Shivamurthy Murugha Sharanaru arrested Live Update: ಮುರುಘಾ ಶರಣರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ

ಆಗಸ್ಟ್‌ 26 ಶುಕ್ರವಾರ ಮುರುಘಾಶ್ರೀಗಳ ವಿರುದ್ಧ ಮೈಸೂರಿನ ನಜರ್‌ಬಾದ್‌ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸಂತ್ರಸ್ತ ಬಾಲಕಿಯರು ಒಡನಾಡಿ ಸಂಸ್ಥೆ ನೆರವು ಪಡೆದು ಕೇಸ್ ದಾಖಲಿಸಿದ್ದರು. ಬಳಿಕ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಕೇಸ್ ವರ್ಗಾವಣೆ ಆಗಿತ್ತು.

Written by - Yashaswini V | Last Updated : Sep 2, 2022, 03:07 PM IST
Shivamurthy Murugha Sharanaru arrested Live Update:  ಮುರುಘಾ ಶರಣರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ
Live Blog

ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶ್ರೀ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ, ಶ್ರೀಗಳ ವಿರುದ್ಧ ಪೊಲೀಸರು ಲುಕ್‌ ಔಟ್‌ ನೋಟಿಸ್ ಜಾರಿ ಮಾಡಿದ್ದರ ಬೆನ್ನಿಗೆ ಮುರುಘಾ ಮಠದ ಲೈಂಗಿಕ ಪ್ರಕರಣಗಳ ಹಿನ್ನೆಲೆಯಲ್ಲಿ ಮುರುಘಾ ಶ್ರೀಯನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುರುಘಾಮಠದ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಆಗಸ್ಟ್‌ 26 ಶುಕ್ರವಾರ ಮುರುಘಾಶ್ರೀಗಳ ವಿರುದ್ಧ ಮೈಸೂರಿನ ನಜರ್‌ಬಾದ್‌ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸಂತ್ರಸ್ತ ಬಾಲಕಿಯರು ಒಡನಾಡಿ ಸಂಸ್ಥೆ ನೆರವು ಪಡೆದು ಕೇಸ್ ದಾಖಲಿಸಿದ್ದರು. ಬಳಿಕ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಕೇಸ್ ವರ್ಗಾವಣೆ ಆಗಿತ್ತು.

ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ.

ಮುರುಘಾಮಠದಲ್ಲೇ ವಾಸ್ತವ್ಯ ಹೂಡಿದ್ದ A-1 ಮುರುಘಾ ಶ್ರೀ ಅವರನ್ನು ಗುರುವಾರ ರಾತ್ರಿ ಬಂಧಿಸಲಾಗಿದೆ.

A- 2 ಲೇಡಿ ವಾರ್ಡನ್ ಪೊಲೀಸರ ವಶದಲ್ಲಿದ್ದು,  ಪ್ರಸ್ತುತ ಸಾಂತ್ವನ ಕೇಂದ್ರದಲ್ಲಿದ್ದಾರೆ.

A-3 ಮಠದ ಉತ್ತರಾಧಿಕಾರಿ ಬಸವಾದಿತ್ಯ , A-4 ಮಠದ ಕಾರ್ಯದರ್ಶಿ ಪರಮಶಿವಯ್ಯ, 

A-5 ವಕೀಲ ಗಂಗಾಧರಯ್ಯ ನಾಪತ್ತೆಯಾಗಿದ್ದಾರೆ.

2 September, 2022

  • 12:35 PM

    ಮುರುಗ ಮಠದ ಸ್ವಾಮಿಗಳ ವಿರುದ್ಧ ಪ್ರತಿಭಟನೆಯ ಕಿಚ್ಚು 

    ರಾಜ್ಯ ಸರಕಾರದ ನಡೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿರುವ ಕನ್ನಡ ಒಕ್ಕೂಟ 

    ರವಿ ಶೆಟ್ಟಿ ನೇತೃತ್ವದಲ್ಲಿ ಪ್ರತಿಭಟನೆ 

     ಒಬ್ಬ ಸಾಮಾನ್ಯ ವ್ಯಕ್ತಿ ಇಂತಹ ಕೆಲಸ ಮಾಡಿದ್ರೆ ಕೂಡಲೇ ಬಂಧನ ಆಗುತ್ತೆ 

    ಆದ್ರೆ ಮಠಾಧೀಶರು ಇಂತ ಕೆಲಸ ಮಾಡೋದ್ರೆ 7 ದಿನ ಬಂಧನ ಮಾಡಲು ಸಮಯ ತೆಗೆದುಕೊಳ್ಳಿತ್ತಾರೆ 

    ನೆನ್ನೆ ಬಂಧನ ಇವತ್ತು ಆಸ್ಪತ್ರೆಗೆ 

    ಒತ್ತಡ ಹೆಚ್ಚಳ ಆದ ಮೇಲೆ ಬಂಧನ 

    ನಂತರ ಆರೋಗ್ಯ ಏರುಪೇರು ಅಂತ ಆಸ್ಪತ್ರೆ ಗೆ ಹಾಕಿ ಕಣ್ಣೊರೆಸುವ ತಂತ್ರ 

    ಮುರುಘಾ ಮಠದ ಸ್ವಾಮಿಯ ಕಾವಿ ಕಳಚಬೇಕು

     ಬಡವರಿಗೆ ಒಂದು ಕಾನೂನು , ಪ್ರತಿಷ್ಠಿತ ರಿಗೆ ಒಂದು ಕಾನೂನು 

    ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲೇಬೇಕು 

    ಅಲ್ಲಿಯ ವರೆಗೆ ನಮ್ಮ ಹೋರಾಟ

  • 12:15 PM

    ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ  ಪ್ರತಿಭಟನೆ

    ದಲಿತ, ವಿದ್ಯಾರ್ಥಿ ಮಹಿಳಾ ಸಂಘಟನೆ ಗಳಿಂದ ಪ್ರತಿಭಟನೆ

    ನೂರಾರು ಜನ್ರಿಂದ ಪ್ರತಿಭಟನೆ..

  • 11:44 AM

    ಮುರುಘಾ ಶ್ರೀಗಳಿಗೆ MRI ಸ್ಕ್ಯಾನಿಂಗ್ ಶುರು

    ಜಿಲ್ಲಾಸ್ಪತ್ರೆಯ ಹಿಂಭಾಗದಲ್ಲಿರುವ MRI ಸ್ಕ್ಯಾನಿಂಗ್ ಸೆಂಟರ್.

    ಮುರುಘಾ ಶ್ರೀಗಳಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನಲೆ.

    ವೈದ್ಯರಿಂದ BP, ECG ಪರೀಕ್ಷೆ.

    ಎರಡೂ ಪರಿಕ್ಷೆಯ ವರದಿಯಲ್ಲಿ ವ್ಯತ್ಯಾಸ.

    BP-177/99
    ಇಸಿಜಿ ಪರಿಕ್ಷೆಯಲ್ಲಿ ವ್ಯತ್ಯಾಸ.

    ವೈದ್ಯರ ಬಳಿ ಕತ್ತು ನೋವೂ ಇದೆ ಎಂದಿರುವ ಶ್ರೀಗಳು.

    ಆರ್ಥೋ ಸರ್ಜನ್ ರಿಂದ ಕತ್ತು ನೋವಿನ ಪರೀಕ್ಷೆ, 

    ಡಾ.ದಿನೇಶ್ ಅವರಿಂದ ಶ್ರೀಗಳ MRI ಸ್ಕ್ಯಾನಿಂಗ್ ಮಾಡಿಸಲು ಸಲಹೆ

  • 10:58 AM

    ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ಮುರುಘಾ ಮಠದ  ಶ್ರೀ ಮಹಾಂತ ರುದ್ರಸ್ವಾಮೀಜಿ ಭೇಟಿ:-

    ದಾವಣಗೆರೆ ಸಮೀಪದ ಹೆಬ್ಬಾಳ ವಿರಕ್ತದ ಮಠದ ಮಹಾಂತ ರುದ್ರಸ್ವಾಮಿಜಿ

    ಪ್ರಸ್ತುತ ಮುರುಘಾಮಠದ ಪ್ರಭಾರ ಪೀಠಾಧಿಕಾರಿಯಾಗಿ ಮಹಾಂತ ರುದ್ರಸ್ವಾಮೀಜಿ
    ಹೇಳಿಕೆ

    ಮುರುಘಾ ಶರಣ ಆರೋಗ್ಯ ವಿಚಾರಿಸಿದ ಮಹಾಂತ ರುದ್ರ ಸ್ವಾಮೀಜಿ.

    ಕೆಲಕಾಲ ಮುರುಘಾ ಶರಣರೊಂದಿಗೆ  ಸಮಾಲೋಚನೆ ನಡೆಸಿದ ಮಹಾಂತ ರುದ್ರ ಸ್ವಾಮೀಜಿ.

    ಮುರುಘಾ ಶರಣರಿಗೆ ಮಠದಿಂದಲೇ ಉಪಹಾರ ತಂದಿದ್ದ ಮಹಾಂತರುದ್ರ ಶ್ರೀಗಳು

  • 10:53 AM

     

     

  • 10:36 AM

    ಮುರುಘಾಶ್ರೀ ಲೈಂಗಿಕ ದೌರ್ಜನ್ಯ ಕೇಸ್‌ಗೆ ಬಿಗ್‌ ಟ್ವಿಸ್ಟ್‌!

     

  • 10:16 AM

    ಮುರುಘಾಮಠದ ಸ್ವಾಮಿ ಬಂಧನ ಹಿನ್ನೆಲೆಯಲ್ಲಿ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶುರಾಮ್ ಹೇಳಿಕೆ.

    • ಸ್ವಾಮೀಜಿಯವರ ಬಂಧನ ಸಂತಸ ತಂದಿಲ್ಲ ಅವಮಾನವಾಗಿದೆ.
    • ಸ್ವಾಮೀಜಿಯ ಮೇಲೆ ಇಟ್ಟಿದ್ದಂತಹ ರಾಜಕಾರಣಿಗಳ ನಂಬಿಕೆ ಹುಸಿಯಾಗಿದೆ.
    • ಅಪಾರವಾದ ನಂಬಿಕೆ ಇಟ್ಟಿದ್ದಂತಹ ಭಕ್ತಾದಿಗಳ ಮನಸ್ಸಿಗೆ ನೋವಾಗಿದೆ.
    • ಯಾರೂ ನಂಬಲಾಗದಂತಹ ಹೀನಾಯವಾದ ಘಟನೆ.
    • ಮಕ್ಕಳ ವಿಚಾರದಲ್ಲಿ ವಂಚಿಸಿದ ಸ್ವಾಮೀಜಿ.
    • ರಾಜಕೀಯ ಮುತ್ಸದ್ದಿಗಳು ಇವರ ಮೇಲೆ ಬಹಳ ನಂಬಿಕೆ ಇಟ್ಟಿದ್ದರು.
    • ಯಾವುದೇ ಗುರು ಧರ್ಮದ ಪರವಾಗಿ ಸತ್ಯದ ಪರವಾಗಿ ಇರಬೇಕು‌.
    • ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಕೆಲಸ ಇದು.
    • ಈ ಕೃತ್ಯ ಇಬ್ಬರು ಮಕ್ಕಳ ಮೇಲೆ ನಡೆದಿದ್ದಲ್ಲ.
    • ಈತನ ಕೃತ್ಯ ಸಾಕಷ್ಟು ಮಕ್ಕಳ ಮೇಲೆ ನಡೆದಿದೆ‌.
    • ಪೂರ್ಣಪ್ರಮಾಣದ ತನಿಖೆ ಆಗಬೇಕು ಎಂಬುದು ನನ್ನ ಅಭಿಪ್ರಾಯ.
  • 10:11 AM

    ಜಿಲ್ಲಾಸ್ಪತ್ರೆಗೆ ಎಸ್.ಪಿ. ಕೆ.ಪರಶುರಾಮ್ ಬೇಟಿ. 

    ಜನಜಾತ್ರೆ ನಿಯಂತ್ರಿಸಲು ಹೆಚ್ಚುವರಿ  ಪೊಲೀಸರ ನಿಯೋಜನೆ.

    ಜಿಲ್ಲಾಸ್ಪತ್ರೆ ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್

  • 10:08 AM

    ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಮುರುಘಾ ಶರಣರಿಗೆ  ಇಸಿಜಿ..

    ಆಸ್ಪತ್ರೆಯಲ್ಲಿಜನಜಾತ್ರೆ. ಪೊಲೀಸರ ಹರಸಾಹಸ.

  • 09:57 AM

    ಶರಣರು ಬೆಂಗಳೂರು ಆಸ್ಪತ್ರೆಗೆ ಅಥವಾ ಅವರ ಮಠದ ಬಸವೇಶ್ವರ ಆಸ್ಪತ್ರೆಗೆ ರವಾನೆ ಸಾಧ್ಯತೆ

  • 09:19 AM

    ಮುಂಜಾನೆ ಶ್ರೀಗಳಿಗೆ ಎದೆನೋವು!

    ಮುರುಘಾ ಶರಣರಿಗೆ ಎದೆನೋವು 

    ಜೈಲಿನಿಂದ ಆಸ್ಪತ್ರೆಗೆ ರವಾನೆ 

    ಜಿಲ್ಲಾ ಆಸ್ಪತ್ರೆಯಲ್ಲಿ ಇಸಿಜಿ 

    ಜಿಲ್ಲಾ ಸರ್ಜನ್ ಬಸವರಾಜ್ ಹಾಗೂ ಹಿರಿಯ ವೈದ್ಯ ರೂಪಾರಿಂದ ತಪಾಸಣೆ .

     

  • 09:12 AM

    ಮುರುಘಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು!

    ಲೈಂಗಿಕ ಕಿರುಕುಳ ಆರೋಪದ ಅಡಿಯಲ್ಲಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಮುರುಘಾ ಶ್ರೀಗಳ ಆರೋಗ್ಯದಲ್ಲಿ ಹಠಾತ್ ಏರುಪೇರಾಗಿದೆ. ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ,  ಮುರುಘಾ ಶ್ರೀಗಳಿಗೆ ಎದೆನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. 

  • 08:37 AM

    ಮುರುಘಾಶ್ರೀಗೆ ಮೆಡಿಸಿನ್ ಮತ್ತು ಟೂತ್ ಪೇಸ್ಟ್,ಬ್ರಶ್ ನೀಡಿಬಂದ ವಕೀಲರು.

    ಬೆಳಗ್ಗೆ 6ಕ್ಕೆ ಎದ್ದು ಕುಳಿತಿರುವ ಮುರುಘಾಶ್ರೀ.

    2:50ರ ಸುಮಾರಿಗೆ ಬಂಧಿತ ಶ್ರೀ ಕಾರಾಗೃಹಕ್ಕೆ.

    3ಗಂಟೆಯಿಂದ ಬಹುತೇಕ ಎದ್ದೇ ಕುಳಿತಿರುವ ಮುರುಘಾಶ್ರೀ.

    ಕಾರಗೃಹಕ್ಕೆ ಬಂದು ಮೆಡಿಸಿನ್, ಟೂತ್ ಬ್ರೆಷ್, ಪೇಸ್ಟ್ ಸಿಬ್ಬಂದಿಗೆ. ನೀಡಿ ತೆರಳಿದ ವಕೀಲರು.

    ಮಠದ ಪರ ವಕೀಲ ಉಮೇಶ್ ರಿಂದ ರವಾನೆ.

    ಮದ್ಯರಾತ್ರಿ ಮುರುಘಾಶ್ರೀ ಬಂಧನ ತಿಳಿದು ಕಾರಾಗೃಹ ಸಿಬ್ಬಂದಿಯೇ ಶಾಕ್.

    ಸಂಜೆ ಮನೆಗೆ ತೆರಳಿದ್ದ ಸಿಬ್ಬಂದಿ ಬೆಳಗ್ಗೆ ಡ್ಯೂಟಿಗೆ ಬಂದಾಗ ಶಾಕ್.

    ಮುರುಘಾಶ್ರೀ ಬಂಧನ ವಿಚಾರ ತಿಳಿದು ಶಾಕ್.

    ಈ ಹಿಂದೆ ಕಾರಾಗೃಹದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದ್ದ ಮುರುಘಾಶ್ರೀ.

    ಜಾಗೃತಿ ಕಾರ್ಯಕ್ರಮ ನಡೆಸಿದ ಕಾರಾಗೃಹದಲ್ಲಿಯೇ ಬಂಧಿಯಾಗಿರುವ ಮುರುಘಾಶ್ರೀ 

  • 08:33 AM

    ಮುರುಘಾ ಶರಣರು ಅರೆಸ್ಟ್..  ಲೈವ್ ಅಪ್ಡೇಟ್ ಅನ್ನು ಇಲ್ಲಿ ವೀಕ್ಷಿಸಿ...

     

  • 08:31 AM

    ಮುರುಗಾ ಶ್ರೀಗಳಿಗೆ ವಿಚಾರಣಾಧೀನ ಖೈದಿ ನಂಬರ್ ನೀಡಿರೊ ಜೈಲಾಧಿಕಾರಿಗಳು

    ಮುರುಗಾ ಶ್ರೀ ವಿಚಾರಣಾಧೀನ ಖೈದಿ  ನಂಬರ್ 2261

  • 07:48 AM

    ಮುರುಘಾ ಶರಣರ ಬಂಧನ, ಇಡೀ ‌ರಾತ್ರಿ ವಿಚಾರಣೆ 

    ನ್ಯಾಯಾಧೀಶರಾದ ಕೋಮಲಾ ಮುಂದೆ ಹಾಜರುಪಡಿಸಿದ ಪೋಲೀಸರು.

    14 ದಿನಗಳ ನ್ಯಾಯಾಂಗ ಬಂಧನ. .ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ರವಾನೆ.

    ಆರೋಗ್ಯದಲ್ಲಿ ಏರುಪೇರು  ಜಿಲ್ಲಾಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ

    ಎಸ್.ಪಿ. ಕೆ ಪರಶುರಾಮ್ ಹೇಳಿಕೆ.

    ಜಿಲ್ಲಾದ್ಯಂತ ಹೈ ಅಲರ್ಟ್

Trending News