ಬೆಂಗಳೂರು: ನನ್ನ ಕಣ್ಣ ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರುವುದು ಸತ್ಯ. ಕುಮಾರಸ್ವಾಮಿ ಅವರು ಮತ್ತೆ ಸಿಎಂ ಆಗಿಯೇ ಆಗುತ್ತಾರೆ. ಇದು ನಡೆದೇ ನಡೆಯುತ್ತದೆ, ಯಾರಿಗೂ ಸಂಶಯ ಬೇಡ ಎಂದು ಮಾಜಿ ಪ್ರಧಾನಿಗಳು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು ಭವಿಷ್ಯ ನುಡಿದರು.
ಇದನ್ನೂ ಓದಿ: ಯಾರದ್ದೋ ಲವ್ ಸ್ಟೋರಿ, ಇನ್ಯಾರದ್ದೋ ಮೇಲಿನ ದ್ವೇಷ : ಬಲಿಯಾಗಿದ್ದು ಅಮಾಯಕ..!
ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಜೆಡಿಎಸ್ ಪಕ್ಷದವತಿಯಿಂದ ಇಂದು ಹಮ್ಮಿಕೊಂಡಿದ್ದ ʼಜನತಾ ಮಿತ್ರʼ ಸಮಾರೋಪ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ನನಗೆ ಇನ್ನೂ ಹೋರಾಟ ಮಾಡುವ ಶಕ್ತಿ ಇದೆ. ಕೊನೆಯವರೆಗೂ ರಾಜ್ಯದ ನೆಲ, ಜಲದ ವಿಷಯದಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ. ರಾಜ್ಯದಲ್ಲಿ ಪಕ್ಷ ಉಳಿಯುವುದರ ಜತೆಗೆ ಬೆಳೆಯಲಿದೆ. ಯಾರು ಏನೂ ಮಾಡಲಾರರು ಎಂದು ಜೆಡಿಎಸ್ ಕುರಿತು ಕೇವಲವಾಗಿ ಮಾತನಾಡುವವರಿಗೆ ಗೌಡರು ತಿರುಗೇಟು ನೀಡಿದರು.
ಪಕ್ಷವನ್ನು ಉಳಿಸಿ, ಬೆಳೆಸುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಕ್ಷವನ್ನು ಉಳಿಸಲು ಹತ್ತು ವರ್ಷಗಳಿಂದ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಅದರ ಶ್ರಮ ಏನೆಂಬುದು ನನಗೆ ಗೊತ್ತು. ಅದರ ಹಿಂದಿನ ವಿಚಾರಗಳನ್ನು ಮಾತನಾಡಲು ನಾನು ಇಷ್ಟಪಡುವುದಿಲ್ಲ. ನನ್ನ ಆರೋಗ್ಯ ಇನ್ನು ಸ್ವಲ್ಪ ಚೇತರಿಸಿಕೊಳ್ಳಬೇಕು. ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಲಿದ್ದೇನೆ. ಇದೇ ತಿಂಗಳು 18ರಂದು ಪಕ್ಷದ ಕಾರ್ಯಕಾರಿ ಸಭೆ ಇದ್ದು, ಅದರಲ್ಲಿ ಭಾಗಿಯಾಗುತ್ತೇನೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಬ್ಯಾಟ್ ಹಿಡಿದು ಬೆವರಿಳಿಸಿದ ಜಾನ್ವಿ ಕಪೂರ್ : ಟಿ-20 ವಿಶ್ವಕಪ್‌ಗೆ ಇವಳೇ ಭರವಸೆ..!
ಯಾವುದೇ ಒಂದು ಸಮಾಜಕ್ಕೆ ನೋವಾಗಲು ಬಿಡುವುದಿಲ್ಲ. ಅಲ್ಲದೇ, ಮಾತುಕೊಟ್ಟ ಮೇಲೆ ಅದನ್ನು ಕಾರ್ಯಗತ ಮಾಡಲೇಬೇಕು. ಅದಕ್ಕೆ ನಾವು ಬದ್ಧವಾಗಿರುತ್ತೇವೆ. ಮುಸ್ಲಿಮರಿಗೆ ಮೀಸಲಾತಿ ನೀಡುತ್ತೇವೆ ಎಂದು ಹೇಳಿರಲಿಲ್ಲ. ಆದರೂ ನಮ್ಮ ಸರ್ಕಾರ ಅದನ್ನು ಮಾಡಿದೆ. ಅಲ್ಲದೇ, ಮುಸ್ಲಿಂ ಸಮುದಾಯಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದು, ರೆಸಿಡೆನ್ಸಿ ಶಾಲೆಗಳನ್ನು ನೀಡಿದವರು ಯಾರು ಎಂಬುದನ್ನು ಎಲ್ಲರೂ ನೆನಪಿಸಿಕೊಳ್ಳಬೇಕು. ಐದು ರೆಸಿಡೆನ್ಸಿ ಶಾಲೆಗಳನ್ನು ನೀಡುವ ತೀರ್ಮಾನ ಮಾಡಿದ್ದು ನಾನು ಎಂದರು.
ರಾಜಕಾರಣದಲ್ಲಿ ಪ್ರತಿ ಹಂತದಲ್ಲಿಯೂ ಹೋರಾಟ ಮಾಡಿದ್ದೇನೆ. ಮುಖ್ಯಮಂತ್ರಿ ಆಗಬೇಕಾದರೂ ಹೋರಾಟ ಮಾಡಬೇಕಾಯಿತು. 90ರ ದಶಕದಲ್ಲಿ ಪಕ್ಷದಿಂದ ಹೊರಗೆ ಬಂದ ಮೇಳೆ ಏಕಾಂಗಿ ಹೋರಾಟ ನಡೆಸಿ ಸನ್ಮಿತ್ರರ ಜೊತೆ ಪಕ್ಷವನ್ನು ಕಟ್ಟಿದ್ದೇನೆ. ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯದಲ್ಲಿ ಪಕ್ಷಕ್ಕೆ 16 ಲೋಕಸಭಾ ಸ್ಥಾನ ಬಂತು. ಅಷ್ಟು ಸ್ಥಾನಗಳಿಸುವುದು ಅಷ್ಟು ಸುಲಭವಾಗಿರಲಿಲ್ಲ ಎಂದ ಹೇಳಿದ ಅವರು, ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಕೆಲವರು ಒಂದೊಂದು ರೀತಿಯ ಹೇಳಿಕೆ ನೀಡಿದರು.
ನಾನು ಇನ್ನೂ ಇದ್ದೇನೆಂದು ತೋರಿಸಲು ಇಲ್ಲಿ ಕರೆದುಕೊಂಡು ಬಂದಿದ್ದಾರೆ ಎಂಬ ಭಾವನೆ ಬೇಡ. ಇನ್ನು ಹೋರಾಟ ಮಾಡುವೆ. ನಾವು, ನೀವೆಲ್ಲರೂ ಸೇರಿ ಈ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದು ಕರೆ ನೀಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.