ಬೆಂಗಳೂರು: ಉಡುಪಿಯ ಪ್ರತಿಷ್ಠಿತ ಖಾಸಗಿ ಕಾಲೇಜಿನ ಶೌಚಗೃಹದಲ್ಲಿ ಹಿಂದೂ ಹುಡುಗಿಯರ ವಿಡಿಯೋ ಸೆರೆಹಿಡಿದ ವಿವಾದ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಸಿಎಂ ಸಿದ್ದರಾಮಯ್ಯನವೇ, #UdupiHorror ಘಟನೆಯ ಸಾಕ್ಷಿ ನಾಶಗೊಳಿಸಿ, ಆ ಪ್ರಕರಣವನ್ನೇ ತಿರುಚುವ ನಿಮ್ಮ ಹೀನ ಮನಸ್ಥಿತಿಯನ್ನು ಬಹಿರಂಗವಾಗಿ ಪ್ರಶ್ನಿಸಿದ್ದಕ್ಕೆ ಸುಳ್ಳು ಕೇಸುಗಳನ್ನು ಹಾಕಿ ನಮ್ಮ ಕಾರ್ಯಕರ್ತರನ್ನು ಬಂಧಿಸುತ್ತಿದ್ದೀರಿ. ಉಡುಪಿಯ ಘಟನೆಯ ಬಗ್ಗೆ ಜಾಗೃತವಾಗಿದೆ ಸಮಾಜ, ಎಲ್ಲರೂ ನಿಮ್ಮ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಅವರೆಲ್ಲರನ್ನೂ ನೀವು ಬಂಧಿಸುವಿರಾ..? ನಿಮ್ಮ ಇಂತಹ ಗೊಡ್ಡು ಬೆದರಿಕೆಗಳಿಗೆ ನಾವೆಂದಿಗೂ ಜಗ್ಗುವುದಿಲ್ಲ. ನಿಮಗೆ ನಿಜವಾಗಿಯೂ ಧೈರ್ಯವಿದ್ದರೆ, ತುಷ್ಟೀಕರಣ ಬದಿಗೊತ್ತಿ ಅಪರಾಧಿಗಳನ್ನು ಬಂಧಿಸಿ’ ಎಂದು ಸವಾಲು ಹಾಕಿದೆ.
.@siddaramaiah ರವರೇ,#UdupiHorror ಘಟನೆಯ ಸಾಕ್ಷಿ ನಾಶಗೊಳಿಸಿ, ಆ ಪ್ರಕರಣವನ್ನೇ ತಿರುಚುವ ನಿಮ್ಮ ಹೀನ ಮನಸ್ಥಿತಿಯನ್ನು ಬಹಿರಂಗವಾಗಿ ಪ್ರಶ್ನಿಸಿದ್ದಕ್ಕೆ ಸುಳ್ಳು ಕೇಸುಗಳನ್ನು ಹಾಕಿ ನಮ್ಮ ಕಾರ್ಯಕರ್ತರನ್ನು ಬಂಧಿಸುತ್ತಿದ್ದೀರಿ.
ಉಡುಪಿಯ ಘಟನೆಯ ಬಗ್ಗೆ ಜಾಗೃತವಾಗಿದೆ ಸಮಾಜ, ಎಲ್ಲರೂ ನಿಮ್ಮ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.…
— BJP Karnataka (@BJP4Karnataka) July 28, 2023
ಇದನ್ನೂ ಓದಿ: "ಮುಸಲ್ಮಾನ್ ಹೆಣ್ಣುಮಕ್ಕಳ ಮಾನಸಿಕತೆಯೂ ಜಿಹಾದಿ ಕಡೆ ವಾಲ್ತಿದೆ"
‘ರಾಜ್ಯದಲ್ಲಿ ಸಿದ್ದರಾಮಯ್ಯನವರ ತುಘಲಕ್ ದರ್ಬಾರ್ ಎಷ್ಟರ ಮಟ್ಟಿಗೆ ನಡೆಯುತ್ತಿದೆ ಎನ್ನುವುದಕ್ಕೆ ಸಂತ್ರಸ್ತ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿ ಚಾರ್ಚ್ ಮಾಡಿಸುತ್ತಿರುವುದೇ ಪ್ರತ್ಯಕ್ಷ ಸಾಕ್ಷಿ. ಉಡುಪಿ ಕಾಲೇಜಿನ ಅಮಾನುಷ ಕೃತ್ಯವನ್ನ ಬಯಲಿಗೆಳೆದವರ ಮೇಲೆಯೂ ಪೊಲೀಸರಿಂದ ಕಾಂಗ್ರೆಸ್ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ’ ಎಂದು ಬಿಜೆಪಿ ಟೀಕಿಸಿದೆ.
ರಾಜ್ಯದಲ್ಲಿ @siddaramaiah ಅವರ ತುಘಲಕ್ ದರ್ಬಾರ್ ಎಷ್ಟರ ಮಟ್ಟಿಗೆ ನಡೆಯುತ್ತಿದೆ ಎನ್ನುವುದಕ್ಕೆ ಸಂತ್ರಸ್ತ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿ ಚಾರ್ಚ್ ಮಾಡಿಸುತ್ತಿರುವುದೇ ಪ್ರತ್ಯಕ್ಷ ಸಾಕ್ಷಿ.
ಉಡುಪಿ ಕಾಲೇಜಿನ ಅಮಾನುಷ ಕೃತ್ಯವನ್ನ ಬಯಲಿಗೆಳೆದವರ ಮೇಲೆಯೂ ಪೊಲೀಸರಿಂದ @INCKarnataka ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ.
ಪ್ರಕರಣದ… pic.twitter.com/cSxsUSM76c
— BJP Karnataka (@BJP4Karnataka) July 28, 2023
‘ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆದು ಅನ್ಯಾಯವನ್ನು ತಡೆಯಲು, ನ್ಯಾಯ ಕೇಳಲು, ಜಿಹಾದಿಗಳ ಹೆಡೆಮುರಿ ಕಟ್ಟಲು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರೆ, ಅದನ್ನು ಹತ್ತಿಕ್ಕಲು ಈ ರೀತಿ ಪೊಲೀಸರಿಂದ ದೌರ್ಜನ್ಯ ನಡೆಸಿ ಸಿದ್ದರಾಮಯ್ಯನವರ ಸರ್ಕಾರ ಹೇಡಿತನ ಪ್ರದರ್ಶಿಸಿದೆ’ ಎಂದು ಬಿಜೆಪಿ ಕುಟುಕಿದೆ.
ಇದನ್ನೂ ಓದಿ: ಸೇವಾ ನ್ಯೂನ್ಯತೆ ಎಸಗಿದ ಪಿ.ಎಫ್.ಇಲಾಖೆಗೆ ರೂ.6 ಲಕ್ಷ 42 ಸಾವಿರ ದಂಡ
ಡಬಲ್ ಸ್ಟೇರಿಂಗ್ ಸರ್ಕಾರ
ಪೂರ್ಣ ಬಹುಮತ ಪಡೆದ ಸರ್ಕಾರವೊಂದರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಇರುವಂಥ ಗೊಂದಲ ಈಗಲೇ ಎದ್ದು ಕಾಣುತ್ತಿದೆ. @siddaramaiah ಹಾಗೂ @DKShivakumar ಎಂಬ ಎರಡು ಶಕ್ತಿ ಕೇಂದ್ರಗಳನ್ನು ಹೊಂದಿರುವ @INCKarnataka ದ್ದು ಡಬಲ್ ಸ್ಟೇರಿಂಗ್ ಸರ್ಕಾರ.
ಎರಡು ಬಣಗಳ ನಡುವೆ ಕಾಲೆಳೆದಾಟ ಯಾಕೆ ಎಂಬುದನ್ನು ತಿಳಿಯಲು ಈ ವಿಡಿಯೋ ನೋಡಿ. pic.twitter.com/RTttVGOu7j
— BJP Karnataka (@BJP4Karnataka) July 28, 2023
‘ಪೂರ್ಣ ಬಹುಮತ ಪಡೆದ ಸರ್ಕಾರವೊಂದರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಇರುವಂಥ ಗೊಂದಲ ಈಗಲೇ ಎದ್ದು ಕಾಣುತ್ತಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಎಂಬ ಎರಡು ಶಕ್ತಿ ಕೇಂದ್ರಗಳನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ್ದು ಡಬಲ್ ಸ್ಟೇರಿಂಗ್ ಸರ್ಕಾರ. ಎರಡು ಬಣಗಳ ನಡುವೆ ಕಾಲೆಳೆದಾಟ ಯಾಕೆ ಎಂಬುದನ್ನು ತಿಳಿಯಲು ಈ ವಿಡಿಯೋ ನೋಡಿ’ ಎಂದು ಸಿದ್ದರಾಮಯ್ಯ ಮತ್ತು ಡಿಕೆಶಿ ವಿಡಿಯೋವನ್ನು ಬಿಜೆಪಿ ಶೇರ್ ಮಾಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.