Fraud Case: 8 ಮದುವೆ, ಸಾಲ ಕೊಡಿಸ್ತೀನಿ ಅಂತಾ 38 ಕೋಟಿ ವಂಚಿಸಿದ ನಕಲಿ JDS ಕಾರ್ಯಾಧ್ಯಕ್ಷೆ!

Bellary Fraud Case: ಖತರ್ನಾಕ್‌ ಲೇಡಿಯೊಬ್ಬಳು ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯಾಧ್ಯಕ್ಷೆ ಅಂತಾ ಹೇಳಿಕೊಂಡು ಹಲವರನ್ನು ಮದುವೆಯಾಗಿ ವಂಚಿಸಿದ ಪ್ರಕರಣ ಬಳ್ಳಾರಿಯಲ್ಲಿ ನಡೆದಿದೆ. 

Written by - Puttaraj K Alur | Last Updated : Aug 30, 2024, 07:58 PM IST
  • ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷೆ ಅಂತಾ ಹೇಳಿಕೊಂಡು ಹಲವರಿಗೆ ವಂಚನೆ
  • ಲೋನ್ ಕೊಡಿಸುವುದಾಗಿ ಕೋಟಿ ಕೋಟಿ ರೂ. ವಂಚಿಸಿರುವ ಮಹಿಳೆ
  • 8 ಮದುವೆಯಾಗಿ ಮೋಸ ಮಾಡಿದ ಖತರ್ನಾಕ್‌ ಲೇಡಿ ವಿರುದ್ಧ ಕೇಸ್
Fraud Case: 8 ಮದುವೆ, ಸಾಲ ಕೊಡಿಸ್ತೀನಿ ಅಂತಾ 38 ಕೋಟಿ ವಂಚಿಸಿದ ನಕಲಿ JDS ಕಾರ್ಯಾಧ್ಯಕ್ಷೆ! title=
ಖತರ್ನಾಕ್ ಲೇಡಿ ವಿರುದ್ಧ ಕೇಸ್!

Bellary Fraud Case: ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯಾಧ್ಯಕ್ಷೆ ಅಂತಾ ಹೇಳಿಕೊಂಡು 8 ಮದುವೆ ಆಗಿದ್ದೂ ಅಲ್ಲದೇ ಸಾಲ ಕೊಡಿಸುವುದಾಗಿ ಕೋಟ್ಯಂತರ ರೂ. ವಂಚಿಸಿದ್ದ ಖತರ್ನಾಕ್ ಲೇಡಿ ಸಿಕ್ಕಿಬಿದ್ದಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಉಡುಪಿ ನಿವಾಸಿ ತಬುಸುಮ್ ತಾಜ್ (40) 8 ಜನರನ್ನು ಮದುವೆಯಾಗಿ ವಂಚಿಸಿದ್ದಾಳೆಂದು ತಿಳಿದು ಬಂದಿದೆ.

ಮದುವೆಯಾಗಿ ಹೆಂಡತಿಯಿಂದ ಅಂತರ ಕಾಯ್ದುಕೊಂಡ ದುಡ್ಡಿದ್ದ ಗಂಡಸರೇ ತಬುಸುಮ್‌ನ ಟಾರ್ಗೆಟ್ ಆಗಿದ್ದರು. ಹೀನಾ ಎಂಟರ್‌ಪ್ರೈಸಸ್ ಹೆಸರಲ್ಲಿ ಕಚೇರಿ ತೆರೆದು ಮುದ್ರಾ ಲೋನ್, ಸರ್ಕಾರಿ ನೌಕರಿ, ಮೈನಾರಿಟಿ ಲೋನ್ ಮತ್ತು ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ಕೊಡಿಸುತ್ತೇನೆಂದು ಜನರನ್ನು ನಂಬಿಸುತ್ತಿದ್ದಳು.

ಇದನ್ನೂ ಓದಿ: ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಬಿಜೆಪಿ ಎಂದಿಗೂ ಅಧಿಕಾರಕ್ಕೆ ಬಂದಿಲ್ಲ: ಸಿಎಂ ಸಿದ್ದರಾಮಯ್ಯ

18 ವರ್ಷದಿಂದ ಕಚೇರಿ ನಡೆಸುತ್ತಿದ್ದ ತಬುಸುಮ್ ವಿಧಾನಸಭಾಧಕ್ಷ ಯು.ಟಿ.ಖಾದರ್ ಬಳಿ ಬ್ಲ್ಯಾಕ್ ಮನಿ ಇದೆ. ಅದನ್ನು ವೈಟ್ ಮಾಡಲು ಈ ಬ್ಯುಸಿನೆಸ್ ಮಾಡುತ್ತಿದ್ದೇವೆಂದು ಹೇಳಿಕೊಳ್ಳುತ್ತಿದ್ದಳಂತೆ. ಅದೇ ರೀತಿ 15 ಲಕ್ಷ ರೂ. ಕೊಟ್ಟರೆ 10 ದಿನದಲ್ಲಿ 1 ಕೋಟಿ ರೂ. ಸಾಲವನ್ನು ಬ್ಯಾಂಕ್‌ನಲ್ಲಿ ಕೊಡಿಸುತ್ತೇನೆಂದು ಹಲವರಿಗೆ ನಂಬಿಸಿ ವಂಚಿಸಿದ್ದಾಳೆಂದು ವರದಿಯಾಗಿದೆ. 

ರಾಜ್ಯದಾದ್ಯಂತ ಸಾವಿರಾರು ಜನರಿಗೆ 38 ಕೋಟಿ ರೂ.ಗೂ ಅಧಿಕ ಹಣವನ್ನು ಮೋಸ ಮಾಡಿದ್ದಾಳೆಂದು ತಿಳಿದು ಬಂದಿದೆ. ಕ್ರಿಮಿನಲ್ ಲಾಯರ್ ಮೂಲಕ ದುಡ್ಡು ವಾಪಸ್ ಕೇಳುವವರಿಗೆ ಈಕೆ ಕೇಸ್ ದಾಖಲಿಸುವ ಭಯ ಹುಟ್ಟಿಸುತ್ತಿದ್ದಳಂತೆ. ಇದಲ್ಲದೆ ಚೆಕ್ ಬರೆಸಿಕೊಂಡು ಚೆಕ್‌ಬೌನ್ಸ್ ಕೇಸ್ ದಾಖಲಿಸುವ ಬೆದರಿಕೆ ಹಾಕಿದ್ದಳೆಂದು ತಿಳಿದುಬಂದಿದೆ.

ಇದನ್ನೂ ಓದಿ: ʼದರ್ಶನ್ ತುಂಬಾ ಒಳ್ಳೆಯವರು.. ದೇವರು ಅವರನ್ನು ಕೈ ಬಿಡೋದಿಲ್ಲʼ-ನಟಿ ಮಾಲಾಶ್ರೀ   

ವಂಚನೆಯ ವಿಚಾರ ತಿಳಿದ ಮೇಲೆ 6ನೇ ಗಂಡ ರಾಜಾಹುಸೇನ್ ಈಕೆಯನ್ನು ಪ್ರಶ್ನಿಸಿದ್ದಾನೆ. ಆತನ ವಿರುದ್ಧವೂ ಕೇಸ್ ದಾಖಲಿಸುವ ಬೆದರಿಕೆ ಹಾಕಿದ್ದಳಂತೆ. ವಂಚಕಿ ತಬುಸುಮ್ ಮೇಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News