ಪಟಾಕಿ ದುರಂತದ ಬಳಿಕ ಎಚ್ಚೆತ್ತ ಸರ್ಕಾರ: ಗ್ರೌಂಡ್‌ನಲ್ಲಿ ಸೇಲ್ ಮಾಡೋದಕ್ಕೆ ಅವಕಾಶ ಡೌಟ್

ಈ ಬಾರಿ ಅಧಿಕೃತ 109 ಪರ್ಮನೆಂಟ್ ಲೈಸೆನ್ಸ್ ಹೋಲ್ಡರ್ ಗಳಿಗಷ್ಟೆ ಗ್ರೀನ್ ಪಟಾಕಿ ಮಾರಲು ಅವಕಾಶವಿದ್ದು, ಗ್ರೌಂಡ್ ಗಳಲ್ಲಿ ತಾತ್ಕಾಲಿಕವಾಗಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡದಿರೋದ್ರಿಂದ ಪಟಾಕಿ ರೇಟ್ ದುಪ್ಪಟ್ಟಾಗುವ ಸಾಧ್ಯತೆಯಿದೆ. ಅಲ್ಲದೆ, ಸರ್ಕಾರ ಪಟಾಕಿ ಮಾರಾಟಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

Written by - VISHWANATH HARIHARA | Edited by - Krishna N K | Last Updated : Nov 3, 2023, 06:41 PM IST
  • ಪಟಾಕಿ ದುರಂತದ ಬಳಿಕ ಎಚ್ಚೆತ್ತ ಸರ್ಕಾರ
  • ಲೈಸೆನ್ಸ್ ಹೋಲ್ಡರ್ ಗಳಿಗಷ್ಟೆ ಗ್ರೀನ್ ಪಟಾಕಿ ಮಾರಲು ಅವಕಾಶ
  • ಪಟಾಕಿ ಮಾರಾಟಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಪಟಾಕಿ ದುರಂತದ ಬಳಿಕ ಎಚ್ಚೆತ್ತ ಸರ್ಕಾರ: ಗ್ರೌಂಡ್‌ನಲ್ಲಿ ಸೇಲ್ ಮಾಡೋದಕ್ಕೆ ಅವಕಾಶ ಡೌಟ್ title=

ಬೆಂಗಳೂರು : ಅತ್ತಿಬೆಲೆ ಪಟಾಕಿ ಗೋಡೌನ್ ಅಗ್ನಿ ಅವಘಡದ ಬಳಿಕ ಸರ್ಕಾರ ಕಠಿಣ ನಿಯಮಗಳನ್ನ ರೂಪಿಸಿದ್ದು, ಈ ಬಾರಿ ಗ್ರೌಂಡ್‌ಗಳಲ್ಲಿ ತಾತ್ಕಾಲಿಕವಾಗಿ ಶೆಡ್ ಹಾಕಿ ಪಟಾಕಿ ಮಾರ್ತಿದ್ದ ಮಾರಾಟಗಾರರಿಗೆ ಅವಕಾಶ ನೀಡೋದು ಬಹುತೇಕ ಡೌಟು ಎನ್ನಲಾಗ್ತಿದೆ.

ಬಿಬಿಎಂಪಿಯಿಂದ ಗ್ರೌಂಡ್‌ಗಳ ಲಿಸ್ಟ್ ಪೊಲೀಸ್ರಿಗೆ ಕಳಿಸಲಾಗಿದ್ದು, ಪೊಲೀಸ್ ಇಲಾಖೆ ಫೈರ್ ಡಿಪಾರ್ಟ್‌ಮೆಂಟ್‌ಗೆ ಮೂವ್ ಮಾಡಿದ್ದು, ಗೃಹ ಸಚಿವರು ಯಾವುದೇ ಪರ್ಮೀಷನ್ ನೀಡದಂತೆ ಸೂಚಿಸಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಈ ಬಾರಿ ಅಧಿಕೃತ ಪರ್ಮನೆಂಟ್ ಲೈಸೆನ್ಸ್ ಹೋಲ್ಡರ್ ಗಳಷ್ಟೆ ಹಸಿರು ಪಟಾಕಿಗಳನ್ನ ಮಾರಲು ಅವಕಾಶ ನೀಡಲಾಗಿದೆ. 

ಪಟಾಕಿ ಮಾರಾಟಕ್ಕೆ ಮಾರ್ಗಸೂಚಿ ‌ಹೀಗಿರಲಿದೆ..!

* ಪರ್ಮನೆಂಟ್ ಲೈಸೆನ್ಸ್ ಹೋಲ್ಡರ್ ಗಳಿಗಷ್ಟೆ ಈ ಬಾರಿ ಪಟಾಕಿ ಮಾರಲು ಅವಕಾಶ 

* ಈ ಬಾರಿ ಖಾಲಿ ಗ್ರೌಂಡ್ ಗಳಲ್ಲಿ ಪಟಾಕಿ ಮಾರಾಟ ಸಂಪೂರ್ಣ ನಿಷೇಧ..? 

* ಗ್ರೀನ್ ಪಟಾಕಿಗಳನ್ನ ಮಾರೋದಕ್ಕೆ ಮಾತ್ರ ಅವಕಾಶ 

* ಗ್ರೀನ್ ಪಟಾಕಿಗಳ ಪ್ಯಾಕೆಟ್ ಮೇಲೆ ಚಿಹ್ನೆ ಇದ್ದು, ಕ್ಯೂ ಆರ್ ಕೋಡ್ ಸಹ ಇರುತ್ತೆ 

* ಪೊಲೀಸ್ ಇಲಾಖೆ , ತಹಶೀಲ್ದಾರ್ , ಪರಿಸರ ಇಲಾಖೆ , ಅಗ್ನಿಶಾಮಕ ಇಲಾಖೆಯ ಕಾರ್ಯಪಡೆ ರಚಿಸುವುದು 

* ಪಟಾಕಿ ಮಳಿಗೆಗಳನ್ನ ಪರಿಶೀಲಿಸಿ, ಗ್ರೀನ್ ಪಟಾಕಿ ಹೊರತುಪಡಿಸಿ ಬೇರೆ ಪಟಾಕಿ ಇದ್ರೆ ಮುಟ್ಟುಗೋಲು ಹಾಕಿ ಕ್ರಿಮಿನಲ್ ಪ್ರಕರಣ ದಾಖಲಿಸುವುದು 

* ರಾತ್ರಿ 8 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಹೊಡೆಯಲು ಅವಕಾಶ 

* ಮಕ್ಕಳು ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು, ಶಾಲಾ ಕಾಲೇಜು ಆಸ್ಪತ್ರೆಗಳ ಬಳಿ ಪಟಾಕಿ ಹೊಡೆಯುವಂತಿಲ್ಲ

* ದೀಪಾವಳಿಗೆ ಅಧಿಕೃತ ಪರ್ಮನೆಂಟ್ ಲೈಸೆನ್ಸ್ ಹೋಲ್ಡರ್ ಗಳಷ್ಟೆ ಪಟಾಕಿ ಮಾರುವುದು 

* ಬೇರೆ ಯಾರಾದ್ರು ಪಟಾಕಿ ಮಾರಿದ್ರೆ ಅಂಥವರ ಮೇಲೆ ಕ್ರಿಮಿನಲ್ ಕೇಸ್ ಹಾಕುವುದು

*ಹಬ್ಬದ ಏಳು ದಿನ ಮೊದಲು ಮತ್ತು ಹಬ್ಬದ ನಂತರದ ಏಳು ದಿನ ಶಬ್ಧ ಮಾಲಿನ್ಯ ಮತ್ತು ವಾಯು ಮಾಲಿನ್ಯ ತಪಾಸಣೆ ನಡೆಸುವುದು 

ಇನ್ನು ಜೆಬಿ ನಗರ ಹಾಗೂ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ‌ ಸರ್ಕಾರದ ಪರವಾನಗಿ ಇಲ್ಲದೆ ಅನಧಿಕೃತ ಪಟಾಕಿ ಗೋಡೌನ್ ಗಳ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗೋಡೌನ್ ನಲ್ಲಿ ಶೇಖರಿಸಿಟ್ಟಿದ್ದ 40ಲಕ್ಷ ಮೌಲ್ಯದ ಪಟಾಕಿ ಬಾಕ್ಸ್ ಗಳು ಸೀಜ್ ಮಾಡಿ  ಕೆಲಸ ಮಾಡ್ತಿದ್ದ ಮೂವರನ್ನ ವಶಕ್ಕೆ ಪಡೆದು, ಜ್ಞಾನ ಭಾರತಿ ಹಾಗೂ ಜೆಬಿ ನಗರ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲು ಮಾಡಲಾಗಿದೆ. 

ಒಟ್ಟಿನಲ್ಲಿ ಈ ಬಾರಿ ಅಧಿಕೃತ 109 ಪರ್ಮನೆಂಟ್ ಲೈಸೆನ್ಸ್ ಹೋಲ್ಡರ್ ಗಳಿಗಷ್ಟೆ ಗ್ರೀನ್ ಪಟಾಕಿ ಮಾರಲು ಅವಕಾಶವಿದ್ದು, ಗ್ರೌಂಡ್ ಗಳಲ್ಲಿ ತಾತ್ಕಾಲಿಕವಾಗಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡದಿರೋದ್ರಿಂದ ಪಟಾಕಿ ರೇಟ್ ದುಪ್ಪಟ್ಟಾಗುವ ಸಾಧ್ಯತೆಯಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News