ಪ್ರಯಾಣಿಕರ ಸುರಕ್ಷತೆಗಾಗಿ ಕೆ.ಎಸ್.ಆರ್.ಟಿ.ಸಿ ವಾಹನಗಳಿಗೆ ಎ.ಐ ಟೆಕ್ನಾಲಜಿ ಅಳವಡಿಕೆ

ಸಾರ್ವಜನಿಕ ಸಾರಿಗೆಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮೊದಲ ಬಾರಿಗೆ ಎ.ಐ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಟೆಕ್ನಾಲಜಿ ಅಳವಡಿಸುವ  ಮಹತ್ವದ ಯೋಜನೆಗೆ ಹೆಜ್ಜೆ ಇಡಲಾಗಿದೆ.

Last Updated : Jun 9, 2021, 07:02 PM IST
  • ಸಾರ್ವಜನಿಕ ಸಾರಿಗೆಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮೊದಲ ಬಾರಿಗೆ ಎ.ಐ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಟೆಕ್ನಾಲಜಿ ಅಳವಡಿಸುವ ಮಹತ್ವದ ಯೋಜನೆಗೆ ಹೆಜ್ಜೆ ಇಡಲಾಗಿದೆ.
ಪ್ರಯಾಣಿಕರ ಸುರಕ್ಷತೆಗಾಗಿ ಕೆ.ಎಸ್.ಆರ್.ಟಿ.ಸಿ ವಾಹನಗಳಿಗೆ ಎ.ಐ ಟೆಕ್ನಾಲಜಿ ಅಳವಡಿಕೆ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾರ್ವಜನಿಕ ಸಾರಿಗೆಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮೊದಲ ಬಾರಿಗೆ ಎ.ಐ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಟೆಕ್ನಾಲಜಿ ಅಳವಡಿಸುವ ಮಹತ್ವದ ಯೋಜನೆಗೆ ಹೆಜ್ಜೆ ಇಡಲಾಗಿದೆ.

ಕೆಲವು ಮುಂದುವರಿದ ರಾಷ್ಟ್ರಗಳಲ್ಲಿ ಇಂತಹ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದರೂ ನಮ್ಮ ಸರ್ಕಾರಿ ಸಾರಿಗೆ ಕ್ಷೇತ್ರದ ಇತಿಹಾಸದಲ್ಲಿ ಇದೊಂದು ವಿನೂತನ ಪ್ರಯೋಗ ಎನ್ನಲಾಗಿದೆ.ಇದರಲ್ಲಿ ಎರಡು ರೀತಿಯ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ ಸಿಡಬ್ಲ್ಯುಎಸ್ ಮತ್ತು ಡಿಡಿಎಸ್ ಸಿಡಬ್ಲ್ಯುಎಸ್ ಎಂದರೆ ಕೊಲಿಜಿಯನ್ ವಾರ್ನಿಂಗ್ ಸಿಸ್ಟಮ್ ಡಿಡಿಎಸ್ ಎಂದರೆ ಡ್ರೈವರ್ ಡ್ರೋಜಿನೆಸ್  ಡಿಟೆಕ್ಷನ್ ಸಿಸ್ಟಮ್ ಈ ಎರಡು ಟೆಕ್ನಾಲಜಿಗಳನ್ನು ವಾಹನಗಳಲ್ಲಿ ಅಳವಡಿಸಲಾಗುವುದು.

ಇದನ್ನೂ ಓದಿ - Karnataka Congress: 'ಬಿಜೆಪಿ ಸರ್ಕಾರ ಸಾರಿಗೆ ನೌಕರರ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ' 

ಇದರಿಂದ ನಮ್ಮ ಬಸ್ಸಿನ ಸಮೀಪಕ್ಕೆ ಬರುವ ಇತರೆ ವಾಹನಗಳು ಹಾಗೂ ಚಾಲಕ ನಿದ್ರಿಸಿ ಡಿವೈಡರ್ ಕಡೆ ಹೋಗುವುದನ್ನು ಮತ್ತು ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವಂತಹ ಟೆಕ್ನಾಲಜಿ ಇದಾಗಿದೆ.ವಾಹನದ ಸಮೀಪಕ್ಕೆ ಬಂದಾಗ ಅಥವಾ ಚಾಲಕ ನಿದ್ರಿಸುತ್ತಿರುವಾಗ ಶಬ್ದ ಮಾಡಿ ಎಚ್ಚರಿಸುತ್ತದೆ. ಜೊತೆಗೆ  ಕಂಟ್ರೋಲ್ ರೂಮ್ ಗೆ ಮಾಹಿತಿ ರವಾನೆ ಮಾಡುತ್ತದೆ ಇದರಿಂದಾಗಿ ಚಾಲಕ ಸದಾ ಜಾಗರೂಕತೆಯಿಂದ ಇರುವಂತೆ ಮಾಡುವುದರ ಜೊತೆಗೆ ಅಪಘಾತ ಮತ್ತು ಅನಾಹುತಗಳನ್ನು ತಪ್ಪಿಸುವಂತಹ ಕೆಲಸ ಈ ಟೆಕ್ನಾಲಜಿಗಳು ಮಾಡುತ್ತವೆ.

ನಮಗೆ ನಮ್ಮ ಜನರ ಜೀವ ಮುಖ್ಯ ಇದರಿಂದಾಗಿ ಅಪಘಾತ ರಹಿತ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ ಟೆಕ್ನಾಲಜಿಯನ್ನು ಕರಾರಸಾನಿಗಮ (KSRTC) ದ 1044 ಬಸ್ಸುಗಳಿಗೆ ಮೊದಲು ಅಳವಡಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ವಾಹನಗಳಿಗೆ ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಿಂತನೆ ಮಾಡಿದೆ.

ಇದನ್ನೂ ಓದಿ - "ಬಿಜೆಪಿ ಸರಕಾರದ ವೈಫಲ್ಯವೇ ಕಾಂಗ್ರೆಸ್ ಪಕ್ಷದ ಯಶಸ್ಸು"

ಪ್ರಯಾಣಿಕರ ಸುರಕ್ಷತೆ ನಮ್ಮ ಮೊದಲ ಆದ್ಯತೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

 

Trending News