'ಪಕ್ಷ ತೊರೆದು ಬಂದ ನಮ್ಮ ಮಿತ್ರರಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ'

'ಕೊಟ್ಟ ಮಾತಿನಂತೆ ಸಿಎಂ ಮತ್ತು ಪಕ್ಷದವರು ನಡೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ'

Last Updated : Nov 21, 2020, 02:54 PM IST
  • 'ಕೊಟ್ಟ ಮಾತಿನಂತೆ ಸಿಎಂ ಮತ್ತು ಪಕ್ಷದವರು ನಡೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ'
  • 'ವಿಧಾನಸಭೆ ಉಪ ಚುನಾವಣೆಯಲ್ಲಿ ಸೋತವರು ಈಗಾಗಲೇ ಎಂಎಲ್‌ಸಿಗಳಾಗಿಲ್ವಾ?
  • ರಮೇಶ ಜಾರಕಿಹೊಳಿ ದೆಹಲಿಗೆ ಹೋಗುವುದು ಅಪರೂಪ ಏನಲ್ಲ
'ಪಕ್ಷ ತೊರೆದು ಬಂದ ನಮ್ಮ ಮಿತ್ರರಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ' title=

ಬೆಳಗಾವಿ: 'ಕೊಟ್ಟ ಮಾತಿನಂತೆ ನಡೆದುಕೊಳ್ಳುವೆ ಎಂದು ಮುಖ್ಯಮಂತ್ರಿ ಹಲವು ಬಾರಿ ಹೇಳಿದ್ದಾರೆ. ಆ ಪ್ರಕಾರ, ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಬಂದಿರುವ ನಮ್ಮ ಮಿತ್ರರಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ' ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ ಹೇಳಿದರು.

ನಗರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಡಾ.ಕೆ. ಸುಧಾಕರ(Dr.K. Sudhakar), 'ಕೊಟ್ಟ ಮಾತಿನಂತೆ ಸಿಎಂ ಮತ್ತು ಪಕ್ಷದವರು ನಡೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ' ಎಂದು ಪ್ರತಿಕ್ರಿಯಿಸಿದರು.

ಗ್ರಾ.ಪಂ ಚುನಾವಣೆ ಗೆಲ್ಲಲು ಬಿಜೆಪಿಯಿಂದ 'ಪಂಚರತ್ನ' ಸೂತ್ರ..!

'ವಿಧಾನಸಭೆ ಉಪ ಚುನಾವಣೆಯಲ್ಲಿ ಸೋತವರು ಈಗಾಗಲೇ ಎಂಎಲ್‌ಸಿಗಳಾಗಿಲ್ವಾ? ಖಂಡಿತವಾಗಿ ಸಚಿವ ಸ್ಥಾನವನ್ನೂ ನೀಡುತ್ತಾರೆ. ರಾಜಕೀಯದಲ್ಲಿ ಮಾತಿನಂತೆ ನಡೆಯುವ ಪ್ರವೃತ್ತಿ ಇಟ್ಟುಕೊಂಡಿದ್ದರೆ ಅದು ಬಿಜೆಪಿಯಲ್ಲಿ ಮಾತ್ರ' ಎಂದರು. 'ವಿಧಾನ ಪರಿಷತ್ ಸದಸ್ಯ ಎ.ಎಚ್. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸಿಗುತ್ತದೆಯೋ, ಇಲ್ಲವೋ ಎಂಬ ಬಗ್ಗೆ ಈಗಲೇ ನಿರ್ಧಾರಕ್ಕೆ ಬರಬೇಕೇಕೆ? ಕಾದು‌ ನೋಡೋಣ' ಎಂದರು.

BREAKING NEWS: ಡಿಕೆಶಿಗೆ ಮತ್ತೆ ಶುರುವಾಯ್ತು ಕಂಟಕ: ಸಿಬಿಐಯಿಂದ ಸಮನ್ಸ್ ಜಾರಿ..!

'ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿ ಆಗುವುದು ಅಪರಾಧವೇ? ರಮೇಶ ಜಾರಕಿಹೊಳಿ ದೆಹಲಿಗೆ ಹೋಗುವುದು ಅಪರೂಪ ಏನಲ್ಲ. ಆಗಾಗ ಹೋಗುತ್ತಲೇ ಇರುತ್ತಾರೆ. ಇಲಾಖೆಯ ಕೆಲಸಗಳು ಮತ್ತು ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಸಚಿವರು ಮೊದಲಾದವರ ಭೇಟಿಗೆ ಹೋಗುತ್ತಿರುತ್ತಾರೆ. ಇದರಲ್ಲಿ ರಾಜಕಾರಣದ ಸಂಗತಿಗಳು ಇರುವುದಿಲ್ಲ' ಎಂದು ಸಮರ್ಥಿಸಿಕೊಂಡರು.

ಮಾಜಿ ಸಚಿವೆ, ನಟಿ ಉಮಾಶ್ರೀ ಅವರ ಇನ್ನೋವಾ ಕಾರು ಅಪಘಾತ: ಇಬ್ಬರು ಸ್ಥಳದಲ್ಲೇ ಮೃತ

Trending News