ಬೆಳಗಾವಿ : ದಾವಣಗೆರೆಯಲ್ಲಿ ಸಿದ್ದರಾಮಯ್ಯ 75ನೇ ಜನ್ಮದಿನ ಅಮೃತಮಹೋತ್ಸವ ವಿಚಾರವಾಗಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಶುಭಕೋರುತ್ತಲೇ ಟಾಂಗ್ ನೀಡಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಚಿವ ಅಶ್ವತ್ಥ್ ನಾರಾಯಣ, ಸಿದ್ದರಾಮಯ್ಯ ಇಂದು ತಮ್ಮ ರಾಜಕೀಯ ನಿವೃತ್ತಿ ಘೋಷಿಸಲಿ ಎಂದರು.
ಇದನ್ನೂ ಓದಿ : Siddaramotsava: ‘ಕಾಂಗ್ರೆಸ್ಸಿಗರೇ ಸೂತಕದ ಮನೆಯಲ್ಲಿ ಸಂಭ್ರಮ ಎಷ್ಟು ಸರಿ!?’
ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಪಡಿಬೇಕಾ ಅಂತಾ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನೂರಕ್ಕೆ ನೂರು ರಿಟೈರ್‌ಮೆಂಟ್ ಪಡೆಯಬೇಕು, ಔಟ್‌ಡೇಟೆಡ್ ಮಾಡಲ್‌ಗಳು ಎಲ್ಲಾ ಆಯ್ತು. ಏನೋ ಒಂದ್ ಐದು ವರ್ಷ ಆಯ್ತು ಜನ ಬಾರ ಹೊತ್ರು ಮಾಡಿದ್ರು. ಯಾರೀ ಬಾರ ಹೊರೋರು? ಇವರ ಬಾರ ಹೊತ್ತಿಕೊಂಡು ಎಲ್ಲಿಗೆ ಹೋಗಬೇಕು. ಇವರ ಮೋಜು ಮಸ್ತಿ ಏನ್ರಿ? ಇವರ ಕಥೆ ಏನ್ರಿ, ಯಾವ ಉದ್ದೇಶ, ಎಲ್ಲವನ್ನೂ ಮರೆತರು. ಇವತ್ತು ಇಂತಹ ಮಹಾಪುರುಷರ ಜನುಮ ದಿನ ಆಗ್ತಿದೆ, ಆಗಲಿ. ಯಾವ ಕಾರಣಕ್ಕೆ ಜನ್ಮದಿನ ಆಗ್ತಿದೆ ಗೊತ್ತಿಲ್ಲ, ಏನ್ ಕೊಡುಗೆ ಕೊಟ್ಟಿದ್ದಾರೆ ಗೊತ್ತಿಲ್ಲ. ಇಂತವರದ್ದು ಆಗುತ್ತೆ ಆಗಲಿ ಅವರ ಭಾವನೆಗಳಿಗೆ ನಾನು ಅಗೌರವ ಕೊಡುವಂತದ್ದು ಆಗಬಾರದು. ಒಟ್ಟಾರೆ ಅಪ್ರಸ್ತುತ, ಇಂದು ಅವರು ನಿವೃತ್ತಿ ಘೋಷಣೆ ಮಾಡಲಿ ಅಂತಾ ವಿನಂತಿಸುವೆ. ಇವತ್ತಾದರೂ ಅವರಿಗೆ ನೆಮ್ಮದಿ ಆಗಿ ಇರೋಣ ಬಿಡಿ ಎಂದರು.
ಅವರಿಗೆ ಶುಭಾಶಯ ಕೋರ್ತಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯರ ಜನ್ಮದಿನಕ್ಕೆ ಹೃದಯಪೂರ್ವಕ ಶುಭಾಶಯಗಳು. ಸಿದ್ದರಾಮಯ್ಯಗೆ ಭಗವಂತ ಆಯುರಾರೋಗ್ಯ ಎಲ್ಲ ಕರುಣಿಸಲಿ ಅಂತಾ ಪ್ರಾರ್ಥಿಸುತ್ತೇನೆ. ಸಮಾಜದಲ್ಲಿ ರಾಜಕೀಯ ಪಕ್ಷದ ನಾಯಕನ ಯಾವುದೇ ಕಾರ್ಯಕ್ರಮ ಇದ್ದರೂ ರಾಜಕೀಯ ಕಾರ್ಯಕ್ರಮವೇ. ಒಂದು ಶಕ್ತಿ ತುಂಬಿಕೊಳ್ಳುವ ಕಾರ್ಯಕ್ರಮ, ಶಕ್ತಿ ಕೊಡುವಂತ ಕಾರ್ಯಕ್ರಮ. ಅವರವರು ಪ್ರಯತ್ನ ಮಾಡಬೇಕು, ಒಳ್ಳೆಯ ವಿಚಾರಕ್ಕೆ, ಒಳ್ಳೆಯ ಉದ್ದೇಶಕ್ಕಾಗಿ ಏನೂ ಮಾಡಿದರು ಒಳ್ಳೆಯದು. ಸಿದ್ದರಾಮಯ್ಯರ ಶಕ್ತಿ ಪ್ರದರ್ಶನವಾ ಅಂತಾ ಮಾಧ್ಯಮಗಳ ಪ್ರಶ್ನೆ. ಎಲ್ಲರೂ ಶಕ್ತಿ ಪ್ರದರ್ಶನ ಮಾಡಬೇಕು, ಮಾಡ್ತಾರೆ ಏನ್ ತಪ್ಪೇನಿಲ್ಲ. ಜನರ ವಿಶ್ವಾಸ ಪಡೆದು ಜನರ ಆಶೀರ್ವಾದ, ಬೆಂಬಲ ಪಡೆಯಬೇಕು. ಇದೊಂದು ಶುಭ ಸಂದರ್ಭ 75ನೇ ಜನ್ಮದಿನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಹಿಂದೆ ಆಗಿಬಿಟ್ಟಿದ್ದಾರೆ ಇನ್ಮುಂದೆ ಆಗಲ್ಲ. 75 ವರ್ಷಕ್ಕೆ ರಿಟೈರ್‌ಮೆಂಟ್. ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಂಡ ಪಕ್ಷ ಪ್ರಸ್ತುತವಾದ ಪಕ್ಷ ಅಲ್ಲ. ವಿಚಾರ, ಧ್ಯೇಯೋದ್ದೇಶಗಳ ಸ್ಪಷ್ಟತೆ ಇಲ್ಲ, ಅಧಿಕಾರಕ್ಕಾಗಿ ಹಾತೊರೆಯುವಂತಹ ಪಕ್ಷ ಕಾಂಗ್ರೆಸ್. ಇಂದು ಇಡೀ ದೇಶದಲ್ಲಿ ಉತ್ತಮವಾದ ಬುನಾದಿ ಹಾಕದೇ ಇದ್ದ ಪಕ್ಷ. ಇಂದು ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡಲು ಮೂಲಪುರುಷರು, ಕಾರಣಕರ್ತರು ಕಾಂಗ್ರೆಸ್ ಪಕ್ಷದವರು. ಭ್ರಷ್ಟಾಚಾರ ಸಂಸ್ಕೃತಿ ತಂದಿದ್ದಾರೆ ಅದನ್ನ ಕ್ಲೀನ್ ಮಾಡಬೇಕು ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ರಾಹುಲ್ ಗಾಂಧಿ ಒಗ್ಗಟ್ಟಿನ ಜಪ ವಿಚಾರವಾಗಿ ಮಾತನಾಡಿದ ಸಚಿವ ಅಶ್ವತ್ಥ್ ನಾರಾಯಣ, ಅವರ ಪಕ್ಷ ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕಲ್ವಾ. ಅವರ ಪಕ್ಷ ಸಂಪೂರ್ಣ ನೆಲೆ, ವಿಶ್ವಾಸ ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷ ಕೆಲವೇ ವರ್ಷಗಳಲ್ಲಿ ಮ್ಯೂಸಿಯಂ ಸೇರಿಕೊಳ್ಳುತ್ತೆ. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷ ಇತ್ತಪ್ಪಾ ಅಂತಾ ಮ್ಯೂಸಿಯಂ ಸೇರೋ ಕಾಲ ಬಂದಿದೆ ಎಂದು ಹೇಳಿದರು.
ಇದನ್ನೂ ಓದಿ : Siddaramosthava: ಸಿದ್ದರಾಮಯ್ಯ ‘ಅಮೃತ ಮಹೋತ್ಸವ’ಕ್ಕೆ ಸಿದ್ಧಗೊಂಡ ಬೃಹತ್ ವೇದಿಕೆ
ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಒಂದಾಗ್ತಾರಾ ಅಂತಾ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವ ಅಶ್ವತ್ಥ್ ನಾರಾಯಣ, ಆಗ್ತಾರಾ? ಯಾವ ವಿಚಾರದಲ್ಲಿ ಒಂದು ಆಗ್ತಾರೆ? ಯಾವ ತತ್ವ, ಯಾವ ಮೌಲ್ಯದ ಮೇಲೆ ಆಗ್ತಾರೆ. ಎಲ್ಲರೂ ನಾನು ನಾನು ಅಂತಾ ಅರ್ಜಿ ಹಾಕಿದ್ದಾರೆ. ವಯಸ್ಸಾದವರು, ಯುವಕರು, ಮಧ್ಯಮ ವಯಸ್ಸಿನವರು ಅರ್ಜಿ ಹಾಕಿದ್ದಾರೆ. ಈಗಿನ ಕಾಲಕ್ಕೆ ಇವರೆಲ್ಲ ಸಂಪೂರ್ಣವಾಗಿ ಅಪ್ರಸ್ತುತ. ಇವರು ಈಗ ಮಾರ್ಗದರ್ಶಿಗಳಾಗಿ ಆಶೀರ್ವಾದ ಮಾಡಿಕೊಂಡು ಇರಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.