close

News WrapGet Handpicked Stories from our editors directly to your mailbox

ಅತಿ ಹೆಚ್ಚು ದ್ವಿದಳ ಧಾನ್ಯ ಉತ್ಪಾದನೆ: ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ 1 ಕೋಟಿ ರೂ. ಪ್ರಶಸ್ತಿ

ಭಾರತ ಸರ್ಕಾರವು ಈ ವರ್ಷದ ದ್ವಿದಳ ಧಾನ್ಯಗಳ ವರ್ಗದಡಿ ಪ್ರಶಂಸಾ ಪ್ರಶಸ್ತಿಗೆ ಕರ್ನಾಟಕ ರಾಜ್ಯವನ್ನು ಆಯ್ಕೆ ಮಾಡಿದೆ.

Updated: Sep 22, 2019 , 07:18 AM IST
ಅತಿ ಹೆಚ್ಚು ದ್ವಿದಳ ಧಾನ್ಯ ಉತ್ಪಾದನೆ: ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ 1 ಕೋಟಿ ರೂ. ಪ್ರಶಸ್ತಿ

ಬೆಂಗಳೂರು: ದೇಶದಲ್ಲೇ ಅತಿ ಹೆಚ್ಚು ದ್ವಿದಳ ಧಾನ್ಯ ಬೆಳೆದ ಸಾಧನೆಗಾಗಿ ಕರ್ನಾಟಕಕ್ಕೆ ಭಾರತ ಸರ್ಕಾರದಿಂದ ಪ್ರಶಸ್ತಿ ಲಭಿಸಿದೆ.

ಭಾರತ ಸರ್ಕಾರವು ಈ ವರ್ಷದ ದ್ವಿದಳ ಧಾನ್ಯಗಳ ವರ್ಗದಡಿ ಪ್ರಶಂಸಾ ಪ್ರಶಸ್ತಿಗೆ ಕರ್ನಾಟಕ ರಾಜ್ಯವನ್ನು ಆಯ್ಕೆ ಮಾಡಿದ್ದು, ಕಳೆದ ಐದು ವರ್ಷಗಳಿಗಿಂತ ಹೆಚ್ಚಿನ ಉತ್ಪಾದನೆ ಸಾಧಿಸಿದ್ದಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಂಸಾ ಪತ್ರ ಹಾಗೂ  ಒಂದು ಕೋಟಿ ರೂ.ಗಳ ನಗದು  ಬಹುಮಾನವನ್ನು  ಪ್ರಶಸ್ತಿಯು ಒಳಗೊಂಡಿದೆ.

ಕೇಂದ್ರ ಸರ್ಕಾರದ ಕೃಷಿ ಹಾಗೂ ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ರಾಜ್ಯಕ್ಕೆ ಪ್ರಶಸ್ತಿ ಲಭಿಸಿರುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದ್ದು, ಮುಖ್ಯಮಂತ್ರಿಗಳನ್ನು ಹಾಗೂ ಕೃಷಿ ಇಲಾಖೆಯ ಎಲ್ಲ ಅಧಿಕಾರಿ ವರ್ಗದವರನ್ನು ಅಭಿನಂದಿಸಿದ್ದಾರೆ.