ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಆರೋಪ ಕೇಸ್ ನಲ್ಲಿ ಪ್ರಬಲ ಸಾಕ್ಷಿಗಳು ಸಿಕ್ಕಿವೆ. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಮಹಿಳೆಯ ಧರಿಸಿದ್ದ ಬಟ್ಟೆಗಳನ್ನು ಎಫ್ ಎಸ್ ಎಲ್ ವರದಿಗೆ ಕಳುಹಿಸಿದ್ದ ತನಿಖಾ ತಂಡದ ಕೈಗೆ ರಿಪೋರ್ಟ್ ಸಿಕಿದ್ದು ಪ್ರಜ್ವಲ್ ರೇವಣ್ಣಗೆ ಮಹಾಸಂಕಷ್ಟ ಎದುರಾಗಿದೆ.
ಹೌದು... ಅತ್ಯಾಚಾರ ಕೇಸ್ನಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಮಹಾ ಸಂಕಷ್ಟ ಎದುರಾಗಿದೆ. ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಸೀರೆಯಲ್ಲಿ ಸಿಕ್ಕ ವೀರ್ಯ ಪ್ರಜ್ವಲ್‌ದೇ ಎಂದು DNA ಪರೀಕ್ಷೆಯಲ್ಲಿ ಸಾಬೀತಾಗಿದೆ. ಈ ಹಿನ್ನೆಲೆ ಮಾಜಿ ಸಂಸದ ಪ್ರಜ್ವಲ್ ಗೆ ಗಂಡಾಂತರ ಶುರುವಾಗಿದೆ. ವೀರ್ಯ ಪ್ರಜ್ವಲ್ ದೆ ಎಂದು ಕನ್ಫರ್ಮ್ ಆಗ್ತಿದ್ದಂತೆ, ಎಸ್ ಐಟಿ ಅಧಿಕಾರಿಗಳು ಶೀಘ್ರವೇ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಕೆಗೆ ತಯಾರಿ ನಡೆಸಿದ್ದಾರೆ. 2 ದಿನದ ಹಿಂದೆ DNA ಟೆಸ್ಟ್ ರಿಪೋರ್ಟ್ ಎಸ್ ಐಟಿಗೆ ಸಿಕ್ಕಿದೆ. ಹಾಸನದ ಸಂಸದರ ಅತಿಥಿ ಗೃಹ, ಹೊಳೆನರಸೀಪುರ, ತೋಟದ ಬೆಂಗಳೂರಿನ ಬಸವನಗುಡಿಯ ಮನೆಯಲ್ಲಿ ಬೆಡ್‌ಶೀಟ್ ಕೆಲ ಬಟ್ಟೆಗಳು, ಸಂತ್ರಸ್ತೆಯಿಂದ ಸೀರೆಗಳನ್ನ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ರು. ಇವೆಲ್ಲವನ್ನ ಕೋರ್ಟ್ ಅನುಮತಿ ಪಡೆದು ಡಿಎನ್ ಎ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ವರದಿ ಬಂದಿದ್ದು ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿರೋದು ಕನ್ಫರ್ಮ್ ಆಗಿದೆ.
ಇದನ್ನೂ ಓದಿ:ಮಳೆ ಹಿನ್ನೆಲೆ ಮೆಟ್ರೋ ಹಳಿ ಮೇಲೆ ಬಿದ್ದ ಮರ: ಮೆಟ್ರೋ ಸಂಚಾರ ವ್ಯತ್ಯಯ
ಕೆಲಸದಾಕೆ ಮೇಲೆ ಪ್ರಜ್ವಲ್ ದೌರ್ಜನ್ಯವೆಸಗಿದ್ದು ಮುಳುವಾದಂತೆ ಕಾಣ್ತಿದೆ. ಅತ್ಯಾಚಾರ ನಡೆದ ದಿನ ಮನೆ ಕೆಲಸದಾಕೆ ಧರಿಸಿದ್ದ ಬಟ್ಟೆ ಪ್ರಜ್ವಲ್ ಮನೆಯಲ್ಲೆ ಇತ್ತಂತೆ. ಮನೆ ಕೆಲಸದಾಕೆ ಮಗಳ ಮದುವೆ ನಿಮಿತ್ತ ಬಟ್ಟೆ ಒಗೆಯದೆ ಮದುವೆಗೆ ರಜೆ ಹಾಕಿ ಹೋಗಿದ್ಳಂತೆ. ಕೆಲ ತಿಂಗಳ ಬಳಿಕ ಆ ಮನೆ ಕೆಲಸದಾಕೆ ಬಟ್ಟೆ ಕೇಳಲು ಬಂದಾಗ ಪ್ರಜ್ವಲ್ ಮನೆಯವರು ಯಾವ ಬಟ್ಟೆ ಇಲ್ಲ ಹೋಗು ಎಂದು ಹೇಳಿ ಕಳುಹಿಸಿದ್ರಂತೆ. ಈ ಮಧ್ಯೆ ಹೊಸ ಕೆಲಸದವರು ಬಂದಿದ್ದು ಹಳೆ ಕೆಲಸದಾಕೆ ಬಟ್ಟೆಗಳು ಹಾಗೂ ಕೆಲ ವಸ್ತುಗಳನ್ನ ಮೂಟೆ ಕಟ್ಟೆ ಮೇಲೆ ಹಾಕಿದ್ರಂತೆ. ಸದ್ಯ ಇದೇ ಮೂಟೆಯಲ್ಲಿದ್ದ ಸೀರೆ ಪ್ರಜ್ವಲ್ ಗೆ ಉರುಳಾಗಿದೆ. ಆ ದಿನ ಸಂತ್ರಸ್ತೆಗೆ ಬಟ್ಟೆ ಕೊಟ್ಟು ಕಳುಹಿಸಿದ್ದರು ಸಗ ಈ ಪರಿಸ್ಥಿತಿ ಬರ್ತಿರ್ಲಿಲ್ವೇನೋ ಅನ್ನೋದು ಕೆಲವರ ಮಾತಾಗಿದೆ.
ಅತ್ಯಾಚಾರವೆಸಗಿ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಮತ್ತು ತನ್ನ ಅಧಿಕಾರ ಬಳಸಿಕೊಂಡು ಬೆದರಿಕೆ ಹಾಕಿದ್ದಾರೆಂದು ಸಂತ್ರಸ್ತೆ ಮಹಿಳೆಯೂ ದೂರು ನೀಡಿದ್ರು. ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿ ವಿದೇಶಕ್ಕೆ ಎಸ್ಕೇಪ್ ಆಗಿದ್ದ ಪ್ರಜ್ವಲ್ ರೇವಣ್ಣ ತಿಂಗಳುಗಳ ನಂತರ ವಾಪಸ್ ಬಂದಿದ್ರು. ಎಸ್ ಐಟಿ ಅಧಿಕಾರಿಗಳು ಮಾಜಿ ಸಂಸದನಿಗೆ ಡಿಎನ್ ಎ ಪರೀಕ್ಷೆ ಮಾಡಿಸಿದ್ರು. ಒಟ್ಟಿನಲ್ಲಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮೆರೆಯುತ್ತಿದ್ದ ಮಾಜಿ ಸಂಸದ ನಿಗೆ ದೊಡ್ಡ ಹೊಡೆತ ಬಿದ್ದಿದೆ. ಮುಂದೆ ಕಾನೂನಾತ್ಮಕ ಹೋರಾಟದಲ್ಲಿ ಏನಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ