ಮುಸ್ಲಿಂ ಮೀಸಲಾತಿ ಸುತ್ತೋಲೆ ಹಿಂಪಡೆಯಲು ಎಂ.ಜಿ.ಮಹೇಶ್ ಒತ್ತಾಯ

ಧರ್ಮದ ಆಧಾರದಲ್ಲಿ ಯಾರಿಗೂ ಮೀಸಲಾತಿ ಕೊಡಬಾರದು ಎಂದು ಕಲ್ಕತ್ತ ಹೈಕೋರ್ಟ್ ತಿಳಿಸಿದೆ. ಸಿದ್ದರಾಮಯ್ಯನವರ ಸರಕಾರವು ಒಂದು ತಿಂಗಳ ಹಿಂದೆ ಒಬಿಸಿ ಮೀಸಲಾತಿ 2ಎ ಒಳಗಡೆ 27 ಮುಸ್ಲಿಂ ಸಮುದಾಯಗಳನ್ನು ಸೇರಿಸಿತ್ತು. ಇದು ತುಷ್ಟೀಕರಣದ ರಾಜಕಾರಣ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ. ತಿಳಿಸಿದರು.

Written by - Prashobh Devanahalli | Edited by - Krishna N K | Last Updated : May 23, 2024, 04:04 PM IST
    • 27 ಮುಸ್ಲಿಂ ಸಮುದಾಯವನ್ನು ಒಬಿಸಿಗೆ
    • ತಕ್ಷಣ ಈ ಸುತ್ತೋಲೆಯನ್ನು ವಾಪಸ್ ಪಡೆಯಬೇಕು
    • ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಒತ್ತಾಯ
ಮುಸ್ಲಿಂ ಮೀಸಲಾತಿ ಸುತ್ತೋಲೆ ಹಿಂಪಡೆಯಲು ಎಂ.ಜಿ.ಮಹೇಶ್ ಒತ್ತಾಯ title=

ಬೆಂಗಳೂರು: ಕರ್ನಾಟಕದಲ್ಲಿ ಸುತ್ತೋಲೆ ಮೂಲಕ 27 ಮುಸ್ಲಿಂ ಸಮುದಾಯವನ್ನು ಒಬಿಸಿಗೆ ಸೇರಿಸಿದ್ದು, ತಕ್ಷಣ ಈ ಸುತ್ತೋಲೆಯನ್ನು ವಾಪಸ್ ಪಡೆಯಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಅವರು ಒತ್ತಾಯಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಈ ಸುತ್ತೋಲೆ ಮೂಲಕ ಹಿಂದೂ ಒಬಿಸಿ ಸಮುದಾಯಗಳ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ. ಇಡಬ್ಲ್ಯುಎಸ್ ಅಡಿಯಲ್ಲಿ ಅವರಿಗೆ ಮೀಸಲಾತಿ ಇದ್ದೇ ಇದೆ. ಹಿಂದೂ ಒಬಿಸಿಗಳಿಗೆ ಇರುವ 27 ಶೇ ಮೀಸಲಾತಿಗೆ ಇವರನ್ನು ಸೇರಿಸಿದರೆ ಅನ್ಯಾಯ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಆ ಬ್ಯಾಚ್‌ ವಿಜಯ್ ದೇವರಕೊಂಡರನ್ನು ತುಳಿಯುತ್ತಿದೆ..! ನಟ ಆನಂದ್‌ ಶಾಕಿಂಗ್‌ ಹೇಳಿಕೆ

ಇದೇ ತಪ್ಪು ಎಂದು ಪಶ್ಚಿಮ ಬಂಗಾಲದ ಕಲ್ಕತ್ತ ಹೈಕೋರ್ಟ್ ತೀರ್ಪು ಕೊಟ್ಟಿದೆ ಎಂದು ವಿವರಿಸಿದರು. ಮಮತಾ ಬ್ಯಾನರ್ಜಿ ಅವರ ಕ್ರಮ ಅಸಿಂಧು, ಅಕ್ಷಮ್ಯ ಅಪರಾಧ ಮತ್ತು ಸಂವಿಧಾನವಿರೋಧಿ ಎಂದು ಅಲ್ಲಿನ ಹೈಕೋರ್ಟ್ ತಿಳಿಸಿದೆ ಎಂದು ಹೇಳಿದರು. ಇಲ್ಲಿ ಸಿದ್ದರಾಮಯ್ಯನವರು ಸಂವಿಧಾನವಿರೋಧಿ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು.

ಕರ್ನಾಟಕದಲ್ಲಿ ಒಬಿಸಿ ಪಟ್ಟಿಯಲ್ಲಿ 108 ಸಮುದಾಯಗಳಿದ್ದವು. ಇದರಲ್ಲಿ ಮುಸ್ಲಿಮರ 2 ಸಮುದಾಯಗಳಿದ್ದವು. ವೃತ್ತಿ ಆಧಾರದಡಿ ಇವರನ್ನು ಸೇರಿಸಿದ್ದರು. ಮಿಲ್ಲರ್ ಕಮಿಷನ್‍ನಿಂದ ಇಲ್ಲಿನವರೆಗೆ ಮುಸ್ಲಿಮರನ್ನು ಒಬಿಸಿ ಅಡಿ ತರಲಸಾಧ್ಯ ಎಂದು ಹೇಳಿದ್ದರೂ ಕೂಡ 27 ಮುಸ್ಲಿಂ ಸಮುದಾಯದವರನ್ನು ಒಬಿಸಿಗೆ ಸೇರಿಸಿದ್ದಾರೆ ಎಂದು ಆಕ್ಷೇಪಿಸಿದರು.

ಇದನ್ನೂ ಓದಿ: ಇಂಡಿಯನ್ 2 ಸಿನಿಮಾದ ಮೊದಲ ಹಾಡು ರಿಲೀಸ್..ಕುದರೆ ಏರಿ ಬಂದ ಕಮಲ್ ಹಾಸನ್

ಕರ್ನಾಟಕದಲ್ಲಿ 27 ಮುಸ್ಲಿಂ ಸಮುದಾಯದವರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ಅಸಾಂವಿಧಾನಿಕ ಎಂದು ಪ್ರಧಾನಿ ನರೇಂದ್ರ ಮೋದಿಜೀ ಅವರು ಹೇಳಿದ್ದಾರೆ. ಇದಕ್ಕೆ ಪೂರಕವಾದ ತೀರ್ಪನ್ನೇ ಇವತ್ತು ಕಲ್ಕತ್ತ ಹೈಕೋರ್ಟ್ ಕೊಟ್ಟಿದೆ ಎಂದು ವಿವರಿಸಿದರು.

ಧರ್ಮದ ಆಧಾರದಲ್ಲಿ ಯಾರಿಗೂ ಮೀಸಲಾತಿ ಕೊಡಬಾರದು ಎಂದು ಕಲ್ಕತ್ತ ಹೈಕೋರ್ಟ್ ತಿಳಿಸಿದೆ. ಸಿದ್ದರಾಮಯ್ಯನವರ ಸರಕಾರವು ಒಂದು ತಿಂಗಳ ಹಿಂದೆ ಒಬಿಸಿ ಮೀಸಲಾತಿ 2ಎ ಒಳಗಡೆ 27 ಮುಸ್ಲಿಂ ಸಮುದಾಯಗಳನ್ನು ಸೇರಿಸಿತ್ತು. ಇದು ತುಷ್ಟೀಕರಣದ ರಾಜಕಾರಣ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News