ಬೆಂಗಳೂರು : ಹೊಸ ವರ್ಷಾಚರಣೆಗೆ ಬೆಂಗಳೂರು ಸಜ್ಜಾಗುತ್ತಿದೆ. ಆದರೆ, ರೂಪಾಂತರಿತ ಕರೋನಾ (Mutated Virus) ತಾಂಡವವಾಡುವ ಸಾಧ್ಯತೆ ಹೆಚ್ಚಿರುವುದರಿಂದ ಈ ಹೊಸ ವರ್ಷಾಚರಣೆಗೆ ಕಠಿಣ ನಿಯಮಗಳನ್ನು ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಯಿಂದಲೇ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲು ಆದೇಶಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಈ ಆದೇಶ ಹೊರಡಿಸಿದ್ದಾರೆ.
ಮಧ್ಯಾಹ್ನ 12 ಗಂಟೆಯಿಂದ ನಾಳೆ ಬೆಳಗ್ಗೆ ಆರು ಗಂಟೆಯ ತನಕ ನಿಷೇದಾಜ್ಞೆ (Section 144) ಜಾರಿಯಲ್ಲಿರಲಿದೆ. ನಿಮಗೆ ಗೊತ್ತಿರಲಿ, ಈ ಹಿಂದೆ ಆದೇಶ ಹೊರಡಿಸಿದ್ದ ಪೊಲೀಸ್ ಆಯುಕ್ತ ಕಮಲ್ ಪಂತ್, (Kamal Panth) ಡಿಸೆಂಬರ್ 31 ಸಂಜೆ ಆರು ಗಂಟೆ ಬಳಿಕ ನಿಷೇಧಾಜ್ಞೆ ಹೇರಲಾಗುವುದು ಎಂದು ಹೇಳಿದ್ದರು. ಈಗ ಪೊಲೀಸ್ ಇಲಾಖೆ ಹೊಸ ಆದೇಶ ಹೊರಡಿಸಿದ್ದು, ಆ ಪ್ರಕಾರ ಮಧ್ಯಾಹ್ನ 12 ಗಂಟೆಯಿಂದ ಬೆಂಗಳೂರಿನಲ್ಲಿ ಸೆಕ್ಸನ್ 144 ಅನ್ವಯ ನಿಷೇಧಾಜ್ಞೆ ಜಾರಿಗೆ ಬರಲಿದೆ.
ALSO READ New Year's Eve Party: ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್, Night curfew ಜಾರಿ
ಬೆಂಗಳೂರನ್ನು ಸಂಪರ್ಕಿಸುವ ಮೇಲ್ಸೇತುವೆಗಳು ಬಂದ್ :
ಈ ನಡುವೆ ವರ್ಷಾಚರಣೆ (New Year) ಮುನ್ನೆಚ್ಚರಿಕೆ ಕ್ರಮವಾಗಿ ಜಯನಗರ, ಮಲ್ಲೇಶ್ವರಂ, ಬನಶಂಕರಿ, ಪೀಣ್ಯ, ಹೆಬ್ಬಾಳ, ಇಂದಿರಾನಗರ, ಮಡಿವಾಳ, ಎಲೆಕ್ರಾನಿಕ್ ಸಿಟಿ, ಮೈಕೊಲೌಟ್, ಕೆಂಗೇರಿ, ಯಶವಂತಪುರ ಸೇರಿದಂತೆ ಬೆಂಗಳೂರನ್ನು ಸಂಪರ್ಕಿಸುವ ಹಲವು ಮೇಲ್ಸೇತುವೆಗಳನ್ನು ರಾತ್ರಿ ಹತ್ತು ಗಂಟೆಯಿಂದ ಬಂದ್ ಮಾಡಲಾಗುತ್ತದೆ. ಬೆಳಗ್ಗೆ 6 ಗಂಟೆಯ ತನಕ ಈ ಮೇಲ್ಸೇತುವೆಗಳನ್ನು ಮುಚ್ಚಲಾಗುತ್ತದೆ. ಹಾಗಾಗಿ, ರಾತ್ರಿ ವೇಳೆ ಬೆಂಗಳೂರಿನ (Bengaluru) ಹಲವೆಡೆ ಟ್ರಾಫಿಕ್ ಡೈವರ್ಶನ್ ಇರಲಿದೆ. ಬೆಂಗಳೂರಿಗರು ಇದನ್ನು ಅರಿತುಕೊಂಡು ಪ್ರಯಾಣ ಮಾಡುವುದು ಒಳ್ಳೆಯದು.
ಎಂ.ಜಿ. ರಸ್ತೆ ಸುತ್ತ ಮುತ್ತ ಸಂಚಾರ ನಿಷೇಧ :
ಇದೇ ವೇಳೆ, ಬ್ರಿಗೇಡ್ ರಸ್ತೆ, ಎಂಜಿ ರಸ್ತೆ, (M G Road) ಚರ್ಚ್ ಸ್ಟ್ರೀಟ್, ಕಸ್ತೂರ್ಬಾ ರಸ್ತೆ, ಕಬ್ಬನ್ ರಸ್ತೆ ಇಂದಿರಾ ನಗರ ಸುತ್ತಮುತ್ತ ಸಂಚಾರ ನಿಷೇಧಿಸಲಾಗುತ್ತಿದೆ. ರಾತ್ರಿ 11.45 ರಿಂದ 12 .30ರ ಒಳಗೆ ಎಲ್ಲಾ ಪಬ್, ಬಾರ್ ಮತ್ತು ರೆಸ್ಟೋರೆಂಟ್ ಗಳನ್ನುಮುಚ್ಚಲು ಆದೇಶಿಸಲಾಗಿದೆ.
ALSO READ : Corona Newstrain : ನೈಟ್ ಕರ್ಫ್ಯು ಬೇಕು ಎಂದ ಅಶೋಕ್, ಬೇಡ ಎಂದ ಸುಧಾಕರ್, ಗೊಂದಲದಲ್ಲಿ ಸರ್ಕಾರ
ಅಮಲಿನ ರಾತ್ರಿಗೂ ಬ್ರೇಕ್..!
ಮದ್ಯ ಮಾರಾಟ ಮತ್ತು ಸೇವನೆಗೆ ಅಬಕಾರಿ ಇಲಾಖೆಯೂ ಮಾರ್ಗ ಸೂಚಿ ಹೊರಡಿಸಿದೆ. ಎಂ ಆರ್ ಪಿ ಲೇಲೌಟ್ ಗಳು ರಾತ್ರಿ 10.30 ಬಂದ್ ಆಗಲಿವೆ. ಉಳಿದ ಮದ್ಯ ಮಾರಾಟಗಾರರಿಗೆ ರಾತ್ರಿ 11 ಗಂಟೆಯೊಳಗೆ ಅಂಗಡಿ ಮುಚ್ಚಲು ಹೇಳಲಾಗಿದೆ. ರಾತ್ರಿ 1 ಗಂಟೆಯ ತನಕ ಮದ್ಯ ಸೇವನೆಗೆ ಅವಕಾಶ ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.