ಶಿವಮೊಗ್ಗ: ಬದಲಾವಣೆಗೆ ಈಗಾಗಲೇ ನಿರ್ಧರಿಸಿದ್ದೇನೆ. ಜಿಲ್ಲೆಯ ಸ್ನೇಹಿತರ ಜತೆ ಸಮಾಲೋಚಿಸಿ ಆದಷ್ಟು ಬೇಗ ಬದಲಾಗುತ್ತೇನೆ. ಇನ್ನು ಹೆಚ್ಚು ದಿನ ಕಾಯುವುದಿಲ್ಲ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದ್ದಾರೆ.
‘ಕಾಂಗ್ರೆಸ್(Congress) ಪಕ್ಷ ನನಗೆ ಯಾವತ್ತೂ ಮುಜಗರ ತಂದಿಲ್ಲ. ಕಳೆದ ಎರಡು ಲೋಕಸಭಾ ಚುನಾವಣೆಯಲ್ಲೂ ದೊಡ್ಡ ಮಟ್ಟದಲ್ಲಿ ಮತ ಪಡೆಯಲು ನೆರವಾಗಿದೆ. ಕಾಗೋಡು ತಿಮ್ಮಪ್ಪನವರು ನನ್ನನ್ನು ಒಬ್ಬ ಪ್ರತಿಪಕ್ಷದವ ಎಂದು ಗುರುತಿಸದೆ ಜನಪ್ರತಿನಿಧಿ ಎಂಬ ನೆಲೆಗಟ್ಟಿನಲ್ಲಿ ನೋಡಿದ್ದರು. ಸಿದ್ದರಾಮಯ್ಯನವರು, ಡಿ.ಕೆ. ಶಿವಕುಮಾರ್‌ರಂತ ನಾಯಕರು ವಿಶ್ವಾಸದಲ್ಲಿಯೇ ಕಂಡಿದ್ದರು. ಈ ಮೊದಲು ಕಾಂಗ್ರೆಸ್‌ನಲ್ಲಿ ನಾನು ಇದ್ದವ,’ ಎಂದು ಹೇಳಿದರು.
N.Mahesh: 'ಸಚಿವ ಸ್ಥಾನ ಸಿಕ್ಕರೆ, ಬಿಜೆಪಿ ಸೇರ್ಪಡೆ ಖಚಿತ'
‘ಪಕ್ಷ ಅಧಿಕಾರಕ್ಕೆ ಬಂದಾಗ ಕಾರ್ಯಕರ್ತರನ್ನು ಕಡೆಗಣಿಸಲಾಯಿತು. ಬಸವರಾಜ ಹೊರಟ್ಟಿಯವರನ್ನು ಸಭಾಪತಿ ಸ್ಥಾನದಿಂದ ಇಳಿಸಿದ್ದಕ್ಕೆ ವರಿಷ್ಠರ ವಿರುದ್ಧ ಹೇಳಿಕೆ ನೀಡಿದೆ. ವಿಧಾನ ಪರಿಷತ್ ಸ್ಥಾನದ ಆಫರ್ ಕೊಟ್ಟಾಗ ವೈಎಸ್‌ವಿ ದತ್ತಾ, ರಮೇಶ್ ಬಾಬು ಅವರನ್ನು ಮಾಡಲು ಸೂಚಿಸಿದರೆ, ದೇವೇಗೌಡರ ಪಿಎ ಆಗಿದ್ದ ತಿಪ್ಪೇಸ್ವಾಮಿ ಅವರಿಗೆ ಆದ್ಯತೆ ನೀಡಿದರು. ಕುಮಾರಣ್ಣ ಹಾಗೂ ದೇವೇಗೌಡರ ವರ್ತನೆ ನೋಡಿದಾಗ ಪಕ್ಷ ಜನರ ವಿಶ್ವಾಸ ಕಳೆದುಕೊಂಡಿರುವುದು ವೇದ್ಯವಾಯಿತು,’ ಎಂದು ಅಸಮಾಧಾನ ಹೊರಹಾಕಿದ್ದಾರೆ.
Ration Card: ಪಡಿತರದಾರರಿಗೆ ರಾಜ್ಯ ಸರ್ಕಾರದಿಂದ 'ಭರ್ಜರಿ ಸಿಹಿ ಸುದ್ದಿ'..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.