ಬೆಂಗಳೂರು : Karnataka rain Alert : ಅಂತೂ ರಾಜ್ಯಕ್ಕೆ ವರುಣ ಕಾಲಿಟ್ಟಿದ್ದಾನೆ. ಮಳೆ ಆರಂಭವಾಗುತ್ತಿದ್ದ ಹಾಗೆ ಕೆಲವೊಂದು ಅನಾಹುತಗಳು ಕೂಡಾ ಸಂಭವಿಸಿವೆ. ಇದೀಗ ಮುಂದಿನ 48 ಗಂಟೆಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ (Heavy rain alert). ಗುಡುಗು,ಮಿಂಚು, ಬಿರುಗಾಳಿ ಸಹಿತ ಮಳೆ ಹಿನ್ನೆಲೆಯಲ್ಲಿ 18 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬಿರುಗಾಳಿ ಸಹಿತ ಮಳೆ :
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು,ಬಿರುಗಾಳಿ ಸಹಿತ ಮಳೆಯ ಮನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ಈ ನಿಟ್ಟಿನಲ್ಲಿ ಕೆಲವು ಜಿಲ್ಲೆಗಳಲ್ಲಿ ಅಲರ್ಟ್ ಘೋಶಿಸಲಾಗಿದೆ.
ಇದನ್ನೂ ಓದಿ : Karnataka SSLC Result 2024: ಹೇಗಿತ್ತು ಈ ಹಿಂದೆ ಈ ಜಿಲ್ಲೆಗಳ ಶೇಕಡಾವಾರು ಉತ್ತೀರ್ಣ ಫಲಿತಾಂಶ..?
ಒಂದು ವಾರ ಬಿಡದೇ ಸುರಿಯಲಿದೆ ಮಳೆ :
ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಧಿಕ ಮಳೆಯಾಗುವ ಸೂಚನೆ ನೀಡಲಾಗಿದೆ
(Bengaluru Rain Updates).ಸತತ ಏಳು ದಿನ ಬಿಡದೇ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅದರಲ್ಲಿಯೂ ಮೇ 13 ಹಾಗೂ 14ರಂದು ರಾಜ್ಯಾದ್ಯಂತ ಹೆಚ್ಚಿನ ಪ್ರಮಾಣದ ಮಳೆಯಾಗಲಿದೆ ಎಂದು ಹೇಳಲಾಗಿದೆ.
ಬೀಸಲಿದೆ ಭಾರೀ ಬಿರುಗಾಳಿ :
ಇಂದು ಕೊಡಗು, ಮೈಸೂರು, ಮಂಡ್ಯ,ಚಾಮರಾಜನಗರ ಸೇರಿದಂತೆ ಕೆಲ ಸ್ಥಳಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ.ತುಮಕೂರು, ಬೀದರ್, ಕಲಬುರಗಿ, ರಾಯಚೂರು ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀಟರ್ ವೇಗದಲ್ಲಿ ಬಿರುಗಾಳಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇದನ್ನೂ ಓದಿ : Shivamogga Crime News: ಶಿವಮೊಗ್ಗದಲ್ಲಿ ಹಾಡಹಗಲೇ ಗ್ಯಾಂಗ್ ವಾರ್... ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ
ಯಲ್ಲೋ ಅಲರ್ಟ್ :
ಇನ್ನು ಗುಡುಗು ,ಮಿಂಚು, ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಒಳನಾಡು ಜಿಲ್ಲೆಗಳು ಸೇರಿ 18 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ (yellow Alert) ಘೋಷಿಸಲಾಗಿದೆ.
ಭಾರೀ ಮಳೆಗೆ ನೆಲಕ್ಕುರುಳಿದ 150ಕ್ಕೂ ಅಧಿಕ ಮರ :
ಒಂದು ಕಡೆ ಮಳೆಯಿಂದ ನಿಟ್ಟುಸಿರು ಬಿಡುವಂತಾದರೂ ಮತ್ತೊಂದು ಕಡೆ ಮಳೆ ಭಾರೀ ಆವಾಂತರ ಸೃಷ್ಟಿಸಿದೆ. ಬೆಂಗಳೂರಿನಲ್ಲಿ ಮಳೆಯ ಪರಿಣಾಮ 150ಕ್ಕೂ ಅಧಿಕ ಮರ ಧರೆಗುರುಳಿದೆ. ಸಂಜೆ ಆರಂಭವಾದ ಮಳೆ ಎಫೆಕ್ಟ್ ನಿಂದ 10/15 ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ನಿನ್ನೆ ಒಂದೇ ದಿನ ಬೆಸ್ಕಾಂ ಸಹಾಯವಾಣಿಗೆ 8 ಸಾವಿರಕ್ಕೂ ಅಧಿಕ ಕರೆ ಬಂದಿದೆ.
ಎಲ್ಲೆಲ್ಲಿ ಎಷ್ಟು ಮರಗಳು ಬಿದ್ದಿವೆ :
ಆರ್‌ಆರ್‌ನಗರದಲ್ಲಿ 70
ಪಶ್ಚಿಮ ವಲಯ 30
ಪೂರ್ವ ವಲಯ 24
ದಕ್ಷಿಣ ವಲಯ 16
ಯಲಹಂಕ 7
ದಾಸರಹಳ್ಳಿ 3
ಬೊಮ್ಮನಹಳ್ಳಿ 2
ಮಳೆಯ ಆರ್ಭಟಕ್ಕೆ ಜಲಾವೃತ ಆಗಿದ್ದ ಪ್ರದೇಶಗಳು:
ಹೆಬ್ಬಾಳ ಸರ್ಕಲ್
ಜಯಮಹಲ್ ರಸ್ತೆ
ಉದಯ ಟಿವಿ ಜಂಕ್ಷನ್
ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆ (ಯಲಹಂಕ)
ಕೆ.ಆರ್ ಮಾರುಕಟ್ಟೆ
ಟಿನ್ ಫ್ಯಾಕ್ಟರಿ
ನಾಯಂಡಹಳ್ಳಿ
ಬೆನ್ನಿಗನಹಳ್ಳಿ ರೈಲ್ವೆ ಕೆಳಸೇತುವೆ
SJP ರಸ್ತೆ (ಟೌನ್ ಹಾಲ್ ಹತ್ತಿರ)
ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ
ಮೈಸೂರು ರಸ್ತೆ
ರಾಮಮೂರ್ತಿ ನಗರ
ಹೊರಮಾವು ಕೆಳಸೇತುವೆ
ಹೊರ ವರ್ತುಲ ರಸ್ತೆ
ಕಂಟೋನ್ಮೆಂಟ್ ರೈಲ್ವೆ ಕೆಳಸೇತುವೆ
ವಡ್ಡರಪಾಳ್ಯ ಜಂಕ್ಷನ್
NGEF ಸಿಗ್ನಲ್
ಹೆಬ್ಬಾಳ ಮೇಲ್ಸೇತುವೆ ಡೌನ್-ರಾಂಪ್
ಇದನ್ನೂ ಓದಿ : ಧಾರವಾಡದ ನೂತನ ಐಐಐಟಿ ನಿರ್ದೇಶಕರಾಗಿ ಪ್ರೊ ಎಸ್.ಆರ್.ಮಹಾದೇವ ಪ್ರಸನ್ನ ನೇಮಕ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.