Ukraine Russia War: ಬೆಕ್ಕಿನೊಂದಿಗೆ ಸೇಫಾಗಿ ಬಂದು ಡಿಸಿಗೆ ಧನ್ಯವಾದ ಹೇಳಿದ ವಿದ್ಯಾರ್ಥಿನಿ

ಉಕ್ರೇನ್​ನಲ್ಲಿದ್ದ ರಾಜ್ಯದ ಹಲವು ವಿದ್ಯಾರ್ಥಿಗಳು ಸುರಕ್ಷಿತವಾಗಿ ತಾಯ್ನಾಡಿಗೆ ಆಗಮಿಸಿದ್ದಾರೆ. ಉಕ್ರೇನ್​ನ ಸದ್ಯದ ಪರಿಸ್ಥಿತಿ ಹಾಗೂ ಅಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

Last Updated : Mar 7, 2022, 05:16 PM IST
  • ಯುದ್ಧಪೀಡಿತ ಉಕ್ರೇನ್ ನಿಂದ ಮಂಗಳೂರಿಗೆ ಇಂದು ಮತ್ತೆ ಐವರು ವಿದ್ಯಾರ್ಥಿಗಳು ಆಗಮಿಸಿದ್ದಾರೆ
  • ಮಂಗಳೂರಿನ ಯುವತಿಯೊಬ್ಬಳು ತಾನು ಸೇಫ್ ಅಗಿ ಬರೋದಲ್ಲದೆ ಬೆಕ್ಕನ್ನು ಕೂಡ ಕರೆತಂದಿದ್ದಾಳೆ
  • ತಮನ್ನು ಸುರಕ್ಷಿತವಾಗಿ ಕರೆತರಲು ಶ‍್ರಮಿಸಿದ ಜಿಲ್ಲಾಧಿಕಾರಿಗೆ ವಿದ್ಯಾರ್ಥಿನಿ ಧನ್ಯವಾದ ಸಲ್ಲಿಸಿದ್ದಾರೆ
Ukraine Russia War: ಬೆಕ್ಕಿನೊಂದಿಗೆ ಸೇಫಾಗಿ ಬಂದು ಡಿಸಿಗೆ ಧನ್ಯವಾದ ಹೇಳಿದ ವಿದ್ಯಾರ್ಥಿನಿ title=
ಬೆಕ್ಕಿನೊಂದಿಗೆ ಆಗಮಿಸಿದ ವಿದ್ಯಾರ್ಥಿನಿ

ಮಂಗಳೂರು: ಯುದ್ಧಪೀಡಿತ ಉಕ್ರೇನ್ ನಿಂದ ಮಂಗಳೂರಿಗೆ ಇಂದು ಮತ್ತೆ ಐವರು ವಿದ್ಯಾರ್ಥಿಗಳು(Mangalore Student's) ಆಗಮಿಸಿದ್ದಾರೆ. ಈ ಪೈಕಿ ತಾನು ಸಾಕಿದ ಬೆಕ್ಕಿನೊಂದಿಗೆ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ವಿದ್ಯಾರ್ಥಿನಿ(Returned With Cat)ಯೊಬ್ಬರು ಜಿಲ್ಲಾಧಿಕಾರಿಗೆ ಧನ್ಯವಾದ ಹೇಳಿದ್ದಾರೆ.

ಯುದ್ಧಭೂಮಿ ಉಕ್ರೇನ್‌(Russia-Ukraine War)ನ ಕೀವ್ ಹಾಗೂ ಖಾರ್ಕೀವ್ ಭಾಗದಲ್ಲಿ ವಾಸ್ತವ್ಯವಿದ್ದ ಮಂಗಳೂರಿನ ವಿದ್ಯಾರ್ಥಿಗಳು ಯುದ್ಧ ಸಂದರ್ಭದಲ್ಲಿ ಬಂಕರ್‌ನಲ್ಲಿ ವಾಸ್ತವ್ಯವಾಗಿದ್ದರು. ಬೆಂಗಳೂರಿನಿಂದ ರಸ್ತೆ ಮಾರ್ಗದ ಮೂಲಕ ದೇರಳಕಟ್ಟೆ ನಿವಾಸಿ ಲಕ್ಷಿತಾ ಪುರುಷೋತ್ತಮ್ ಆಗಮಿಸಿದ್ದಾರೆ. ಮೊದಲು ಬೆಂಗಳೂರಿನ ಅಂತಾರಾಷ್ಟ್ರೀಯ ವಿನಾನ ನಿಲ್ದಾಣಕ್ಕೆ ಆಗಮಿಸಿದ ಅವರು ಉಕ್ರೇನ್ ನಲ್ಲಿ ತಾವು ಸಾಕಿದ್ದ ಬೆಕ್ಕಿನೊಂದಿಗೆ(Returned With Cat)ಮಂಗಳೂರಿಗೆ ಬಂದಿದ್ದಾರೆ.

https://zeenews.india.com/kannada/karnataka/hd-kumaraswamy-questioned-about-mbbs-students-future-who-studying-in-ukraine-68768ಇದನ್ನೂ ಓದಿ: V Somanna : ಸಚಿವ ಸೋಮಣ್ಣ ಮಾತಿಗೆ ಕಿಮ್ಮತ್ತಿಲ್ಲ : ಚಾಮರಾಜನಗರದಲ್ಲಿ ಸ್ಥಗಿತಗೊಂಡಿಲ್ಲ ಗಣಿಗಾರಿಕೆ

ಲಕ್ಷಿತಾ ಅವರು ಉಕ್ರೇನ್ ನಲ್ಲಿ ‘ಲೀಸಾ’ ಹೆಸರಿನ ಬೆಕ್ಕನ್ನು ಸಾಕಿದ್ದರು. ಯುದ್ಧಭೂಮಿ(Russia Ukraine Crisis)ಯಿಂದ ತಾವೊಬ್ಬರೇ ಬರದೆ ಅವರು ಬೆಕ್ಕಿನೊಂದಿಗೆ ತಾಯ್ನಾಡಿಗೆ ವಾಪಸ್ ಆಗಿದ್ದು, ಪ್ರಾಣಿಪ್ರೀತಿ ಮೆರೆದಿದ್ದಾರೆ. ‘ಲೀಸಾ’ಳನ್ನು ಲಕ್ಷಿತಾ ದತ್ತು ಪಡೆದು ಸಾಕುತ್ತಿದ್ದರು. ಅದಕ್ಕಾಗಿಯೇ ಊಟವನ್ನು ಕೂಡ ಸಂಗ್ರಹಿಸಿಟ್ಟಿದ್ದರಂತೆ.

ತಾನು ಸಾಕಿದ ಬೆಕ್ಕಿನೊಂದಿಗೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ(Mangalore DC)ಗೆ ಆಗಮಿಸಿದ ಲಕ್ಷಿತಾ ಡಿಸಿ ಡಾ.ರಾಜೇಂದ್ರ ಕೆ.ವಿ ಅವರನ್ನು ಭೇಟಿ ಮಾಡಿದರು. ಈ ವೇಳೆ ತಮ್ಮನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಶ್ರಮಿಸಿದ ಜಿಲ್ಲಾಧಿಕಾರಿಗೆ ಧನ್ಯವಾದ ಸಲ್ಲಿಸಿದರು. ಉಕ್ರೇನ್ ನಿಂದ ಲಕ್ಷಿತಾ ಜೊತೆಗೆ ಮಂಗಳೂರಿನ ದೇರೆಬೈಲ್‌ನ ಅನೈನಾ ಅನ್ನ, ಮೂಡುಬಿದ್ರೆಯ ಶಲ್ವಿನ್ ಪ್ರೀತಿ ಅರನಾ, ಪಡೀಲ್‌ನ ಕ್ಲೇಟನ್ ಡಿಸೋಜಾ, ಸಾದ್ ಹರ್ಷದ್ ಅಹ್ಮದ್ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

ಇದನ್ನೂ ಓದಿ: ಡಿಯೋ ಬೈಕ್ ಗಳನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದ ಖದೀಮರ ಬಂಧನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News