ಗುಡ್ ನ್ಯೂಸ್: ಸಂಚಾರ ನಿಯಮ ಉಲ್ಲಂಘನೆ ದಂಡ ಇಳಿಕೆ! ಇಲ್ಲಿದೆ ವಿವರ...

ಸಂಚಾರ ನಿಯಮ ಉಲ್ಲಂಘನೆಯ ನೂತನ ದಂಡದ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಅದರಂತೆ ಹೆಲ್ಮೆಟ್ ಧರಿಸದಿದ್ರೆ 500 ರೂ., ಸೀಟ್ ಬೆಲ್ಟ್ ಧರಿಸದಿದ್ದರೆ 500 ರೂ., ಸುರಕ್ಷತಾ ಕ್ರಮ ಅನುಸರಿಸದಿದ್ದರೆ 500 ರೂ. ನಿಗದಿ ದಂಡವನ್ನು ನಿಗದಿ ಮಾಡಿದೆ.

Last Updated : Sep 22, 2019, 06:17 AM IST
ಗುಡ್ ನ್ಯೂಸ್: ಸಂಚಾರ ನಿಯಮ ಉಲ್ಲಂಘನೆ ದಂಡ ಇಳಿಕೆ! ಇಲ್ಲಿದೆ ವಿವರ... title=

ಬೆಂಗಳೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ಸಚಾರ ನಿಯಮ ಉಲ್ಲಂಘನೆಯ ಪರಿಷ್ಕೃತ ದಂಡವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದ್ದು, ಈ ಹಿಂದೆ ಇದ್ದ ದುಬಾರು ದಂಡ ಶುಲ್ಕವನ್ನು ಇಳಿಕೆ ಮಾಡಿದೆ. 

ಸಂಚಾರ ನಿಯಮ ಉಲ್ಲಂಘನೆಯ ನೂತನ ದಂಡದ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಅದರಂತೆ ಹೆಲ್ಮೆಟ್ ಧರಿಸದಿದ್ರೆ 500 ರೂ., ಸೀಟ್ ಬೆಲ್ಟ್ ಧರಿಸದಿದ್ದರೆ 500 ರೂ., ಸುರಕ್ಷತಾ ಕ್ರಮ ಅನುಸರಿಸದಿದ್ದರೆ 500 ರೂ., ರಸ್ತೆ ನಿಯಮ ಉಲ್ಲಂಘನೆಗೆ 1000 ರೂ,  ಅನಧಿಕೃತ ವ್ಯಕ್ತಿ ಚಾಲನೆ(ಬೈಕ್, ತ್ರಿಚಕ್ರ)-1000 ರೂ., ಆಂಬುಲೆನ್ಸ್​ಗೆ ಅಡ್ಡಿ ಮಾಡಿದರೆ 1,000 ರೂ., ಲೈಸೆನ್ಸ್ ಹೊಂದಿರದಿದ್ದರೆ 1,000 ರೂ. ದಂಡ ಶುಲ್ಕ ನಿಗದಿ ಮಾಡಿದೆ.

ಇನ್ಶೂರೆನ್ಸ್ ಹೊಂದಿರದಿದ್ದರೆ ಬೈಕ್, ಆಟೋಗೆ 2000 ರೂ. ಮತ್ತು ಕಾರು, ಜೀಪ್ ಗೆ 3000ರೂ.,  ಅತಿವೇಗ ಚಾಲನೆ-ಬೈಕ್, ತ್ರಿಚಕ್ರ ವಾಹನಕ್ಕೆ1,500 ರೂ., ಕಾರು, ಜೀಪ್ ಗೆ 3000 ರೂ., ಭಾರಿ ವಾಹನಕ್ಕೆ 5000 ರೂ., ಇನ್ಶೂರೆನ್ಸ್ ರಹಿತ ಭಾರಿ ವಾಹನಕ್ಕೆ 5000 ರೂ. ಅನಧಿಕೃತ ವ್ಯಕ್ತಿ ಚಾಲನೆ-ಭಾರಿ ವಾಹನಕ್ಕೆ 5000 ರೂ., ನೋಂದಣಿರಹಿತ ಬೈಕ್, ತ್ರಿಚಕ್ರ ವಾಹನ ಚಾಲನೆಗೆ 2000 ರೂ., ಕಾರು, ಜೀಪ್ ಚಾಲನೆಗೆ 3000 ರೂ., ಭಾರಿ ವಾಹನ ಚಾಲನೆಗೆ 5000 ರೂ. ದಂಡ ಶುಲ್ಕ ನಿಗದಿ ಮಾಡಿ ರಾಜ್ಯ ಸರ್ಕಾರ ಪಟ್ಟಿ ಬಿಡುಗಡೆ ಮಾಡಿದೆ. 

ಮೋಟಾರು ವಾಹನಗಳ ಕಾಯ್ದೆ ಅನ್ವಯ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುತ್ತಿದ್ದ ದಂಡವನ್ನು ಹೆಚ್ಚಿಸಿ ಕೇಂದ್ರ ಸರ್ಕಾರ ಸೆಪ್ಟೆಂಬರ್ 1 ರಿಂದ ಪರಿಷ್ಕೃತ ದರವನ್ನು ಜಾರಿಗೆ ತಂದಿತ್ತು. ಈ ದುಬಾರಿ ದಂಡಕ್ಕೆ ರಾಜ್ಯದಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

Trending News