ರಾಜ್ಯದ ಜಲಾಶಯದ ಸ್ಥಿತಿಗತಿಗಳನ್ನು ಕಣ್ಣಾರೆ ನೋಡಿ ಬನ್ನಿ: ರಜನಿಗೆ ಹೆಚ್ಡಿಕೆ

ರಾಜ್ಯದಲ್ಲಿನ ಜಲಾಶಯಗಳ ಸ್ಥಿತಿಗತಿಯನ್ನು ಅರಿಯುವ ಸಲುವಾಗಿ ಕರ್ನಾಟಕಕ್ಕೇ ಒಮ್ಮೆ ಭೇಟಿ ಕೊಡಿ ಎಂದು ನಾನು ರಜನೀಕಾಂತ್ ಅವರನ್ನು ಆಹ್ವಾನಿಸಿದ್ದೇನೆ.

Last Updated : May 21, 2018, 06:25 PM IST
ರಾಜ್ಯದ ಜಲಾಶಯದ ಸ್ಥಿತಿಗತಿಗಳನ್ನು ಕಣ್ಣಾರೆ ನೋಡಿ ಬನ್ನಿ: ರಜನಿಗೆ ಹೆಚ್ಡಿಕೆ  title=
Pic: ANI

ಬೆಂಗಳೂರು: ತಮಿಳು ನಾಡಿಗೆ ಕಾವೇರಿ ನೀರನ್ನು ಬಿಡುಗಡೆ  ಮಾಡುವಂತೆ ಒತ್ತಾಯಿಸಿರುವ ತಮಿಳು ಸೂಪರ್‌ಸ್ಟಾರ್‌ ರಜನೀಕಾಂತ್‌ ಗೆ ಪ್ರತಿಕ್ರಿಯೆಯಾಗಿ ರಾಜ್ಯದಲ್ಲಿನ ಜಲಾಶಯಗಳ ಸ್ಥಿತಿಗತಿಯನ್ನು ಕಣ್ಣಾರೆ ಕಂಡು ನಿಜ ಪರಿಸ್ಥಿತಿಯನ್ನು ಅರಿತುಕೊಳ್ಳುವ ಸಲುವಾಗಿ ಕರ್ನಾಟಕಕ್ಕೆ ಭೇಟಿ ನೀಡುವಂತೆ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರಜನೀಕಾಂತ್ ಅವರನ್ನು ಆಹ್ವಾನಿಸಿದ್ದಾರೆ. 

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಡಿಕೆ, ರಜನಿಕಾಂತ್ ಕಾವೇರಿ ನದಿಯ ನೀರಿನಲ್ಲಿ ತಮಿಳುನಾಡಿನ ಪಾಲನ್ನು ಬಿಡುಗಡೆ ಮಾಡಲು ಹೊಸ ಕರ್ನಾಟಕ ಸರ್ಕಾರವನ್ನು ಕೋರಿದ್ದಾರೆ. ರಾಜ್ಯದಲ್ಲಿನ ಜಲಾಶಯಗಳ ಸ್ಥಿತಿಗತಿಯನ್ನು ಅರಿಯುವ ಸಲುವಾಗಿ ಕರ್ನಾಟಕಕ್ಕೇ ಒಮ್ಮೆ ಭೇಟಿ ಕೊಡಿ ಎಂದು ನಾನು ರಜನೀಕಾಂತ್ ಅವರನ್ನು ಆಹ್ವಾನಿಸಿದ್ದೇನೆ. ರಜನೀಕಾಂತ್‌ ಅವರು ಕರ್ನಾಟಕಕ್ಕೆ ಭೇಟಿಕೊಟ್ಟು ಇಲ್ಲಿನ ಜಲಾಶಯಗಳ ಸ್ಥಿತಿಗತಿಯನ್ನು ಕಣ್ಣಾರೆ ಕಂಡರೆ ಅವರಿಗೆ ನಿಜಸ್ಥಿತಿಯ ಅರಿವಾಗುತ್ತದೆ ಎಂದು ಹೆಚ್ಡಿಕೆ ಹೇಳಿದರು.

Trending News