ಬೆಂಗಳೂರು : ಮಾಜಿ ಸಚಿವ, ಗಣಿ ಉದ್ಯಮಿ ಗಾಲಿ ಜನಾರ್ಧನ ರೆಡ್ಡಿ ಅವರು ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದಾರೆ. ನೂತನ ಪಕ್ಷಕ್ಕೆ ʼಕಲ್ಯಾಣ ರಾಜ್ಯ ಪ್ರಗತಿ ಪಕ್ಷʼ ಎಂದು ಹೆಸರಿಟ್ಟಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಜನಾರ್ಧನ ರೆಡ್ಡಿ ಪಕ್ಷ ಟಕ್ಕರ್ ನೀಡಲಿದೆ. ಕೊಪ್ಪಳ, ಗದಗ, ರಾಯಚೂರು, ಬಳ್ಳಾರಿ, ಯಾದಗಿರಿ ಬಿಜಾಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಈ ಪಕ್ಷ ಪ್ರಾಬಲ್ಯ ಸಾಧಿಸುವ ಸಾಧ್ಯತೆ ಇದೆ. ಹೊಸ ಪಕ್ಷ ಉದಯವಾದ ಹಿನ್ನೆಲೆ ಉತ್ತರ ಕರ್ನಾಟಕ ಭಾಗದ ಬಿಜೆಪಿ ಮತಗಳಿಗೆ ಹೊಡೆತ ಬಿಳುವ ಸಾಧ್ಯತೆ ಇದೆ.
ಹೌದು.. ಜನಾರ್ದನ ರೆಡ್ಡಿ ಅವರು ತಮ್ಮ ನೂತನ ಪಕ್ಷದ ಹೆಸರು ಘೋಷಿಸಿದ್ದಾರೆ. ಅಲ್ಲದೆ ಕರ್ನಾಟಕ ರಾಜ್ಯದ ಅಭಿವೃದ್ಧಿಯ ಮೂಲ ಮಂತ್ರ ಜಪಿಸಿದ್ದಾರೆ. ರಾಜ್ಯಾದ್ಯಂತ ಹೊಸ ಪಕ್ಷವನ್ನು ಸಂಘಟನೆಗೆ ಮುಂದಾಗುತ್ತೇನೆ ಎಂದು ತಿಳಿದ್ದಾರೆ. ಅಲ್ಲದೆ, ಸರ್ಕಾರ ನನ್ನನ್ನು ಹಿಂದೆಯೂ ಟಾರ್ಗೆಟ್ ಮಾಡಿತ್ತು, ಮುಂದೆಯೂ ಮಾಡಲಿದೆ ಎಂದು ಹೇಳುವ ಮೂಲಕ ಬಿಜೆಪಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ.
ಇದನ್ನೂ ಓದಿ: Janardhana Reddy: ಹೊಸ ರಾಜಕೀಯ ಪಕ್ಷ ಘೋಷಿಸಿದ ಮಾಜಿ ಸಚಿವ ಜನಾರ್ದನ ರೆಡ್ಡಿ
ಇನ್ನು ಕೆಲವೇ ದಿನಗಳಲ್ಲಿ ಜನಾರ್ಧನ ರೆಡ್ಡಿ ಪಕ್ಷದ ಪ್ರಣಾಳಿಕೆ, ಬಾವುಟ, ಕಾರ್ಯಾಲಯ, ಅಭ್ಯರ್ಥಿ ಘೋಷಣೆಯಾಗಲಿದ್ದು, ಉತ್ತಕ ಕರ್ನಾಟಕದ ಭಾಗದಲ್ಲಿನ ಬಿಜೆಪಿ ಮತಗಳ ಮೇಲೆ ರೆಡ್ಡಿ ಪಕ್ಷ ಪರಿಣಾಮಕಾರಿಯಾದ ಹೊಡೆತ ನೀಡಲಿದೆ. ಅಲ್ಲದೆ, ಜರ್ನಾರ್ಧನ ರೆಡ್ಡಿಯವರು ಗಂಗಾವತಿ ಕ್ಷೇತ್ರದಿಂದ ಸ್ಫರ್ಧೆ ಮಾಡುವ ವಿಚಾರವನ್ನು ಬಹಿರಂಗ ಪಡಿಸಿದ್ದು, ಸ್ಥಳಿಯ ಅಭ್ಯರ್ಥಿಗಳಾದ ಹಾಲಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಶಾಸಕ ಇಕ್ಬಾಲ್ ಅನ್ಸಾರಿಗೆ ನಡುಕ ಶುರುವಾಗಿದೆ.
ಅಲ್ಲದೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿ ಜನಾರ್ದನ ರೆಡ್ಡಿಯವರು ಅಭಿಮಾನಿ ಬಳಗ ಹೊಂದಿದ್ದಾರೆ. ಈಗಾಗಲೆ ಹಲವು ಸಮುದಾಯದ ಮುಖಂಡರ ಜೊತೆ ಸಭೆ ರೆಡ್ಡಿ ಸಭೆ ನಡೆಸಿದ್ದಾರೆ. ರೆಡ್ಡಿ ವರ್ಚಸ್ಸಿನಿಂದಲೇ ಕಲ್ಯಾಣ ಭಾಗದ ಕ್ಷೇತ್ರಗಳ ಅಭ್ಯರ್ಥಿಗಳು ಸುಲಭವಾಗಿ ಗೆಲವು ಸಾಧಿಸಬಹುದಾಗಿದೆ. ಅಲ್ಲದೆ, ಈಗಾಗಲೇ ವೋಟರ್ ಲಿಸ್ಟ್ನಲ್ಲೂ ಹೆಸರು ಸೇರಿಸಿಕೊಂಡಿದ್ದೇನೆ. ಗಾಲಿ ಜನಾರ್ಧನ ರೆಡ್ಡಿ ಏನು ಅಂತಾ ಎಲ್ಲರಿಗೂ ಗೊತ್ತಿದೆ. ರೆಡ್ಡಿ, ಅಡ್ಜಸ್ಟ್ಮೆಂಟ್ ಮಾಡಿಕೊಳ್ಳುವ ವ್ಯಕ್ತಿ ಅಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿ ಜೊತೆ ಸಂಧಾನ ಮಾಡಿಕೊಳ್ಳುವುದಿಲ್ಲ ಎಂದು ಜನಾರ್ಧನ ರೆಡ್ಡಿ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.