆ ಎನ್ನಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News