ಈ ವರ್ಷದ ಯೋಗ ದಿನದ ಥೀಮ್ "ಒನ್ ಅರ್ಥ್, ಒನ್ ಹೆಲ್ಥ್" ಆಗಿತ್ತು. ಮೋದಿಯವರನ್ನು ಆಂಧ್ರಪ್ರದೇಶದ ರಾಜ್ಯಪಾಲ ಎಸ್. ಅಬ್ದುಲ್ ನಜೀರ್, ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಇತರರು ಐಎನ್‌ಎಸ್ ಡೇಗಾದಲ್ಲಿ ಸ್ವಾಗತಿಸಿದರು
ಮದ್ದೂರಿನ ಶಿಂಷಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಇದರಿಂದಾಗಿ ಅಕ್ರಮ ಮಗಳು ಅಡ್ಡೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು. ದಾಳಿ ವೇಳೆ 320 ಮೆಟ್ರಿಕ್ ಟನ್ ಅಕ್ರಮ ಮರಳು ಜಪ್ತಿಯಾಗಿದೆ.
ವಸತಿ ಯೋಜನೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ವಿಚಾರ, ಯಾರಿಗೆ ಮನೆ ಇಲ್ಲವೋ ಅವರಿಗೆ ಮನೆ ಕೊಡಬೇಕಾಗುತ್ತದೆ. ಇಲ್ಲಿ 15%, 20% ಅಂತ ಪ್ರಶ್ನೆ ಅಲ್ಲ, ಮನೆ ಇಲ್ಲದವರ ಪ್ರಶ್ನೆ ಇದು. ಆ ಸಮುದಾಯದವರಿಗೆ ಮನೆ ಇಲ್ಲ ಅಂದಾಗ ಕೊಡಬೇಕು ಎಂದು ಗೃಹ ಸಚಿವರ ಡಾ. ಜಿ ಪರಮೇಶ್ವರ್ ಹೇಳಿದರು.
ವ್ಯಾಪಕ ಮಳೆಯಿಂದ ಭರ್ತಿಯತ್ತ ಕೆಆರ್‌ಎಸ್ ಡ್ಯಾಂ, ಕಾವೇರಿ ನದಿ ಪಾತ್ರದ ಜನರಿಗೆ ಇದೀಗ ಪ್ರವಾಹ ಆತಂಕ. ಯಾವುದೇ ಕ್ಷಣದಲ್ಲಿ ಹೆಚ್ಚಿನ ನೀರು ಬಿಡುಗಡೆ ಸಾಧ್ಯತೆ. ಕಾವೇರಿ ನಿಗಮ ಹಾಗೂ ಜಿಲ್ಲಾಡಳಿತದಿಂದ ಎಚ್ಚರಿಕೆ. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ.
ಅಹ್ಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟಿದ್ದ ಲಾಮ್ಯುಥೆಮ್ ಸಿಂಗ್ಟನ್ ಪಾರ್ಥಿವ ಶರೀರ ರವಾನೆಯಾಗಿದೆ. ಏರ್ ಇಂಡಿಯಾ ಸಿಬ್ಬಂದಿ ಲಾಮ್ಯುಥೆಮ್ ಸಿಂಗ್ಟನ್ ಕಾಂಗೋಕ್ಷಿಯಲ್ಲಿರುವ ಮನೆಗೆ ಪಾರ್ಥಿವ ಶರೀರ ತರಲಾಗಿದೆ.
ಇಸ್ರೇಲ್ ಆಸ್ಪತ್ರೆ ಟಾರ್ಗೆಟ್ ಮಾಡಿ ಇರಾನ್ ದಾಳಿ ನಡೆಸಿದೆ. ಇದರಿಂದಾಗಿ ಜೀವ ಭಯದಲ್ಲಿ ಆಸ್ಪತ್ರೆಯಿಂದ ಸಿಬ್ಬಂದಿ, ರೋಗಿಗಳು ಓಡಿ ಬಂದಿದ್ದಾರೆ. ಇರಾನ್ ಕ್ಷಿಪಣಿ ದಾಳಿಯಿಂದ ಜನ ಗಾಬರಿಯಾಗಿದ್ದಾರೆ. ಬ್ಯಾಲಿಸ್ಟಿಕ್ ಮಿಸೈಲ್ ಬಳಸಿ ಇರಾನ್ ಸೇನೆ ದಾಳಿ ನಡೆಸುತ್ತಿದೆ.
ಕೇತಗಾನಹಳ್ಳಿ ಬಳಿ ಸರ್ಕಾರಿ ಭೂಮಿ ಒತ್ತುವರಿ ಆರೋಪ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಗೆ ರಿಲೀಫ್. ಸರ್ಕಾರ ರಚಿಸಿದ್ದ ಎಸ್‌ಐಟಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಎಸ್‌ಐಟಿ ರಚನೆ ಪ್ರಶ್ನಿಸಿ ಹೈಕೋರ್ಟ್‌ಗೆ ಹೆಚ್.ಡಿ. ಕುಮಾರಸ್ವಾಮಿಯವರು ಅರ್ಜಿ ಸಲ್ಲಿಸಿದ್ದರು.
RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಪ್ರಕರಣ, ಮ್ಯಾಜಿಸ್ಟ್ರಟ್ ತನಿಖೆ ಚುರುಕುಗೊಂಡಿದೆ. ಗಾಯಾಳುಗಳ, ಅಧಿಕಾರಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಡಿಸಿ ಜಗದೀಶ್ ಅವರಿಂದ ತನಿಖೆ ನಡೆಯುತ್ತಿದೆ.
ಮುಂಬೈಗೆ ಬಂದಿಳಿದ 18 ಮಂದಿ ಕನ್ನಡಿಗರು, ಬೆಂಗಳೂರಿಗೆ ಬರಬೇಕಾದ ವಿಮಾನ ಮಿಸ್ ಆದ ಹಿನ್ನೆಲೆ, ಸಂಜೆ 5 ಗಂಟೆಗೆ ಬೆಂಗಳೂರಿಗೆ ಬರುವ ಕನ್ನಡಿಗರು. ಕುವೈತ್‌ನಿಂದ ಮುಂಬೈಗೆ ಬರಬೇಕಿದ್ದ ವಿಮಾನ ತಡವಾಗಿದೆ.
ಬೆಂಗಳೂರಿನ ಮಹದೇವಪುರದಲ್ಲಿ ಜೂನ್ 19, 2025 ರಂದು ಸಂಭವಿಸಿದ ಘಟನೆಯಲ್ಲಿ, ಅತಿವೇಗದಲ್ಲಿ ಬಂದ ಸ್ಕೂಲ್ ವ್ಯಾನ್ ಒಂದು ಸಿಗ್ನಲ್ ಬಳಿ ನಿಯಂತ್ರಣ ತಪ್ಪಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ.ಈ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ವಿಧಾನ ಪರಿಷತ್‌ನ ಖಾಲಿ ಇರುವ ನಾಲ್ಕು ಸ್ಥಾನಗಳ ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಮುಂದುವರಿದಿದೆ. ಕಾಂಗ್ರೆಸ್ ಹೈಕಮಾಂಡ್ ಈ ಸ್ಥಾನಗಳಿಗೆ ಶಿಫಾರಸು ಮಾಡಿದ್ದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು, ದಲಿತ ಮುಖಂಡ ಡಿ.ಜಿ.ಸಾಗರ್ ಮತ್ತು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆರತಿ ಕೃಷ್ಣ ಅವರ ಹೆಸರುಗಳಿಗೆ ಕೊನೆಯ ಕ್ಷಣದಲ್ಲಿ ತಾತ್ಕಾಲಿಕ ತಡೆ ಹಾಕಿದೆ ಎಂದು ತಿಳಿದುಬಂದಿದೆ
ಎಲೆಕ್ಷನ್‌ನಲ್ಲಿ ಯಾರಾದ್ರೂ ಸೋತ್ರೆ ಪಕ್ಷದ ಕೆಲಸ ಮಾಡಲ್ಲ, ಆದ್ರೆ 3 ಬಾರಿ ಸೋತರೂ ನಿಖಿಲ್ ಎಂದಿಗೂ ಧೃತಿಗೆಟ್ಟಿಲ್ಲ, ಕಾಂಗ್ರೆಸ್ ಕಿತ್ತು ಎಸೆಯೋದೇ ಗುರಿ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಶಪಥ.
ಅಹಮದಾಬಾದ್ ವಿಮಾನ ದುರಂತ ಪ್ರಕರಣ, ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹ ಪತ್ತೆ, ಡಿಎನ್‌ಎ ಮೂಲಕ ಮೃತ ದೇಹ ಪತ್ತೆಹಚ್ಚುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ರೂಪಾನಿ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.