ಉತ್ತಮ ಬೆಳೆಗಳನ್ನು ಪಡೆಯಲು ಈ ಕ್ರಮಗಳನ್ನು ಅನುಸರಿಸಿ

ರೈತರ ಹಿಂದಿನ ವರ್ಷದಲ್ಲಿ ಇಳುವರಿ ತೀರ ಕುಂಠಿತವಾಗಿದ್ದು, ಆರ್ಥಿಕವಾಗಿ ನಷ್ಟ  ಅನುಭವಿಸಿರುವುದರಿಂದ ಪ್ರಸಕ್ತ ಸಾಲಿಗೆ  ನರ್ಸರಿ ಮಾಲಿಕರು ಈ ಹಿಂದಿನ ಸಾಲಿನಂತಯೇ ರೈತರಿಗೆ ರೂ.40 ಪೈಸೆ ಧರದಲ್ಲಿಯೇ ಉತ್ತಮ ಗುಣಮಟ್ಟದ ಸಸಿಗಳನ್ನು ತಯಾರಿಸಿ ಪೂರೈಸಬೇಕು.

Written by - Manjunath N | Last Updated : Jun 21, 2024, 01:02 PM IST
  • ಬೀಜಗಳನ್ನು ನೇರವಾಗಿ ನಾಟಿ ಮಾಡುವ ಮುನ್ನ ಬೀಜೋಪಚಾರಗೊಳಿಸಬೇಕು.
  • ನರ್ಸರಿಗಳಲ್ಲಿ ರೈತರಿಂದ ಬೀಜ ಪಡೆದಿರುವ ಮತ್ತು ಸಸಿಗಳನ್ನು ವಿತರಿಸಿದ ದಿನಾಂಕಗಳ ವಹಿಯನ್ನು ಸಹ ನಿರ್ವಹಿಸಬೇಕು.
ಉತ್ತಮ ಬೆಳೆಗಳನ್ನು ಪಡೆಯಲು ಈ ಕ್ರಮಗಳನ್ನು ಅನುಸರಿಸಿ title=

ಬಳ್ಳಾರಿ: ಜಿಲ್ಲೆಯ ಮೆಣಸಿನಕಾಯಿ ಬೆಲೆಗಾರರು ಹಾಗೂ ನರ್ಸರಿ ಮಾಲೀಕರು ಉತ್ತಮ ಬೆಳೆಗಳನ್ನು ಪಡೆಯಲು ಸೂಕ್ತ ಕ್ರಮಗಳನ್ನು ಅನುಸರಿಸಬೇಕು ಎಂದು ತೋಟಗಾರಿಕೆ ಉಪನಿರ್ದೇಶಕರಾದ ಸಂತೋಷ್ ಸಪ್ಪಂಡಿ ಅವರು ತಿಳಿಸಿದ್ದಾರೆ.

ಮೆಣಸಿನಕಾಯಿ ಬೆಳೆಗಾರರು ಹಾಗೂ ನರ್ಸರಿ ಮಾಲಿಕರಿಗೆ ಸೂಚನೆಗಳು:

ರೈತರು ಪ್ರಸಕ್ತ ಸಾಲಿಗೆ ಮೆಣಸಿನಕಾಯಿ ಸಸಿಯನ್ನು  ಜಿ.ಎಸ್.ಟಿ ನೊಂದಣಿಯನ್ನು ಹೊಂದಿರುವ ನರ್ಸರಿಗಳಿಂದಲೇ ಖರೀದಿಸಿ ನಾಟಿ ಮಾಡಿ, ಬಿಲ್ಲನ್ನು ಪಹಣಿಯಲ್ಲಿರುವ ರೈತರ ಹೆಸರಿಗೆ ಪಡೆಯುವುದು ಕಡ್ಡಾಯವಾಗಿದೆ.

ರೈತ ಬಾಂಧವರು ಒಂದೇ ಕಂಪನಿಯ ಬೀಜಗಳ ಮೇಲೆ ಅವಲಂಭಿತವಾಗದೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಧಿಕ ಇಳುವರಿಯ ಇತರೆ ಕಂಪನಿಯ ಬೀಜಗಳನ್ನು ಸಹ ಖರೀದಿಸಿ ನಾಟಿ ಮಾಡಬಹುದು.

ರೈತರು ಸ್ವೀಕರಿಸಿದ ರಸೀದಿಯನ್ನು ಬೆಳೆ ಮಾರಾಟ ಆಗುವವರೆಗೂ ಜೋಪಾನವಾಗಿ ಇಟ್ಟುಕೊಳ್ಳುವುದು. ಬೀಜಗಳನ್ನು ನೇರವಾಗಿ ನಾಟಿ ಮಾಡುವ ಮುನ್ನ ಬೀಜೋಪಚಾರಗೊಳಿಸಬೇಕು.

ರೈತ ಬಾಂಧವರಿಗೆ ಮೆಣಸಿನಕಾಯಿ ಸಸಿಯನ್ನು ಮಾರಾಟಮಾಡುವ ನರ್ಸರಿ ಮಾಲಿಕರುಗಳು ತಮ್ಮ ನರ್ಸರಿಯ ಜಿ.ಎಸ್.ಟಿ ನೊಂದಣಿಯನ್ನು ಮಾಡಿಕೊಂಡ ನಂತರವೇ ತರಕಾರಿ ಸಸಿ ತಯಾರಿಸಲು ಮುಂದಾಗಬೇಕು. ನರ್ಸರಿಗಳಲ್ಲಿ ತಾವು ಉಪಯೋಗಿಸುವ ಬೀಜ, ಗೊಬ್ಬರ, ರೋಗ ಮತ್ತು ಕೀಟನಾಶಕಗಳ ವಿವರಗಳನ್ನು ವಹಿಯಲ್ಲಿ ನಮೂದಿಸಿ ಕಟ್ಟು ನಿಟ್ಟಾಗಿ ನಿರ್ವಹಿ¸ಬೇಕು.

ಇದನ್ನೂ ಓದಿ : ಬೆಳೆ ವಿಮೆ ನೊಂದಾಯಿಸಿಕೊಳ್ಳುವಂತೆ ರೈತರಿಗೆ ಎನ್.ಚಲುವರಾಯಸ್ವಾಮಿ ಕರೆ

ನರ್ಸರಿಗಳಲ್ಲಿ ರೈತರಿಂದ ಬೀಜ ಪಡೆದಿರುವ ಮತ್ತು ಸಸಿಗಳನ್ನು ವಿತರಿಸಿದ ದಿನಾಂಕಗಳ ವಹಿಯನ್ನು ಸಹ ನಿರ್ವಹಿಸಬೇಕು. ಹಾಗೂ ನರ್ಸರಿಗಳಲ್ಲಿ ಸಸಿಗಳನ್ನು ಉತ್ಪಾದಿಸಲು Sಣeಡಿiಟizeಜ ಕೋಕೋ ಪಿಟ್ ಅನ್ನು ಖರೀದಿಸಿ, ಉಪಯೋಗಿಸಿ ಸದರಿ ಬಿಲ್ಲುಗಳ ವಿವರವನ್ನು ವಹಿಗಳಲ್ಲಿ ನಿರ್ವಹಿಸುವುದು.

ರೈತರ ಹಿಂದಿನ ವರ್ಷದಲ್ಲಿ ಇಳುವರಿ ತೀರ ಕುಂಠಿತವಾಗಿದ್ದು, ಆರ್ಥಿಕವಾಗಿ ನಷ್ಟ  ಅನುಭವಿಸಿರುವುದರಿಂದ ಪ್ರಸಕ್ತ ಸಾಲಿಗೆ  ನರ್ಸರಿ ಮಾಲಿಕರು ಈ ಹಿಂದಿನ ಸಾಲಿನಂತಯೇ ರೈತರಿಗೆ ರೂ.40 ಪೈಸೆ ಧರದಲ್ಲಿಯೇ ಉತ್ತಮ ಗುಣಮಟ್ಟದ ಸಸಿಗಳನ್ನು ತಯಾರಿಸಿ ಪೂರೈಸಬೇಕು.

ಇದನ್ನೂ ಓದಿ : ಶಾಲಾ ಮಕ್ಕಳಿಂದ 2 ಲಕ್ಷ ಗಿಡ ನೆಡುವ ಹಸಿರು ರಕ್ಷಕ ಅಭಿಯಾನ: ಡಿಸಿಎಂ ಡಿಕೆ ಶಿವಕುಮಾರ್

ನರ್ಸರಿ ಮಾಲಿಕರು ಸಸಿಗಳನ್ನು ಉತ್ಪಾದಿಸುವ ಸಮಯದಲ್ಲಿ ರೈತರಿಂದ ಯಾವ ಕಂಪನಿಯ ಬೀಜ ಖರಿದಿಸಿರುತ್ತಾರೆ ಎಂಬುವುದರ ಬಗ್ಗೆ ಖತರಿಪಡಿಸಿಕೊಳ್ಳಲು ಬೀಜ ಖರಿದಿಸಿರುವ ಜಿ.ಎಸ್.ಟಿ ಸಂಖ್ಯೆ ಹೊಂದಿರುವ ಖಿಚಿx iಟಿvoiಛಿe ಬಿಲ್ಲುಗಳ ಜಿರಾಕ್ಸ್ ಪ್ರತಿಯನ್ನು ಪಡೆದ ನಂತರವೇ ತಮ್ಮ ನರ್ಸರಿಯಲ್ಲಿ ಬೀಜವನ್ನು ಸಸಿ ತಯಾರಿಸಲು ನಾಟಿಮಾಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News