ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮ ಆರೋಪ : ತನಿಖೆ ಮಾಡಿಸುವುದಾಗಿ ಸಿಎಂ ಬೊಮ್ಮಾಯಿ

ಮಧ್ಯಪ್ರವೇಶಿಸಿ ಮುಖ್ಯಮಂತ್ರಿ ಬೊಮ್ಮಾಯಿ ಅವ್ಯವಹಾರದ ಬಗ್ಗೆ ತನಿಖೆ ಮಾಡಿಸುವುದಾಗಿ ಹೇಳಿದರು.

Written by - Prashobh Devanahalli | Last Updated : Sep 14, 2022, 02:44 PM IST
  • ವಿಧಾನಸಭೆ ಕಲಾಪದಲ್ಲಿ ಗಂಗಾಕಲ್ಯಾಣ ಯೋಜನೆಯಲ್ಲಿ ಅಕ್ರಮ
  • ಅವ್ಯವಹಾರದ ಬಗ್ಗೆ ತನಿಖೆ ಮಾಡಿಸುವುದಾಗಿ ಹೇಳಿದ ಬೊಮ್ಮಾಯಿ
  • ಗುತ್ತಿಗೆದಾರರರಿಗೆ ಬಾವಿ ಕೊರೆಯುವ ಯೋಜನೆಗೆ ಆಕ್ಷೇಪ ಹೊರಹಾಕಿದ ಶಾಸಕ ಯತೀಂದ್ರ
ಗಂಗಾ ಕಲ್ಯಾಣ ಯೋಜನೆಯಲ್ಲಿ ಅಕ್ರಮ ಆರೋಪ : ತನಿಖೆ ಮಾಡಿಸುವುದಾಗಿ ಸಿಎಂ ಬೊಮ್ಮಾಯಿ title=

ಬೆಂಗಳೂರು : ವಿಧಾನಸಭೆ ಕಲಾಪದಲ್ಲಿ ಗಂಗಾಕಲ್ಯಾಣ ಯೋಜನೆಯಲ್ಲಿ ಅಕ್ರಮ ಆಗಿದೆ ಎಂಬ ಆರೋಪ ಮಾಡಿದ ಕಾಂಗ್ರೆಸ್ ಶಾಸಕರು, ಸ್ಪಷ್ಟ ಉತ್ತರ ನೀಡಬೇಕೆಂದು ಕೈ -ದಳ ಶಾಸಕರು ಇಳಿದು ಧರಣಿ ಮಾಡಿದರು. ಮಧ್ಯಪ್ರವೇಶಿಸಿ ಮುಖ್ಯಮಂತ್ರಿ ಬೊಮ್ಮಾಯಿ ಅವ್ಯವಹಾರದ ಬಗ್ಗೆ ತನಿಖೆ ಮಾಡಿಸುವುದಾಗಿ ಹೇಳಿದರು.

ಶಾಸಕ ಪ್ರಿಯಾಂಕ್ ಖರ್ಗೆ ಗಂಗಾಕಲ್ಯಾಣ ಯೋಜನೆ ಬಗ್ಗೆ ಪ್ರಸ್ತಾಪ ಮಾಡಿ, 2019-21 ರಲ್ಲಿ ಬೋರ್ ವೆಲ್ ಕೊರೆಯಲಾಗಿದೆ. ಇದರಲ್ಲಿ ಸಾಕಷ್ಟು ಅವ್ಯವಹಾರ ನಡೆದಿರುವ ಆರೋಪವಿದೆ.ಇದರ ಬಗ್ಗೆ ಸರ್ಕಾರ ಸ್ಪಷ್ಟ ವಿವರಣೆ  ನೀಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ : "ಕನ್ನಡ ಕಡ್ಡಾಯ" ಕಾನೂನು ಇದೇ ಅಧಿವೇಶನದಲ್ಲಿ ಮಂಡನೆ: ಸಿಎಂ ಬೊಮ್ಮಾಯಿ

ರಾಜ್ಯವ್ಯಾಪಿ ಒಂದೇ ಗುತ್ತಿಗೆದಾರರರಿಗೆ ಬಾವಿ ಕೊರೆಯುವ ಯೋಜನೆಗೆ ಆಕ್ಷೇಪ ಹೊರಹಾಕಿದ  ಶಾಸಕ ಯತೀಂದ್ರ ಸಿದ್ದರಾಮಯ್ಯ, 2018 ರ ಫಲಾನುಭವಿಗಳಿಗೆ ಬಾವಿ ಕೊರೆಯಿಸಿಲ್ಲ, ದೊಡ್ಡ ಹಗರಣ ಆಗಿದೆ ಆಂತ ಅಸಮಾಧಾನ ಹೊರ ಹಾಕಿದ ಪ್ರತಿಪಕ್ಷ ಶಾಸಕರು.

ಈ ವೇಳೆ ಸಿಎಂ ಬೊಮ್ಮಾಯಿ ಉತ್ತರ ನೀಡಿ,ಹಿಂದೆ ಬೋರ್ ವೆಲ್ ಗಳನ್ನ ಕೊರೆಯಲಾಗಿತ್ತು. ಆದರೆ ಸಮರ್ಪಕವಾಗಿ ಆಗ್ತಿರಲಿಲ್ಲ. ಆದರೆ ಈಗ ಗೊಂದಲ ಸರಿಪಡಿಸುವ ಕೆಲಸ ಮಾಡ್ತಿದ್ದೇವೆ. ಕೋರ್ಟ್ ನಲ್ಲಿರುವ ಪ್ರಕರಣಗಳ ಗಮನಹರಿಸ್ತೇವೆ,ಈ ವರ್ಷ ನಾವು ಬೋರ್ ವೆಲ್ ಕೊರೆಸುವುದು. ಅದನ್ನ ಕ್ಲಿಯರ್ ಮಾಡಲು ಆದೇಶ ನೀಡ್ತೇನೆ,
ಇದಕ್ಕಾಗಿ ಕೂಡಲೇ ಸಭೆ ಕರೆದು ಚರ್ಚೆ ಮಾಡ್ತೇವೆ, ಎಂದು ಉತ್ತರಿಸಿದರು.

ಸಭೆಗೆ ಉತ್ತರ ನೀಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ,"ಯೋಜನೆ ತಪ್ಪುಗಳನ್ನು ಸರಿಪಡಿಸಲಾಗುವುದು. ಹಿಂಬಾಕಿಯಾಗಿರುವ ಫಲಾನುಭವಿಗಳಿಗೆ ಕೊಳವೆ ಬಾವಿ ಕೊರೆಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು", ಎಂದರು. ಮಧ್ಯೆ ಪ್ರವೇಶ ಮಾಡಿದ ಸಿಎಂ ಬಸವರಾಜ್ ಬೊಮ್ಮಾಯಿ,"ಕಳೆದ ಹಲವು ವರ್ಷಗಳಿಂದ ಗಂಗಾ ಕಲ್ಯಾಣ ಯೋಜನೆ ಜಾರಿಯಲ್ಲಿ ತಪ್ಪಾಗಿದೆ. 2018 - 19 ರ ಅವಧಿಯ ಫಲಾನುಭವಿಗಳಿಗೆ ಈಗ ಬಾವಿ ಕೊರೆಸಲಾಗುತ್ತಿದೆ. ಈ ಯೋಜನೆ ಸರಳೀಕರಣ ಮಾಡಲಾಗುತ್ತಿದೆ. ಅದನ್ನು ಸರಿ ಪಡಿಸಲು ಶೀಘ್ರದಲ್ಲೇ ಸಭೆ ಕರೆಯುತ್ತೇನೆ. ಸಮಸ್ಯೆ ಬಗೆಹರಿಸಲಾಗುವುದು" ಎಂದು ತಿಳಿಸಿದರು

ಇದನ್ನೂ ಓದಿ : ಧಮ್‌ ಇದ್ರೆ ಸೋನಿಯಾ, ರಾಹುಲ್‌ ಅವರಿಂದ ʼಹಿಂದಿ ದಿವಸ್‌ʼ ರದ್ದು ಮಾಡುತ್ತೇವೆ ಎಂದು ಹೇಳಿಸಿ.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News