close

News WrapGet Handpicked Stories from our editors directly to your mailbox

ವಿದ್ಯುತ್ ಸ್ಪರ್ಶ: ಕೊಪ್ಪಳ ಹಾಸ್ಟೆಲ್‌ನಲ್ಲಿ ಐವರು ವಿದ್ಯಾರ್ಥಿಗಳ ದುರ್ಮರಣ

 ಧ್ವಜಾರೋಹಣ ಕಾರ್ಯಕ್ರಮಕ್ಕೆ ನೆಟ್ಟಿದ್ದ ಕಬ್ಬಿಣದ ಕಂಬವನ್ನು ತೆರವು ಮಾಡುವ ಸಂದರ್ಭದಲ್ಲಿ ಈ ವಿದ್ಯುತ್ ತಂತಿಗೆ ಸ್ಪರ್ಶಿಸಿ ಐವರು ಹೈಸ್ಕೂಲ್ ವಿದ್ಯಾರ್ಥಿಗಳು ಸಾವನಪ್ಪಿದ್ದಾರೆ.

Updated: Aug 18, 2019 , 01:30 PM IST
ವಿದ್ಯುತ್ ಸ್ಪರ್ಶ: ಕೊಪ್ಪಳ ಹಾಸ್ಟೆಲ್‌ನಲ್ಲಿ ಐವರು ವಿದ್ಯಾರ್ಥಿಗಳ ದುರ್ಮರಣ

ಕೊಪ್ಪಳ: ವಿದ್ಯುತ್ ಸ್ಪರ್ಶದಿಂದಾಗಿ ಅಯಾವರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ್ದ ಘಟನೆ ಕೊಪ್ಪಳದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. 

ನಗರದ ಬನ್ನಿಕಟ್ಟೆ ಪ್ರದೇಶದಲ್ಲಿರುವ ದೇವರಾಜ ಅರಸ್ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಈ ಘಟನೆ ನಡೆದಿದ್ದು, ಧ್ವಜಾರೋಹಣ ಕಾರ್ಯಕ್ರಮಕ್ಕೆ ನೆಟ್ಟಿದ್ದ ಕಬ್ಬಿಣದ ಕಂಬವನ್ನು ತೆರವು ಮಾಡುವ ಸಂದರ್ಭದಲ್ಲಿ ಈ ವಿದ್ಯುತ್ ತಂತಿಗೆ ಸ್ಪರ್ಶಿಸಿ ಐವರು ಹೈಸ್ಕೂಲ್ ವಿದ್ಯಾರ್ಥಿಗಳು ಸಾವನಪ್ಪಿದ್ದಾರೆ.

ಮೃತ ವಿದ್ಯಾರ್ಥಿಗಳನ್ನು ಮಲ್ಲಿಕಾರ್ಜುನ ಮೆತಗಲ್(16), ಬಸವರಾಜ(16),  ದೇವರಾಜ ಹಲಗೇರಿ(15), ಕುಮಾರ ಹೈದರ್ ನಗರ(15) ಮತ್ತು ಗಣೇಶ ಲಾಚನಕೇರಿ(14) ಎಂದು ಗುರುತಿಸಲಾಗಿದೆ. 

ಘಟನೆ ಬಗ್ಗೆ ಕೊಪ್ಪಳ ನಗರ ಪೊಲೀಸ್‌ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.