ಅಬ್ಬಬ್ಬಾ ..! ಬರೋಬ್ಬರಿ 19 ಲಕ್ಷಕ್ಕೆ ಮಾರಾಟವಾದ ಆದ ಹೋರಿ...!

ನೆರೆದಿರುವ  ಲಕ್ಷಾಂತ ಜನರ ನಡುವೆ ಭಯವಿಲ್ಲದೆ ವೇಗವಾಗಿ ಸಾಗೋ ಕೊಬ್ಬರಿ ಹೋರಿಗೆ ಅಭಿಮಾನಿಗಳು ಹೆಚ್ಚು. ಅಂಥಹ ಹೋರಿಗಳ ಸಾಲಲ್ಲಿ ವಾಸನ ಗ್ರಾಮದ ಬ್ರಹ್ಮ ಅನ್ನೋ ಹೋರಿ ಕೂಡಾ ಒಂದಾಗಿತ್ತು.  

Written by - Zee Kannada News Desk | Last Updated : Aug 11, 2022, 10:31 AM IST
  • ಉತ್ತರ ಕರ್ನಾಟಕದಲ್ಲಿ ಕೊಬ್ಬರಿ ಹೋರಿ ಹಬ್ಬ ಪ್ರಖ್ಯಾತಿ
  • ಹೋರಿ ಹಬ್ಬದಲ್ಲಿ ಎಲ್ಲರ ಮನ ಗೆದ್ದಿದ್ದ ವಾಸನ ಗ್ರಾಮದ ಬ್ರಹ್ಮ
  • ಇದೀಗ 19 ಲಕ್ಷ ರೂಪಾಯಿಗೆ ತಮಿಳುನಾಡು ಪಾಲಾದ ಬ್ರಹ್ಮ
 ಅಬ್ಬಬ್ಬಾ ..! ಬರೋಬ್ಬರಿ 19 ಲಕ್ಷಕ್ಕೆ  ಮಾರಾಟವಾದ ಆದ ಹೋರಿ...! title=
bull sale (file photo)

ಹಾವೇರಿ : ಉತ್ತರ ಕರ್ನಾಟಕದಲ್ಲಿ ಜನಪ್ರಿಯ ಪಡೆದ ಹಬ್ಬ ಅಂದರೆ ಅದು ಕೊಬ್ಬರಿ ಹೋರಿ ಹಬ್ಬ. ಲಕ್ಷಾಂತ ಜನರ ನಡುವೆ ಭಯವಿಲ್ಲದೆ ವೇಗವಾಗಿ ಸಾಗೋ ಕೊಬ್ಬರಿ ಹೋರಿ ಕಂಡು ಹೋರಿ ಅಭಿಮಾನಿಗಳು ಸಿಳ್ಳೆ, ಕೇಕೆ ಹಾಕಿ ಸಂಭ್ರಮಿಸುತ್ತಾರೆ. ಈ ಹಬ್ಬದ ವೇಳೆ ಸಾವಿರಾರು ಜನ ಅಲ್ಲಿ ನೆರೆದಿರುತ್ತಾರೆ. ಈ ಭಾಗದ ಜನರ ಹೋರಿ ಹಬ್ಬ  ಸಂಭ್ರಮವನ್ನು ಹೇಳತೀರದು. 

ನೆರೆದಿರುವ ಲಕ್ಷಾಂತ ಜನರ ನಡುವೆ ಭಯವಿಲ್ಲದೆ ವೇಗವಾಗಿ ಸಾಗೋ ಕೊಬ್ಬರಿ ಹೋರಿಗೆ ಅಭಿಮಾನಿಗಳು ಹೆಚ್ಚು. ಅಂಥಹ ಹೋರಿಗಳ ಸಾಲಲ್ಲಿ ವಾಸನ ಗ್ರಾಮದ ಬ್ರಹ್ಮ ಅನ್ನೋ ಹೋರಿ ಕೂಡಾ ಒಂದಾಗಿತ್ತು. ಕರ್ನಾಟಕದಲ್ಲಿ ನಡೆಯೋ ಪ್ರತಿ ಹೋರಿ ಹಬ್ಬದಲ್ಲಿ ವಾಸನ ಗ್ರಾಮದ 'ಬ್ರಹ್ಮ' ಅಭಿಮಾನಿಗಳ ಮನಸ್ಸು ಗೆದ್ದಿದ್ದ.  'ಬ್ರಹ್ಮ ಇದ್ದಾನೆಂದರೆ ಆ ಹೋರಿ ಹಬ್ಬದ ಕಳೆ ಹೆಚ್ಚುತ್ತಿತ್ತು. ಆದರೆ ಈಗ 'ಬ್ರಹ್ಮ ತಮಿಳುನಾಡ ಪಾಲಾಗಿದ್ದಾನೆ. 

ಇದನ್ನೂ ಓದಿ : ADGP Alok Kumar : ಬೆಳ್ಳಾರೆ ಪ್ರವೀಣ್ ಕೊಲೆ ಕೇಸ್ : ಆರೋಪಿಗಳ ಆಸ್ತಿ ಮುಟ್ಟುಗೋಲು

ಹೌದು, ಕರ್ನಾಟಕದ ಹೈ ಸ್ಪಿಡ್ ಎಂದೇ ಪ್ರಖ್ಯಾತಿ ಪಡೆಡಿದ್ದ ಕೊಬ್ಬರಿ ಹೋರಿ 'ಬ್ರಹ್ಮ ಈಗ ತಮಿಳುನಾಡಿನ ಪಾಲಾಗಿದೆ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ವಾಸನ ಗ್ರಾಮದ, ಮಲ್ಲೇಶಪ್ಪ ಹಾಳಗತನವರ ಎಂಬುವರಿಗೆ ಸೇರಿದ  ಈ ಹೋರಿಯನ್ನು ತಮಿಳುನಾಡಿನವರು ಖರೀದಿಸಿದ್ದಾರೆ. ಸುಮಾರು ಪ್ರಶಸ್ತಿಗಳನ್ನ ಗೆದ್ದ ಹೋರಿಯನ್ನ ತಮಿಳುನಾಡಿನ ವಿಕ್ಟರಿ ಎಂಬುವವರು ಖರೀದಿಸಿದ್ದಾರೆ. 

ಅಂದ ಹಾಗೆ ಈ ಹೋರಿಯನ್ನು ಖರೀದಿಸಿದ ಮೊತ್ತ ಕೇಳಿದರೆ ಒಮ್ಮೆಗೆ ಶಾಕ್ ಆಗಬೇಕು. ಈ ಹೈ ಸ್ಪೀಡ್ ಹೋರಿ ಮಾರಾಟವಾದದ್ದು ಬರೋಬ್ಬರಿ 19 ಲಕ್ಷ ರೂಪಾಯಿಗೆ.  ಇಷ್ಟೊಂದು ದೊಡ್ಡ ಮೊತ್ತದ ಹಣ ಪಾವತಿಸಿ ತಮಿಳು ನಾಡು ಮೂಲದ ವ್ಯಕ್ತಿ  ನಮ್ಮ ರಾಜ್ಯದ  ಬ್ರಹ್ಮನನ್ನು ಖರೀದಿಸಿದ್ದಾರೆ. 

ಇದನ್ನೂ ಓದಿ : Bangalore Crime : ಕೊಟ್ಟಿದ್ದು ಕೋಟಿ ಕೋಟಿ ವರದಕ್ಷಿಣೆ : ಅನುಭವಿಸಿದ್ದು ನರಕಯಾತನೆ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News