Marriage: ಅವರನ್ನು ಸಮಾಜದಲ್ಲಿ ಒಂದು ರೀತಿಯಾಗಿ ನೋಡುತ್ತಾರೆ . ಮಂಗಳ ಮುಖಿ ಎಂದರೆ ಅವರನ್ನು ಹೀಯಾಳಿಸುವವರೇ ಹೆಚ್ಚು. ಆದರೆ ಬಡ ನವ ಜೋಡಿಗೆ ಸ್ವಂತ ಹಣದಲ್ಲಿ ಮದುವೆ ಮಾಡಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ ಈ ಮಂಗಳಮುಖಿಯರು.
ಒಂದು ಕಡೆ ಮದುವೆ ಸಂಭ್ರಮದಲ್ಲಿ ಓಡಾಡುತ್ತಿರುವ ಮಂಗಳ ಮುಖಿಯರು ಇನ್ನೊಂದು ಕಡೆ ಮದುವೆ ಸಂಭ್ರಮದಲ್ಲಿ ನವ ಜೋಡಿಗಳ ಖುಷಿ ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ಹೊಸಹಳ್ಳಿ ಕ್ಯಾಂಪ್ ನಲ್ಲಿ ನಡೆದ ಮದುವೆ.
ಇದನ್ನೂ ಓದಿ- ನಾಡದೇವತೆ ಹೊರುತ್ತಿದ್ದ ಅರ್ಜುನ ಮಣ್ಣಲ್ಲಿ ಮಣ್ಣು
ದುರ್ಗಾದೇವಿ ದೇವಸ್ಥಾನದಲ್ಲಿ ಜಮುನಾ ಎಂಬ ಮಂಗಳ ಮುಖಿಯರು ಅವರ ತಂಡದೊಂದಿಗೆ ಸೇರಿ ಪಕ್ಕದ ಹಳ್ಳಿಯಲ್ಲಿ ಇರುವ ಎರಡು ನವ ಜೋಡಿಗಳಿಗೆ ಮದುವೆ ಮಾಡಿಸಿ ನವ ಜೋಡಿಗಳನ್ನುಒಂದು ಮಾಡಿದರು.
ಇನ್ನೂ ಈ ಮಂಗಳ ಮುಖಿಯರು ಕಳೆದ 4 ವರ್ಷಗಳಿಂದ ಬಡ ಕುಟುಂಬಗಳನ್ನ ಆಯ್ಕೆ ಮಾಡಿ ಸತತವಾಗಿದುವೆ ಮಾಡಿಸಿದ್ದಾರೆ. ಇನ್ನೂ ಮದುವೆ ತಾಳಿ, ಬಟ್ಟೆ , ಮನೆಗಳಿಗೆ ಬೇಕಾಗುವ ಸಾಮಾನುಗಳು ಹಾಗೂ ಮದುವೆ ಊಟದ ವ್ಯವಸ್ಥೆಯನ್ನು ಕೂಡ ಅವರೇ ಮಾಡಿದ್ದಾರೆ.
ಇದನ್ನೂ ಓದಿ- ಪತಿಯನ್ನು ಸಿಲುಕಿಸುವುದಕ್ಕೆ ಮಾಸ್ಟರ್ ಪ್ಲಾನ್
ವರ್ಷ ಪೂರ್ತಿ ಭಿಕ್ಷಾಟನೆ ಮಾಡಿದ ಹಣದಲ್ಲಿ ಯಾರ ಸಹಾಯ ಇಲ್ಲದೇ ಎರಡು ಮದುವೆಯಾ ಖರ್ಚು ಮಾಡಿದ್ದಾರೆ. ಇವರ ಒಳ್ಳೆಯ ಕೆಲಸಕ್ಕೆ ಎಲ್ಲಾ ಸಮಾಜದ ಜನ ಮೆಚ್ಚುಗೆ ವ್ಯಕ್ತ ಪಡಿಸಿದರು. ಆದಾಗ್ಯೂ, ದುಡಿದು ತಿನ್ನುವ ಆಸೆ ಇದ್ದರೂ, ಎಲ್ಲಿ ಹೋದರೂ ಕೆಲಸವೂ ಸಿಗದೇ ಭಿಕ್ಷಾಟನೆ ಮಾಡಿ ಜೀವನ ನಡೆಸುವ ನಮ್ಮನ್ನು ಸಮಾಜದಲ್ಲಿ ನೋಡುವ ದೃಷ್ಟಿಯೇ ಬೇರೆ. ಇದರಿಂದ ಬೇಸರ ಆಗುತ್ತೆ ಎಂದು ಅವರು ತಮ್ಮ ಮನಸ್ಸಿನ ಬೇಸರವನ್ನು ಹಂಚಿಕೊಂಡಿದ್ದಾರೆ.
ಇನ್ನೂ ರಾಜ್ಯದ ಕೆಲವು ಮಂಗಳ ಮುಖಿಯರು ಬದಲಾವಣೆ ಕಂಡಿದ್ದಾರೆ. ಕೆಲವರು ಮಾಡುವ ತಪ್ಪಿಗೆ ಎಲ್ಲರನ್ನು ಅದೇ ಉದ್ದೇಶದಿಂದ ಕಾಣುತ್ತಿದ್ದಾರೆ. ಸಮಾಜದಲ್ಲಿ ಮಂಗಳ ಮುಖಿಯರ ಬಗ್ಗೆ ಇರುವ ದೃಷ್ಟಿ ಬದಲಾಗಬೇಕಾಗಿದೆ. ಸಮಾಜದಲ್ಲಿ ಅವರಿಗೂ ಒಂದು ಉತ್ತಮ ಸ್ಥಾನಮಾನ ದೊರೆಯಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.