ಬೆಂಗಳೂರು: ದಿನದಿಂದ ದಿನಕ್ಕೆ ಡೀಸೆಲ್ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಸ್'ಗಳಿಗೆ ಜೈವಿಕ ಇಂಧನ ಬಳಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿರ್ಧರಿಸಿದೆ.
ಈ ಸಂಬಂಧ ಮೊದಲ ಹಂತದಲ್ಲಿ ಕನಿಷ್ಠ 220 ಬಸ್ಗಳಿಗೆ ಸಂಪೂರ್ಣ ಅಥವಾ ಭಾಗಶಃ ಜೈವಿಕ ಇಂಧನ ಬಳಸಲು ಕೆಎಸ್ಆರ್ಟಿಸಿ ನಿರ್ಧರಿಸಿದ್ದು, ಈಗಾಗಲೇ ಸಿದ್ಧತೆ ಆರಂಭಿಸಿದೆ. ಮೂಲಗಳ ಪ್ರಕಾರ ಕೆಎಸ್ಆರ್ ಟಿಸಿಯ 8750 ಬಸ್ಗಳಿಗೆ ಪ್ರತಿನಿತ್ಯ 6 ರಿಂದ 7 ಲಕ್ಷ ಲೀಟರ್ ಡೀಸೆಲ್ ಬಳಕೆಯಾಗುತ್ತಿದೆ ಎನ್ನಲಾಗಿದೆ.
ಇತ್ತೀಚೆಗೆ ಹಲವು ಕಂಪನಿಗಳು ಬಯೋ ಡೀಸೆಲ್ ಪೂರೈಕೆಗೆ ಮುಂದೆ ಬಂದಿದ್ದು, ಉತ್ತಮ ದರ ಮತ್ತು ಉತ್ತಮ ಗುಣಮಟ್ಟದ ಬಯೋ ಡೀಸೆಲ್ ಪೂರೈಕೆ ಮಾಡಲು ಒಪ್ಪಿದರೆ ಸದ್ಯದಲ್ಲೇ ಕೆಎಸ್ಆರ್ಟಿಸಿ ಬಯೋ ಡೀಸೆಲ್ ಬಸ್ ಗಳ ಸಂಚಾರ ಆರಂಭಿಸಲಿದೆ.