ಇಂದಿನಿಂದ ಪ್ರಾರಂಭವಾಗಲಿದೆ ಕುಮಾರಣ್ಣನ 'ಕುಮಾರ ಪರ್ವ'

ಮೈಸೂರಿನ ಚಾಮುಂಡಿ ಬೆಟ್ಟದಿಂದ ವಿಕಾಸ ವಾಹಿನಿಯಲ್ಲಿ 'ಕುಮಾರ ಪರ್ವ' ಹೊರಡಲಿದೆ.

Last Updated : Nov 7, 2017, 11:10 AM IST
ಇಂದಿನಿಂದ ಪ್ರಾರಂಭವಾಗಲಿದೆ ಕುಮಾರಣ್ಣನ 'ಕುಮಾರ ಪರ್ವ' title=

ಮೈಸೂರು: ಇಂದಿನಿಂದ ಕುಮಾರಣ್ಣನ 'ಕುಮಾರ ಪರ್ವ' ಪ್ರಾರಂಭವಾಗಿದೆ. ನಾಡ ಅದಿದೇವತೆ ಚಾಮುಂಡೇಶ್ವರಿಗೆ ಮಾಜಿ ಪ್ರಧಾನಿ ದೇವೇಗೌಡರು ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿ, ವಿಕಾಸ ವಾಹಿನಿಗೆ ಚಾಮುಂಡಿ ಬೆಟ್ಟದಲ್ಲಿ ಚಾಲನೆ ನೀಡುವ ಮೂಲಕ 2018ರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.

ಹುಣಸೂರು ರಸ್ತೆಯಲ್ಲಿ ಕುಮಾರ ಪರ್ವ ಸಮಾವೇಶದಲ್ಲಿ ಚುನಾವಣೆಗೆ ರಣಕಹಳೆ ಮೊಳಗಲಿದೆ. ನಂತರ ಲಿಂಗದೇವರಕೊಪ್ಪಲಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ.  

ಈ ಹಿಂದೆಯೂ ಕೂಡ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಚುನಾವಣೆ ಪ್ರಚಾರ ಕೈಗೊಂಡಿದ್ದಾಗ ಎಚ್ಡಿಕೆ ಮುಖ್ಯಮಂತ್ರಿಯಾಗಿದ್ದರು. ಈಗಲೂ ಸಹ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವುದು ಜೆಡಿಎಸ್ ನ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ ಇಂದು ಕುಟುಂಬ ಸಮೇತರಾಗಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಚುನಾವಣೆ ಪ್ರಚಾರ ಕೈಗೊಳ್ಳಲಾಗುತ್ತಿದೆ.

ಈ ಪರ್ವಕ್ಕಾಗಿ ಸುಸಜ್ಜಿತವಾದ 'ವಿಕಾಸ ವಾಹಿನಿ' ಎಂಬ ವಿಶೇಷ ವಾಹನವನ್ನು ಬಳಸಲಾಗುತ್ತಿದೆ. ಈ ವಾಹನವು ಕುಮಾರಸ್ವಾಮಿಯವರ ಆರೋಗ್ಯದ ದೃಷ್ಟಿಯಿಂದ ಎಲ್ಲಾ ರೀತಿಯ ಸೌಕರ್ಯಗಳನ್ನು ಹೊಂದಿದೆ. 

ಇಂದು ಬೆಳಿಗ್ಗೆ ದೇವೇಗೌಡರ ಕುಟುಂಬ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದಾಗ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡರು ಹಾಗೂ ಅವರ ಪತ್ನಿ ಚೆನ್ನಮ್ಮ, ಎಚ್.ಡಿ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಎಚ್. ಡಿ. ರೇವಣ್ಣ, ಭವಾನಿ ರೇವಣ್ಣ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರು ಹಾಜರಿದ್ದರು.

Trending News