ಬೆಸ್ಕಾಂಗೆ ಬರ್ತಿರೋ ದೂರುಗಳು ಕೂಡಾ ಹೆಚ್ಚಾಗ್ತಿದೆ.. ಬೆಂಗಳೂರಿನ ಕೇಂದ್ರೀಯ ಗೃಹ ವಿಜ್ಞಾನ ಕಾಲೇಜು ಬೆಸ್ಕಾಂಗೆ ಪತ್ರ ಬರೆದಿದೆ.. ಕಾಲೇಜು ಆವರಣಲ್ಲಿ ವಿದ್ಯುತ್ ಕೇಬಲ್ಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು ಕೂಡಲೇ ಸರಿಪಡಿಸುವಂತೆ ಕೋರಲಾಗಿದೆ.. ಕಾಲೇಜು ಆವರಣದಲ್ಲಿ ಸೂಕ್ತ ಸುರಕ್ಷತಾ ಕ್ರಮ ಮಾಡಿ ಕೊಡುವಂತೆ ಕೋರಲಾಗಿದೆ..
ವ್ಯವಸ್ಥೆಯ ಸಮರ್ಪಕ ನಿರ್ವಹಣೆ ಕೊರತೆಯೇ ದುರಂತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೂ, ಹೊಣೆಗಾರಿಕೆಯಿಂದ ನುಣುಚಿಕೊಂಡು ಸಂವೇದನಾ ರಹಿತರಾಗಿ ಸಚಿವ ಜಾಜ್೯ ವರ್ತಿಸುತ್ತಿರುವುದು ಸರಕಾರಕ್ಕೆ ಶೋಭೆ ತರುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.
ಮಳೆ ಇಲ್ಲದೆ ವಿದ್ಯುತ್ ಉತ್ಪಾದನೆಯಲ್ಲಿ ತೀವ್ರ ಕುಸಿತ ಸಿಲಿಕಾನ್ ಸಿಟಿ ಜನರಿಗೆ ಬೆಸ್ಕಾಂನಿಂದ ಮತ್ತೆ ಶಾಕ್.. ಶಾಕ್ ಹಬ್ಬದ ದಿನಗಳಲ್ಲಿಯೇ ನಿಮ್ಮ ಮನೆಯಲ್ಲಿ ಇರಲ್ಲ ಕರೆಂಟ್ ಇಂದು ಮತ್ತು ನಾಳೆ ಬೆಂಗಳೂರಲ್ಲಿ ಪವರ್ ಕಟ್, ಕಟ್ ಕಳೆದ ಒಂದು ವಾರದಿಂದಲೂ ನಗರದಲ್ಲಿ ವಿದ್ಯುತ್ ವ್ಯತ್ಯಯ
ಬೆಸ್ಕಾಂ ವ್ಯಾಪ್ತಿಯ ವಿದ್ಯುತ್ ಕಂಬಗಳ ಮೇಲಿನ ಅನಧಿಕೃತ ಕೇಬಲ್ ಅಳವಡಿಕೆಯಿಂದಾಗಿ ಸಾರ್ವಜನಿಕರು ಹಾಗೂ ಪಾದಾಚಾರಿಗಳು ದಿನನಿತ್ಯ ಪರದಾಟ ನಡೆಸುವಂತ ಸ್ಥಿತಿ ಬಂದೋದಾಗಿದೆ..ಇದಕ್ಕೆ ಇದೀಗ ಬ್ರೇಕ್ ಹಾಕಲು ಬೆಸ್ಕಾಂ ಮುಂದಾಗಿದ್ದು,ಒಎಪ್ಸಿ ಕೇಬಲ್ ತೆರವಿಗೆ ಬೆಸ್ಕಾಂ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗಿದೆ..
Bengaluru News: ಬೆಸ್ಕಾಂ ವಿದ್ಯುತ್ ಕಂಬಗಳ ಮೇಲೆ ಅನಧಿಕೃತವಾಗಿ ಓಎಫ್ಸಿ ಕೇಬಲ್ ಹಾಗೂ ಇನ್ನಿತರ ಕೇಬಲ್ ಗಳನ್ನು ಅಳವಡಿಸಿದ್ದ ಪರಿಣಾಮ, ವಿದ್ಯುತ್ ಕಂಬ ಉರುಳಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪಾದಚಾರಿಗಳು ಗಾಯಗೊಂಡಿದ್ದು, ಸುರಕ್ಷತೆ ದೃಷ್ಠಿಯಿಂದ ಬೆಸ್ಕಾಂ ಅನಧಿಕೃತ ಕೇಬಲ್ ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಎಲ್ಲಾ ಓಎಫ್ಸಿ ಕೇಬಲ್, ಡಾಟ ಕೇಬಲ್ ಹಾಗೂ ಡಿಶ್ ಕೇಬಲ್ ಗಳನ್ನು ಒಂದು ವಾರದೊಳಗೆ ತೆರವುಗೊಳಿಸಲು ಸಂಬಂಧಿಸಿದ ಇಂಟರ್ ನೆಟ್ ಸೇವಾ ಕಂಪನಿಗಳು, ಟಿವಿ ಕೇಬಲ್ ಆಪರೇಟರ್ ಗಳಿಗೆ ಬೆಸ್ಕಾಂ ಕಟ್ಟು ನಿಟ್ಟಿನ ಸೂಚನೆ ನೀಡಿದೆ.
ಗೃಹಜ್ಯೋತಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಒಂದು ವಾರದಿಂದ ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಸಲು ಜನರು ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬೆಸ್ಕಾಂ ಮತ್ತು ಸ್ಥಳೀಯ ಎಸ್ಕಾಂ ಕಛೇರಿಗಳಿಗೆ ಬಂದು ಅರ್ಜಿ ಸಲ್ಲಿಸುತ್ತಿದ್ದಾರೆ.
Gruha Jyoti: ಗೃಹಜ್ಯೋತಿ ಯೋಜನೆ ಇದರ ಷರತ್ತುಗಳಿಂದಾಗಿ ಬಹಳಷ್ಟು ಗೊಂದಲಗಳಿಗೆ ಗುರಿಯಾಗಿದೆ. ಸಾರ್ವಜನಿಕರಲ್ಲಿ ಈ ಗೊಂದಲಗಳನ್ನು ಹೋಗಲಾಡಿಸಾಲು ಬೆಸ್ಕಾಂ ಸ್ಪಷ್ಟೀಕರಣವನ್ನೂ ನೀಡಿದೆ.
ಹಳ್ಳಿಗಳಲ್ಲಿ ನಡೆದ ಹಲ್ಲೆಯ ಘಟನೆಗಳು ನಮ್ಮ ಮೇಲೆ ಎಲ್ಲಿ ನಡೆಯುತ್ತೋ ಅನ್ನೋ ಭಯದಲ್ಲಿಯೇ ಬೆಸ್ಕಾಂ ಸಿಬ್ಬಂದಿಗಳು ಬಿಲ್ ಕಲೆಕ್ಟ್ ಮಾಡ್ತಿದ್ದಾರೆ. ಕೆಲವರು ಬೆಸ್ಕಾಂ ಸಿಬ್ಬಂಧಿಗಳಿಗೆ ಸಹಕರಿಸಿದ್ರೆ, ಇನ್ನೂ ಕೆಲವರು ಅನಗತ್ಯವಾಗಿ ಜಗಳ ತೆಗೆಯುತ್ತಿದ್ದಾರೆ.
ಮೇ 24 (ಬುಧವಾರ) ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ 66/11 ಕೆ.ವಿ ಹೆಚ್.ಬಿ.ಆರ್ ಸ್ಟೇಟಷ್ ನಲ್ಲಿ ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ನಾಳೆ ಪವರ್ ಕಟ್ ಸಮಸ್ಯೆ ಎದುರಾಗಲಿದೆ ಎಂದು ತಿಳಿದುಬಂದಿದೆ.
Electricity Bill Hike: ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಪ್ರತಿಯೂನಿಟ್ ಮೇಲೆ 1.46 ರೂ. ಹೆಚ್ಚಳ ಮಾಡುವಂತೆ ಎಸ್ಕಾಂಗಳು ಬೇಡಿಕೆ ಸಲ್ಲಿಸಿದ್ದವು. ಹೊಸ ದರ ಜಾರಿ ಹಿನ್ನೆಲೆ ಗ್ರಾಹಕರ ಪ್ರತಿ ತಿಂಗಳ ಬಿಲ್ನಲ್ಲಿ ಶೇ.8.31ರಷ್ಟು ಹೆಚ್ಚಳವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.