ಮಾದಪ್ಪನ ಭಕ್ತರಿಗೆ ಗುಡ್‌ ನ್ಯೂಸ್‌...! ನಾಗಮಲೆಗೆ ತೆರಳಲು ಅವಕಾಶ, ಆದ್ರೆ ಪ್ರತಿ ದಿನ ಇಷ್ಟು ಮಂದಿಗೆ ಅನುವು

ನಾಗಮಲೆ ಶ್ರೀ ಕ್ಷೇತ್ರಕ್ಕೆ ಹೋಗುವಾಗ ಹಾಗೂ ಬರುವಾಗ ಕಾಡು ಪ್ರಾಣಿಗಳ ದಾಳಿ ನಡೆಸಿದ ಪರಿಣಾಮ ಭಕ್ತಾದಿಗಳು ಮೃತಪಟ್ಟಿದ್ದರಿಂದ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕಳೆದ ಫೆ‌.5 ರಿಂಸ ಶ್ರೀ ಕ್ಷೇತ್ರ ನಾಗಮಲೆ ಕ್ಷೇತ್ರಕ್ಕೆ  ಜೀಪ್ ಮುಖಾಂತರ ಹಾಗೂ ಪಾದಯಾತ್ರೆಯ ಮೂಲಕ ಭಕ್ತಾದಿಗಳು ತೆರಳಲು ನಿರ್ಬಂಧ ವಿಧಿಸಲಾಗಿತ್ತು... ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Oct 16, 2024, 06:15 PM IST
    • ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವವರು ಈಗ ನಾಗಮಲೆಗೆ ತೆರಳಬಹುದಾಗಿದೆ.
    • ನಾಗಮಲೆ ಶ್ರೀ ಕ್ಷೇತ್ರಕ್ಕೆ ಅರಣ್ಯ ಇಲಾಖೆಯ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು
    • ಪಾದಯಾತ್ರೆಯ ಮೂಲಕ ಭಕ್ತಾದಿಗಳು ತೆರಳಲು ನಿರ್ಬಂಧ ವಿಧಿಸಲಾಗಿತ್ತು.
ಮಾದಪ್ಪನ ಭಕ್ತರಿಗೆ ಗುಡ್‌ ನ್ಯೂಸ್‌...! ನಾಗಮಲೆಗೆ ತೆರಳಲು ಅವಕಾಶ, ಆದ್ರೆ ಪ್ರತಿ ದಿನ ಇಷ್ಟು ಮಂದಿಗೆ ಅನುವು title=

ಚಾಮರಾಜನಗರ: ದಕ್ಷಿಣ ಭಾರತದ ಪ್ರಮುಖ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವವರು ಈಗ ನಾಗಮಲೆಗೆ ತೆರಳಬಹುದಾಗಿದೆ. ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ನಾಗಮಲೆ ಶ್ರೀ ಕ್ಷೇತ್ರಕ್ಕೆ ಅರಣ್ಯ ಇಲಾಖೆಯ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಂಡು ಭಕ್ತಾದಿಗಳು ಇದರ ಸದ್ಬಳಕೆ ಮಾಡಿಕೊಂಡು ನಾಗಮಲೆಗೆ ಕಾಲ್ನಡಿಗೆಯಲ್ಲಿ ತೆರಳಬಹುದಾಗಿದೆ.

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವಂತಹ ಬಹುತೇಕ ಭಕ್ತಾದಿಗಳು ನಾಗಮಲೆ ಕ್ಷೇತ್ರಕ್ಕೆ ಹೋಗಿ ಬರುವುದು ಸಂಪ್ರದಾಯವಾಗಿತ್ತು. ಜಾತ್ರಾ ಮಹೋತ್ಸವ, ಹಬ್ಬ ಹರಿದಿನ ಸೇರಿದಂತೆ ಇನ್ನಿತರ ದಿನಗಳಲ್ಲಿ ಭಕ್ತಾದಿಗಳು ದಿನದ 24 ಗಂಟೆಯೂ ನಾಗಮಲೆ ಕ್ಷೇತ್ರಕ್ಕೆ ಹೋಗಿ ಬರುತ್ತಿದ್ದರು. 

ಇದನ್ನೂ ಓದಿ:ಸೀರೆಯ ಮೇಲೆ ಪ್ರಜ್ವಲ್ ರೇವಣ್ಣ ವೀರ್ಯ: ಮಾಜಿ ಸಂಸದನಿಗೆ ಸಂಕಷ್ಟ

ಆದರೆ ನಾಗಮಲೆ ಶ್ರೀ ಕ್ಷೇತ್ರಕ್ಕೆ ಹೋಗುವಾಗ ಹಾಗೂ ಬರುವಾಗ ಕಾಡು ಪ್ರಾಣಿಗಳ ದಾಳಿ ನಡೆಸಿದ ಪರಿಣಾಮ ಭಕ್ತಾದಿಗಳು ಮೃತಪಟ್ಟಿದ್ದರಿಂದ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಕಳೆದ ಫೆ‌.5 ರಿಂಸ ಶ್ರೀ ಕ್ಷೇತ್ರ ನಾಗಮಲೆ ಕ್ಷೇತ್ರಕ್ಕೆ ಜೀಪ್ ಮುಖಾಂತರ ಹಾಗೂ ಪಾದಯಾತ್ರೆಯ ಮೂಲಕ ಭಕ್ತಾದಿಗಳು ತೆರಳಲು ನಿರ್ಬಂಧ ವಿಧಿಸಲಾಗಿತ್ತು. 

ಈಗ ಪ್ರತಿದಿನ 200 ಮಂದಿಗೆ ಅವಕಾಶ : ನಾಗಮಲೆಗೆ ಚಾರಣಕ್ಕೆ ತೆರಳಲು ಅರಣ್ಯ ಇಲಾಖೆಯ www.aranyavihaara.karanataka.gov.inಗೆ ಭೇಟಿ ನೀಡಿ ನೋಂದಾಯಿಸಿಕೊಂಡು ನಂತರ ದಿನಾಂಕ ನಿಗದಿ ಮಾಡಿಕೊಂಡು ನಾಗಮಲೆ ದರ್ಶನ ಪಡೆಯಬಹುದಾಗಿದೆ.

ಭಕ್ತಾದಿಗಳಿಗೆ ಹಾಗೂ ಚಾರಿಣಿಕರಿಗೆ ಬೆಳಗ್ಗೆ 6 ರಿಂದ 10 ಗಂಟೆಯ ತನಕದ ಸ್ಲಾಟ್ ನ ಬುಕಿಂಗ್ ಗೆ ಅವಕಾಶ ನೀಡಲಾಗಿದ್ದು ಒಬ್ಬರಿಗೆ 200 ರೂ.ನಿಗದಿ ಮಾಡಲಾಗಿದೆ. ನಾಗಮಲೆ ಯಾತ್ರೆಯು 14 ಕಿ.ಮೀ. ನಷ್ಟಿದ್ದು ಹಳೆಯೂರು ಗೇಟ್ ನಿಂದ ಚಾರಣ ಆರಂಭಗೊಳ್ಳಲಿದೆ, ಗೈಡ್ ಕೂಡ ಇರಲಿದ್ದಾರೆ.

ಇದನ್ನೂ ಓದಿ:ಮಳೆ ಹಿನ್ನೆಲೆ ಮೆಟ್ರೋ ಹಳಿ ಮೇಲೆ ಬಿದ್ದ ಮರ: ಮೆಟ್ರೋ ಸಂಚಾರ ವ್ಯತ್ಯಯ

ಅರಣ್ಯ ಇಲಾಖೆಯು ಪ್ರಾಯೋಗಿಕವಾಗಿ ಒಂದು ದಿನಕ್ಕೆ 200 ಜನರಿಗೆ ಚಾರಣಕ್ಕೆ ಅವಕಾಶ ಕಲ್ಪಿಸಲಾಗಿದ್ದು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಜನರಿಗೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಭಕ್ತಾದಿಗಳು ಹೆಚ್ಚಿನ ಮಾಹಿತಿಗಾಗಿ ಮಹದೇಶ್ವರ ಬೆಟ್ಟ ವನ್ಯಜೀವಿ ವಲಯ ವಲಯ ಅರಣ್ಯಾಧಿಕಾರಿ 9481995510, ಡಿ ಆರ್ ಎಫ್  9481995527, ಪಾಲಾರ್ ಆರ್ ಎಫ್ 9481995512, ಡಿ ಆರ್ ಎಫ್ ಓ 9481995531, ಗಸ್ತು ಅರಣ್ಯಪಾಲಕ ಇಂಡಿಗನತ್ತ 9481995597  ಸಂಪರ್ಕಿಸಬಹುದಾಗಿದೆ.

ನಾಗಮಲೆ ಮಾದಪ್ಪನ ಭಕ್ತರ ಆರಾಧ್ಯ ನೆಲೆ: ಮಲೆ ಮಹದೇಶ್ವರ ಸ್ವಾಮಿ ಲಿಂಗದ ರೂಪದಲ್ಲಿ ನಾಗಮಲೆಯಲ್ಲಿ ನೆಲೆಸಿದ್ದಾರೆಂಬ ನಂಬಿಕೆ ಇದ್ದು ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದವರು ನಾಗಮಲೆಗೆ ಬರುವುದು ಸಂಪ್ರದಾಯವಾಗಿತ್ತು. ದಟ್ಟ ಕಾಡಿನ ಮಧ್ಯೆ ಕಾಲ್ನಡಿಗೆಯಲ್ಲಿ ಸಾಗುವುದು ದೈವಿಕ ಜೊತೆ ರೋಮಾಂಚಕ ಅನುಭವ ನೀಡಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News