KBJNL ಕಚೇರಿ ಬೆಂಗಳೂರಿನಿಂದ ಆಲಮಟ್ಟಿಗೆ ಸ್ಥಳಾಂತರ ಮಾಡಿ ಎರಡು ಭಾರಿ ಆದೇಶ : ಆದ್ರೆ, ಕ್ಯಾರೆ ಅಂತಿಲ್ಲಾ ಈ ಅಧಿಕಾರಿ! 

ಉತ್ತರ ಕರ್ನಾಟಕದ ಮಹಾತ್ವಕಾಂಕ್ಷೆ ಯೋಜನೆಯಾದ ಕೃಷ್ಣ ಭಾಗ್ಯ ಜಲ ನಿಗಮ ಯೋಜನೆ ಇನ್ನೂ ಅನುಷ್ಠಾನಕ್ಕೆ ಬರುವಂತೆ ಕಾಣುತ್ತಿಲ್ಲ ಸರ್ಕಾರ ಎರೆಡೆರಡು ಬಾರಿ ಅಧಿಕಾರಿಗೆ ಕಚೇರಿಯನ್ನ ಬೆಂಗಳೂರಿನಿಂದ ವಿಜಯಪುರದ ಆಲಮಟ್ಟಿಗೆ ಸ್ಥಳಾಂತರ ಮಾಡುವಂತೆ ಆದೇಶ ಮಾಡಿದ್ರು ಅಧಿಕಾರಿ ಕ್ಯಾರೆ ಎನ್ನುತ್ತಿಲ್ಲ.

Written by - VIJAY BHANDARI | Last Updated : Aug 24, 2022, 05:09 PM IST
  • ಉತ್ತರ ಕರ್ನಾಟಕದ ಮಹಾತ್ವಕಾಂಕ್ಷೆ ಯೋಜನೆ
  • ಕೃಷ್ಣ ಭಾಗ್ಯ ಜಲ ನಿಗಮ ಯೋಜನೆ ಇನ್ನೂ ಅನುಷ್ಠಾನ
  • ಬೆಂಗಳೂರಿನಿಂದ ವಿಜಯಪುರದ ಆಲಮಟ್ಟಿಗೆ ಸ್ಥಳಾಂತರ
KBJNL ಕಚೇರಿ ಬೆಂಗಳೂರಿನಿಂದ ಆಲಮಟ್ಟಿಗೆ ಸ್ಥಳಾಂತರ ಮಾಡಿ ಎರಡು ಭಾರಿ ಆದೇಶ : ಆದ್ರೆ, ಕ್ಯಾರೆ ಅಂತಿಲ್ಲಾ ಈ ಅಧಿಕಾರಿ!  title=

ಬೆಂಗಳೂರು : ಉತ್ತರ ಕರ್ನಾಟಕದ ಮಹಾತ್ವಕಾಂಕ್ಷೆ ಯೋಜನೆಯಾದ ಕೃಷ್ಣ ಭಾಗ್ಯ ಜಲ ನಿಗಮ ಯೋಜನೆ ಇನ್ನೂ ಅನುಷ್ಠಾನಕ್ಕೆ ಬರುವಂತೆ ಕಾಣುತ್ತಿಲ್ಲ ಸರ್ಕಾರ ಎರೆಡೆರಡು ಬಾರಿ ಅಧಿಕಾರಿಗೆ ಕಚೇರಿಯನ್ನ ಬೆಂಗಳೂರಿನಿಂದ ವಿಜಯಪುರದ ಆಲಮಟ್ಟಿಗೆ ಸ್ಥಳಾಂತರ ಮಾಡುವಂತೆ ಆದೇಶ ಮಾಡಿದ್ರು ಅಧಿಕಾರಿ ಕ್ಯಾರೆ ಎನ್ನುತ್ತಿಲ್ಲ.

ಕೃಷ್ಣ ಭಾಗ್ಯ ಜಲ ನಿಗಮದ ಕಚೇರಿಯನ್ನು ಆಲಮಟ್ಟಿಗೆ ಸ್ಥಳಾಂತರ ಮಾಡಿ ಕಾರ್ಯ ನಿರ್ವಹಿಸುವಂತೆ ಸರ್ಕಾರ ಇಗಾಗಲೇ ಎರಡು ಬಾರಿ ಕೆಬಿಜೆ ಎನ್ ಎಲ್ ಎಂಡಿ ಶಿವಕುಮಾರ್ ಗೆ ಆದೇಶ ಮಾಡಿದ್ರೂ ಬೆಂಗಳೂರು ಕಚೇರಿಯಲ್ಲೆ ಅಂಟಿಕೊಂಡು ಕುಳುತಿದ್ದಾರೆ. ಸದ್ಯ ಈ ಹೋರಾಟವನ್ನ ತೀವ್ರಗೊಳಿಸಲು ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘ ಮುಂದಾಗಿದ್ದು, ಸರ್ಕಾರದ ಆದೇಶ ಉಲ್ಲಂಘನೆ ಮಾಡುತ್ತಿರುವ ನೀರಾವರಿ ನಿಗಮ ಮತ್ತು ಕೆಬಿಜೆಎನ್ಎಲ್ ಅಧಿಕಾರಿಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ : 40% ಸರ್ಕಾರದ ಬಿಜೆಪಿ ಭ್ರಷ್ಟೋತ್ಸವ ನಿಲ್ಲುವುದು ಯಾವಾಗ?: ಕಾಂಗ್ರೆಸ್ ಪ್ರಶ್ನೆ

ಈ ಸಂಬಂಧ ಇಂದು ಉತ್ತರ ಕರ್ನಾಟಕ ರೈತರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಯಾಸೀನ್ ಎನ್ ಜವಳಿ ನೇತೃತ್ವದಲ್ಲಿ ರೈತರು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿದರು. ಸರ್ಕಾರದ ಆದೇಶದ ಪ್ರಕಾರ ಕೆಬಿಜೆಎನ್ ಎಲ್ ಕಚೇರಿಯನ್ನು ಉತ್ತರ ಕರ್ನಾಟಕಕ್ಕೆ ಯಾಕರ ಸ್ಥಳಾಂತರಿಸಿಲ್ಲ ಎಂದು ವಿವರಣೆ ಕೇಳಿದರು.ನಿಗದಿತ ಅವಧಿಯೊಳಗೆ ಸ್ಥಳಾಂತರ ಪ್ರಕ್ರಿಯೆ ಮುಗಿಸಲು ಜಲಸಂಪನ್ಮೂಲ ಇಲಾಖೆ ಸೂಚನೆ ನೀಡಿದ್ದರೂ, ಇನ್ನೂ ಬೆಂಗಳೂರಿನಲ್ಲೇ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಕೆಲಸ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಕಳೆದ ಮೇ 12 ರಂದು ರಾಜ್ಯ ಜಲಸಂಪನ್ಮೂಲ ಇಲಾಖೆಯು ಕೃಷ್ಣ ಭಾಗ್ಯ ಜಲ ನಿಗಮದ ಎಲ್ಲಾ ಕಚೇರಿಗಳನ್ನು ಮತ್ತು ಸಿಬ್ಬಂದಿಯನ್ನು ಒಂದು ವಾರದ ಒಳಗೆ ಆಲಮಟ್ಟಿಗೆ ಸ್ಥಳಾಂತರ ಮಾಡಲು ಸೂಚನೆ ನೀಡಿತ್ತು. ಜೊತೆಗೆ ಈ ಸಂಬಂಧ ಅನುಪಾಲನಾ ವರದಿ ನೀಡಲು ಸಹ ನಿರ್ದೇಶನ ನೀಡಲಾಗಿತ್ತು. ಆದರೂ ಕಚೇರಿ ಸ್ಥಳಾಂತರವಾಗದ ಬಗ್ಗೆ  ಯಾಸೀನ್ ಜವಳಿ ನೇತೃತ್ವದಲ್ಲಿ ನಿಗಮದ ಅಧಿಕಾರಿಗಳ ನಡೆ ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದಾರೆ.

ಇದನ್ನೂ ಓದಿ : ಸಚಿವ ಮುನಿರತ್ನ ಕಲೆಕ್ಷನ್ ಆರೋಪ: ದಾಖಲೆ ಜೊತೆಗೆ ಲೋಕಾಯುಕ್ತಕ್ಕೆ ದೂರು ನೀಡಲಿ- ಸಿಎಂ ಬೊಮ್ಮಾಯಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News