ಕರ್ನಾಟಕದ ಅನರ್ಹ ಶಾಸಕರ ಕ್ಷೇತ್ರಗಳ ಚುನಾವಣಾ ದಿನಾಂಕ ಘೋಷಣೆ

 ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವ ಸರ್ಕಾರದಲ್ಲಿ ಅನರ್ಹರಾಗಿದ್ದ ಶಾಸಕರ ಕ್ಷೇತ್ರಗಳಿಗೆ ಈಗ ಉಪ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಿದೆ. ರಾಜ್ಯದಲ್ಲಿ ಉಪ ಚುನಾವಣೆಯು ಆಕ್ಟೋಬರ್ 21 ರಂದು 15 ಕ್ಷೇತ್ರಗಳಿಗೆ ನಡೆಯಲಿದೆ. ಅಕ್ಟೋಬರ್  24 ರಂದು ಫಲಿತಾಂಶ ಘೋಷಣೆಯಾಗಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.

Last Updated : Sep 21, 2019, 01:23 PM IST
ಕರ್ನಾಟಕದ ಅನರ್ಹ ಶಾಸಕರ ಕ್ಷೇತ್ರಗಳ ಚುನಾವಣಾ ದಿನಾಂಕ ಘೋಷಣೆ  title=
file photo

ಬೆಂಗಳೂರು:  ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವ ಸರ್ಕಾರದಲ್ಲಿ ಅನರ್ಹರಾಗಿದ್ದ ಶಾಸಕರ ಕ್ಷೇತ್ರಗಳಿಗೆ ಈಗ ಉಪಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಿದೆ. ರಾಜ್ಯದಲ್ಲಿ ಉಪ ಚುನಾವಣೆಯು ಆಕ್ಟೋಬರ್ 21ರಂದು 15 ಕ್ಷೇತ್ರಗಳಿಗೆ ನಡೆಯಲಿದೆ. ಅಕ್ಟೋಬರ್ 24 ರಂದು ಫಲಿತಾಂಶ ಘೋಷಣೆಯಾಗಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.

ಮಸ್ಕಿ ಮತ್ತು ರಾಜರಾಜೇಶ್ವರಿ ನಗರಕ್ಕೆ ನ್ಯಾಯಾಲಯ ತಡೆ ನೀಡಿರುವುದರಿಂದ ಒಟ್ಟು 17 ಕ್ಷೇತ್ರಗಳಲ್ಲಿ 15 ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. 

ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿರುವ 15 ಕ್ಷೇತ್ರಗಳು:

1) ಗೋಕಾಕ್ 
2) ಅಥಣಿ 
3) ರಾಣೆಬೆನ್ನೂರು
4) ಕಾಗವಾಡ  
5) ಹಿರೇಕೆರೂರು
6) ಯಲ್ಲಾಪುರ 
7) ಯಶವಂತಪುರ 
8) ವಿಜಯನಗರ 
9) ಶಿವಾಜಿ ನಗರ 
10 ಹೊಸಕೋಟೆ 
11) ಹುಣಸೂರು 
12) ಕೃಷ್ಣರಾಜ್ ಪೇಟೆ 
13) ಮಹಾಲಕ್ಷಿ ಲೇ ಔಟ್ 
14) ಕೆ.ಆರ್.ಪುರ 
15 ಚಿಕ್ಕಬಳ್ಳಾಪುರ 

Trending News