Lok Sabha election 2024: "ಎಲೆಕ್ಟ್ರೋಲ್ ಬಾಂಡ್ ಗಳ ಮೂಲಕ ಪ್ರಧಾನಿ ಮೋದಿಯವರ ಮುಖವಾಡ ಕಳಚಿದೆ"

ಎಲೆಕ್ಟ್ರೋಲ್ ಬಾಂಡ್ ಗಳ ಮೂಲಕವೇ ಸುಮಾರು 7,500 ಕೋಟಿ ರೂ.ಗಳ ಅಕ್ರಮ ನಡೆಸಿ,  ಮೋದಿಯವರು ಭ್ರಷ್ಟಾಚಾರಕ್ಕೆ ಹೊಸ ಭಾಷ್ಯ ಬರೆದಿದ್ದಾರೆ. ಅವರ ಮುಖವಾಡ ಕಳಚಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

Written by - Manjunath N | Last Updated : Apr 13, 2024, 08:12 PM IST
  • ರಾಜು ಆಲಗೂರ ವಿದ್ಯಾವಂತರಿದ್ದಾರೆ, ಬುದ್ಧಿವಂತರಿದ್ಧಾರೆ.
  • ಇಂಗ್ಲಿಷ್ ಹಿಂದಿ ಎಲ್ಲವನ್ನೂ ಸರಾಗವಾಗಿ ಮಾತನಾಡಬಲ್ಲರು.
  • ಶ್ರೀ ರಮೇಶ್ ಜಿಗಜಿಣಗಿಯವರು 2 ಬಾರಿ ಸಂಸದರಾದರೂ ಸಂಸತ್ತಿನಲ್ಲಿ ನಮ್ಮ ಜಿಲ್ಲೆಯ ಧ್ವನಿಯಾಗಿಲ್ಲ.
 Lok Sabha election 2024: "ಎಲೆಕ್ಟ್ರೋಲ್ ಬಾಂಡ್ ಗಳ ಮೂಲಕ ಪ್ರಧಾನಿ ಮೋದಿಯವರ ಮುಖವಾಡ ಕಳಚಿದೆ" title=

ವಿಜಯಪುರ: ಎಲೆಕ್ಟ್ರೋಲ್ ಬಾಂಡ್ ಗಳ ಮೂಲಕವೇ ಸುಮಾರು 7,500 ಕೋಟಿ ರೂ.ಗಳ ಅಕ್ರಮ ನಡೆಸಿ,  ಮೋದಿಯವರು ಭ್ರಷ್ಟಾಚಾರಕ್ಕೆ ಹೊಸ ಭಾಷ್ಯ ಬರೆದಿದ್ದಾರೆ. ಅವರ ಮುಖವಾಡ ಕಳಚಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಅವರು ಬಬಲೇಶ್ವರ ಮತ ಕ್ಷೇತ್ರದ  ಮಮದಾಪೂರ ದಲ್ಲಿ ಭರ್ಜರಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಈ ಕುರಿತಾಗಿ ಮಾತನಾಡಿದ ಅವರು "ಲೋಕಸಭೆಯಲ್ಲಿ ವಿಜಯಪುರದ ಧ್ವನಿಯಾಗಲು ಶ್ರೀ ರಾಜು ಆಲಗೂರ ಅವರಿಗೆ ಮತದಾನ ಮಾಡುವಂತೆ  ಮನವಿ ಮಾಡಿದೆ ಎಂದು ಹೇಳಿದರು.ಕಾಂಗ್ರೆಸ್ ಜನರ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡುತ್ತಿದೆ. ಮಮದಾಪೂರ ಕೆರೆ ತುಂಬಿಸಿದ್ದು ಒಂದು ಉದಾಹರಣೆ ಮಾತ್ರ. ಇದೇ ರೀತಿ ಎಲ್ಲ ಕೆಲಸಗಳು ಸುಗಮವಾಗಿ ಆಗಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಅವರು ಆಗ್ರಹಿಸಿದರು.

ರಾಜು ಆಲಗೂರ ವಿದ್ಯಾವಂತರಿದ್ದಾರೆ, ಬುದ್ಧಿವಂತರಿದ್ಧಾರೆ. ಇಂಗ್ಲಿಷ್ ಹಿಂದಿ ಎಲ್ಲವನ್ನೂ ಸರಾಗವಾಗಿ ಮಾತನಾಡಬಲ್ಲರು. ಶ್ರೀ ರಮೇಶ್ ಜಿಗಜಿಣಗಿಯವರು 2 ಬಾರಿ ಸಂಸದರಾದರೂ ಸಂಸತ್ತಿನಲ್ಲಿ ನಮ್ಮ ಜಿಲ್ಲೆಯ ಧ್ವನಿಯಾಗಿಲ್ಲ. ರಾಜು ಆಲಗೂರ ಅವರು ಲೋಕಸಭೆಯಲ್ಲಿ ನಮ್ಮೆಲ್ಲರ ಧ್ವನಿಯಾಗಲಿದ್ದಾರೆ. ಅವರಿಗೆ ನೀಡುವ ಒಂದೊಂದು ಮತವೂ ನನಗೆ ನೀಡಿದಂತೆ. ಅವರಿಗೆ ಮತದಾನ ಮಾಡಿ, ಗೆಲ್ಲಿಸುವ ಮೂಲಕ ನನ್ನ ಕೈ ಬಲಪಡಿಸಿ ಎಂದು ಅವರು ಆಗ್ರಹಿಸಿದರು.

ನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News