ರಾಜಕೀಯ ಪಕ್ಷಗಳ ವಿರುದ್ಧ ಐದು ಜಿಲ್ಲಾಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷರ ಹೈಕೋರ್ಟ್ನಲ್ಲಿ ಅರ್ಜಿ

ಜಿಲ್ಲಾಪಂಚಾಯತಿಗಳ ಅಧ್ಯಕ್ಷ, ಉಪಾಧ್ಯಕ್ಷ ರಾಜೀನಾಮೆ ವಿಚಾರ. 

Last Updated : Oct 18, 2017, 10:54 AM IST
ರಾಜಕೀಯ ಪಕ್ಷಗಳ ವಿರುದ್ಧ ಐದು ಜಿಲ್ಲಾಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷರ ಹೈಕೋರ್ಟ್ನಲ್ಲಿ ಅರ್ಜಿ title=

ಬೆಂಗಳೂರು: ರಾಜಕೀಯ ಪಕ್ಷಗಳು ತಮ್ಮಿಂದ ರಾಜೀನಾಮೆ ಪಡೆದುಕೊಳ್ಳುತ್ತಿವೆ ಎಂದು ಆರೋಪಿಸಿ ಐದು ಜಿಲ್ಲಾಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷರು ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಮಂಗಳವಾರ ನಡೆಸಿದೆ.

ರಾಜಕೀಯ ಪಕ್ಷಗಳು ಒತ್ತಡ ಹೇರಿ ತಮ್ಮಿಂದ ರಾಜೀನಾಮೆ ಪಡೆದುಕೊಳ್ಳುತ್ತಿವೆ. ರಾಜೀನಾಮೆ ನೀಡಿದ ನಂತರದ 15ದಿನಗಳಲ್ಲಿ ತನ್ನಿಂದ ತಾನೇ ರಾಜೀನಾಮೆ ಅಂಗೀಕಾರಗೊಳ್ಳುತ್ತದೆ. ಈ ನಿಯಮ ಸಂವಿಧಾನ ಬಾಹಿರ ಎಂದು ಘೋಷಿಸುವಂತೆ ಕೋರಿ ರಾಜ್ಯದ ರಾಮನಗರ, ತುಮಕೂರು, ಚಿತ್ರದುರ್ಗ ಸೇರಿದಂತೆ ಐದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಈವರೆಗೂ ಎಷ್ಟು ಮಂದಿ ಜಿಲ್ಲಾ ಅಧ್ಯಕ್ಷ, ಉಪಾಧ್ಯಕ್ಷರು ರಾಜೀನಾಮೆ ನೀಡಿದ್ದಾರೆ? ಆ ಪೈಕಿ ಎಷ್ಟು ಮಂದಿ ರಾಜೀನಾಮೆ ಪತ್ರ ಹಿಂಪಡೆದುಕೊಂಡಿದ್ದಾರೆ? ಈ  ಕುರಿತು ಮಾಹಿತಿ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಇದೇ ತಿಂಗಳ 23 ಕ್ಕೆ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

Trending News