ಬೆಂಗಳೂರು : ಬೈಕ್ ನಿಯಂತ್ರಣ ತಪ್ಪಿ ಯುವತಿಯೊಬ್ಬಳು ರಸ್ತೆ ಪಕ್ಕದ ಡ್ರೈನೇಜ್‌ಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಗರದ ಹೆಚ್.ಬಿ.ಆರ್ ಲೇಔಟ್‌ನ ಅಶ್ವಥ್ ನಗರದಲ್ಲಿ ನಡೆದಿದೆ.
21 ವರ್ಷದ ತಾರಾ ಬಡಾಯಿಕ್ ಸಾವನ್ನಪ್ಪಿದ ದುರ್ದೈವಿ. ರಾತ್ರಿ 12-30 ರ ಸುಮಾರಿಗೆ ಡಿಯೊ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಪಕ್ಕದಲ್ಲಿದ್ದ ಡ್ರೈನೇಜ್‌ಗೆ ತಾರಾ ಬಿದ್ದಿದ್ದಾಳೆ. ಯುವತಿಯ ತೊಡೆಯಿಂದ ತೀವ್ರ ರಕ್ತ ಸ್ರಾವವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಹಿಂಬದಿಯಲ್ಲಿ 28 ವರ್ಷದ ದಿಲೀಪ್ ಎಂಬುವರು ಕುಳಿತಿದ್ದರಂತೆ. ಈ ಕುರಿತು ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 'ಮತ್ತೆ ನಾನೇ ಸಿಎಂ ಆಗ್ತೇನೆ, ನಮ್ಮ ಸರ್ಕಾರ ಬರುತ್ತೆ ಎನ್ನುವ ಭಯ'
ಕೆಲ ದಿನಗಳ ಹಿಂದಷ್ಟೇ ಧಾರಾಕಾರ ಮಳೆ ಸುರಿದ ಪರಿಣಾಮ ವಿದ್ಯುತ್ ಕಂಬ ಟಚ್ ಆಗಿ ಕರೆಂಟ್ ಶಾಕ್‌ನಿಂದ ಯುವತಿ ಅಖಿಲಾ ಎಂಬ ಯುವತಿ ಸಾವನ್ನಪ್ಪಿದ್ದಳು. ಘಟನೆಗೆ ವಿದ್ಯುತ್ ಕಂಬಗಳ ಸರಿಯಾದ ನಿರ್ವಹಣೆ ಆಗದಿರುವುದೇ ಕಾರಣ ಆರೋಪಿಸಲಾಗುತ್ತಿದೆ. ಇಷ್ಟಾದರೂ ಘಟನಾ ಸ್ಥಳಕ್ಕೆ ಬಿಬಿಎಂಪಿ,ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ವೈದೇಹಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.