Video : ಸಂತ್ರಸ್ಥ ಮಗುವಿನ ಮಾತು ಕೇಳಿ ಕಣ್ಣೀರಿಟ್ಟ ಡಿಕೆ ಶಿವಕುಮಾರ್

ಭಾರತ್ ಜೋಡೋ ಯಾತ್ರೆಯ ನಡುವೆ ರಾಹುಲ್ ಗಾಂಧಿ ಗುಂಡ್ಲುಪೇಟೆ ಹೊರವಲಯದ ವೀರನಪುರ ಕ್ರಾಸಿನಲ್ಲಿ ಸೋಲಿಗರು ಮತ್ತು ಆಮ್ಲಜನಕ ದುರಂತ ಸಂತ್ರಸ್ತ ಕುಟುಂಬದ ಜೊತೆಗೆ ಸಂವಾದ ನಡೆಸಿದರು.

Written by - Channabasava A Kashinakunti | Last Updated : Sep 30, 2022, 11:08 PM IST
  • ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ
  • ಆಮ್ಲಜನಕ ದುರಂತ ಸಂತ್ರಸ್ತ ಕುಟುಂಬದ ಜೊತೆಗೆ ಸಂವಾದ ನಡೆಸಿದ ರಾಹುಲ್ ಗಾಂಧಿ
  • ದುಕ್ಕಿಸುತ್ತಾ ಕಣ್ಣೀರಿಟ್ಟ ಡಿಕೆ ಶಿವಕುಮಾರ್
Video : ಸಂತ್ರಸ್ಥ ಮಗುವಿನ ಮಾತು ಕೇಳಿ ಕಣ್ಣೀರಿಟ್ಟ ಡಿಕೆ ಶಿವಕುಮಾರ್ title=

ಚಾಮರಾಜನಗರ : ಭಾರತ್ ಜೋಡೋ ಯಾತ್ರೆಯ ನಡುವೆ ರಾಹುಲ್ ಗಾಂಧಿ ಗುಂಡ್ಲುಪೇಟೆ ಹೊರವಲಯದ ವೀರನಪುರ ಕ್ರಾಸಿನಲ್ಲಿ ಸೋಲಿಗರು ಮತ್ತು ಆಮ್ಲಜನಕ ದುರಂತ ಸಂತ್ರಸ್ತ ಕುಟುಂಬದ ಜೊತೆಗೆ ಸಂವಾದ ನಡೆಸಿದರು.

ಸಂವಾದದಲ್ಲಿ ಆಮ್ಲಜನಕ ದುರಂತದಲ್ಲಿ ತಂದೆಯನ್ನು ಕಳೆದುಕೊಂಡ  ಸಂತ್ರಸ್ತರು ಮಗುವೊಂದು ಅಳುತ್ತಾ ಮಾತನಾಡಿ, ಎಲ್ಲರಿಗು ಗುಡ್ ಮಾರ್ನಿಂಗ್, ನಮ್ಮ ಅಪ್ಪ ಇದ್ದಾಗ ನಾನು ಏನೇ ಕೇಳಿದ್ರು ತಂದು ಕೊಡುತ್ತಿದ್ದರು, ಈಗ ನಮ್ಮ ಅಪ್ಪ ಆಮ್ಲಜನಕ ದುರಂತದಲ್ಲಿ ತೀರಿ ಹೋದರು. ನಮ್ಮ ಅಪ್ಪ ಪೆನ್ಸಿಲ್ ಕೇಳಿದ್ರೆ ತಂದುಕೊಡ್ತಿದ್ರು, ಆದ್ರೆ, ನಮ್ಮ ಅಮ್ಮಗೆ ಈಗ ಏನು ತೆಗೆದುಕೊಡುವುದಕ್ಕೆ ಆಗ್ತಿಲ್ಲ. ನಮ್ಮ ಅಮ್ಮಗೆ ಒಂದು ಗೌರ್ಮೆಂಟ್ ಕೆಲಸ ಕೊಟ್ರೆ, ನಮಗೆ ಓದೋಕೆ ಸಹಾಯ ಮಾಡಿಕೊಟ್ರೆ ನಾನು ಓದಿ ಡಾಕ್ಟರ್ ಆಗ್ತೀನಿ. ನಮ್ಮ ಅಪ್ಪನ ಡಾಕ್ಟರ್ ಗಳೆ ಸಾಯಿಸಿದ್ದು, ನಾನು ಡಾಕ್ಟರ್ ಓದಿ ಜನಗಳ ಸೇವೆ ಮಾಡ್ತೀನಿ ಎಂದು ಹೇಳುತ್ತದೆ.

ಇದನ್ನೂ ಓದಿ : ಸಂತ್ರಸ್ಥ ಕುಟುಂಬಕ್ಕೆ ಸರ್ಕಾರಿ ನೌಕರಿ ಭರವಸೆ ಕೊಟ್ಟ ರಾಹುಲ್ ಗಾಂಧಿ

ಇದನ್ನ ರಾಹುಲ್ ಗಾಂಧಿಗೆ ಡಿಕೆ ಶಿವಕುಮಾರ್ ಅವರು ಇಂಗ್ಲಿಷ್ ನಲ್ಲಿ ಅನುವಾದಿ ಮಾಡಿ ಹೇಳುತ್ತಾರೆ. 

ನಂತರ ಮಾತು ಮುಂದುವರೆಸಿದ ಡಿಕೆ ಶಿವಕುಮಾರ್, ಅಲ್ಲಿ ನೆರೆದಿದ್ದ ಸಂತ್ರಸ್ತರಿಗೆ ರಾಹುಲ್ ಗಾಂಧಿಯವರು ಹೇಳುತ್ತಿದ್ದಾರೆ. ನಾವು ಇಲ್ಲಿ ಬಂದಿದ್ದು, ನಿಮ್ಮ ಮಾತನ್ನ ಕೇಳಲಿಕ್ಕೆ. ನಾವು ನಿಮ್ಮ ಜೊತೆ ಇದ್ದಿವಿ ಅಂತ ಅವರು ಕೂಡ ನಿಮ್ಮ ನೋವನ್ನು ಹೇಳಿಕೊಳ್ಳುತ್ತಿದ್ದಾರೆ ಎಂದು ಡಿಕೆಶಿ ದುಕ್ಕಿಸುತ್ತಾ ಕಣ್ಣೀರಿಟ್ಟರು.

ಬಳಿಕ ರಾಹುಲ್ ಗಾಂಧಿಯವರ ಮುಂದೆ ಆಮ್ಲಜನಕ ದುರಂತದ ಸಂತ್ರಸ್ತರು ಅಂದು ನಡೆದ ಕರುಣಾಜನಕ ಕಥೆಗಳನ್ನು ತೆರೆದಿಟ್ಟರು.

 

ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕೊರೊನಾದಿಂದಲೇ ಸತ್ತಿಲ್ಲ ಎಂದು ಸರ್ಕಾರ ಹೇಳುತ್ತಿದೆ ಇದು ಮೊದಲು ಸರಿಯಾಗಬೇಕು, ಮೃತಪಟ್ಟವರ ಕುಟುಂಬಕ್ಕೆ ಸರ್ಕಾರಿ ನೌಕರಿ ಕೊಡಬೇಕು ಎಂಬ ಸಂತ್ರಸ್ತರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ತಮ್ಮ ಸರ್ಕಾರ ಬಂದ ಕೂಡಲೇ ಮೊದಲ ಕೆಲಸ ಸಂತ್ರಸ್ತ ಕುಟುಂಬಗಳಿಗೆ ನೌಕರಿ ಕೊಡಿಸುವುದಾಗಿದೆ ಎಂದಿದ್ದಾರೆ.

ಸಂವಾದದಲ್ಲಿ ರಾಹುಲ್ ಗಾಂಧಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹೀಗೆ ಇತರ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.

ಇದನ್ನೂ ಓದಿ : ಇಳಕಲ್ ಕಸೂತಿಗೆ ಯುನೆಸ್ಕೋ ಶ್ರೇಷ್ಠ ಜವಳಿ ಪರಂಪರೆಯ ಗರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News