ಬೆಳಗಾವಿ ಬೈಎಲೆಕ್ಷನ್ ಅಭ್ಯರ್ಥಿಯಾಗಲು ಜಗದೀಶ್ ಶೆಟ್ಟರ್ ಗೆ ಸೂಚನೆ..!

ರೈಲ್ವೆ ಸಚಿವ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಗೆ ಸ್ಪರ್ಧಿಸುವಂತೆ ಜಗದೀಶ್ ಶೆಟ್ಟರ್ ಗೆ ಕೇಂದ್ರ ನಾಯಕರು ಸೂಚನೆ

Last Updated : Dec 8, 2020, 08:46 PM IST
  • ರೈಲ್ವೆ ಸಚಿವ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಗೆ ಸ್ಪರ್ಧಿಸುವಂತೆ ಜಗದೀಶ್ ಶೆಟ್ಟರ್ ಗೆ ಕೇಂದ್ರ ನಾಯಕರು ಸೂಚನೆ
  • ಕರ್ನಾಟಕದ ಒಂದು ಕೋಟಾ ಖಾಲಿ ಉಳಿದಿದ್ದು ಅದನ್ನು ಲಿಂಗಾಯತ ಸಮುದಾಯದ ನಾಯಕರಿಗೆ ನೀಡುವುದು ವರಿಷ್ಠರ ಉದ್ದೇಶ
  • ಜಗದೀಶ್ ಶೆಟ್ಟರ್ ಅವರು ದಿವಂಗತ ಸುರೇಶ್ ಅಂಗಡಿ ಅವರ ಬೀಗರಾಗಿದ್ದು, ಇದು ಕೂಡಾ ಅವರ ಗೆಲುವಿಗೆ ಸಹಕಾರಿ ಎಂಬ ಲೆಕ್ಕಾಚಾರ
ಬೆಳಗಾವಿ ಬೈಎಲೆಕ್ಷನ್ ಅಭ್ಯರ್ಥಿಯಾಗಲು ಜಗದೀಶ್ ಶೆಟ್ಟರ್ ಗೆ ಸೂಚನೆ..! title=

ಬೆಂಗಳೂರು: ರೈಲ್ವೆ ಸಚಿವ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ರಾಜ್ಯ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಕೇಂದ್ರ ನಾಯಕರು ಸೂಚಿಸಿದ್ದಾರೆ. ಅಲ್ಲದೆ ಗೆದ್ದ ನಂತರ ಕೇಂದ್ರದಲ್ಲಿ ಮಂತ್ರಿ ಹುದ್ದೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸುರೇಶ್ ಅಂಗಡಿ(Suresh Angadi) ಅವರ ನಿಧನದಿಂದ ಕೇಂದ್ರ ಸಚಿವ ಸಂಪುಟದಲ್ಲಿ ಕರ್ನಾಟಕದ ಒಂದು ಕೋಟಾ ಖಾಲಿ ಉಳಿದಿದ್ದು ಅದನ್ನು ಲಿಂಗಾಯತ ಸಮುದಾಯದ ನಾಯಕರಿಗೆ ನೀಡುವುದು ವರಿಷ್ಠರ ಉದ್ದೇಶವಾಗಿದೆ ಎನ್ನಲಾಗಿದೆ.

ಕೈಗೆ ಬಂದ ಅಲ್ಪಸ್ವಲ್ಪ ಬೆಳೆಗೂ ಸರ್ಕಾರ ನ್ಯಾಯಯುತ ಬೆಲೆ ಕೊಡಿಸಲ್ಲ ಅಂತಾದರೆ ರೈತರಿಗೆ ಯಾರು ದಿಕ್ಕು?

ಜಗದೀಶ್ ಶೆಟ್ಟರ್ ಅವರು ಈ ಹಿಂದೆ ಮುಖ್ಯಮಂತ್ರಿ ಹುದ್ದೆ ಸೇರಿದಂತೆ ವಿವಿಧ ಜವಾಬ್ದಾರಿ ಹೊತ್ತಿದ್ದು, ಅವರನ್ನು ಕೇಂದ್ರ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಈಗಿರುವ ಕೊರತೆಯನ್ನು ಭರ್ತಿ ಮಾಡಿಕೊಳ್ಳುವುದು ವರಿಷ್ಠರ ಯೋಚನೆ ಎಂದು ಮೂಲಗಳು ಹೇಳಿವೆ.

ಗ್ರಾ.ಪಂ. ಸದಸ್ಯ ಸ್ಥಾನಕ್ಕೆ ಹರಾಜಿನಲ್ಲಿ ಆಯ್ಕೆಯಾದವ್ರಿಗೆ ಚುನಾವಣಾ ಆಯೋಗದಿಂದ 'ಬಿಗ್ ಶಾಕ್'!

ಸದ್ಯಕ್ಕೆ ಕಾಂಗ್ರೆಸ್ ಪಕ್ಷದಿಂದ ಸತೀಶ್ ಜಾರಕಿಹೊಳಿ ಅವರು ಸ್ಪರ್ಧೆ ಮಾಡಲಿದ್ದು, ಅವರ ವಿರುದ್ದ ಜಗದೀಶ್ ಶೆಟ್ಟರ್ ಅವರನ್ನು ಕಣಕ್ಕಿಳಿಸುವುದು ಸೂಕ್ತ ಎಂಬ ಭಾವನೆ ರಾಜ್ಯದ ನಾಯಕರಲ್ಲೂ ಇದೆ.

Satish Jarkiholi: ಡಿಕೆಶಿ ರಾಜೀನಾಮೆಗೆ ಒತ್ತಾಯ! ಸ್ಪಷ್ಟಪಡಿಸಿದ ಸತೀಶ್ ಜಾರಕಿಹೊಳಿ

ಅಂದ ಹಾಗೆ ಜಗದೀಶ್ ಶೆಟ್ಟರ್ ಅವರು ದಿವಂಗತ ಸುರೇಶ್ ಅಂಗಡಿ ಅವರ ಬೀಗರಾಗಿದ್ದು, ಇದು ಕೂಡಾ ಅವರ ಗೆಲುವಿಗೆ ಸಹಕಾರಿ ಎಂಬ ಲೆಕ್ಕಾಚಾರ ರಾಜ್ಯದ ನಾಯಕರಲ್ಲಿದೆ.

ರಾಜ್ಯದಲ್ಲಿ ವೃದ್ಧಾಪ್ಯ ಮತ್ತು ವಿಧವಾ ವೇತನ ಸ್ಥಗಿತ: ಅದಕ್ಕೆ ಸಿಎಂ ಏನಂದ್ರು ಗೊತ್ತಾ?

ಇದೇ ಕಾರಣಕ್ಕಾಗಿ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಪಕ್ಷದ ರಾಜ್ಯ ಕಾರ್ಯಕಾರಿಣಿಯ ಸಂದರ್ಭದಲ್ಲೂ ಜಗದೀಶ್ ಶೆಟ್ಟರ್ ಅವರೊಂದಿಗೆ ಚರ್ಚಿಸಿದ್ದ ರಾಜ್ಯದ ನಾಯಕರು, ಕಣಕ್ಕಿಳಿಯುವಂತೆ ಮನವೊಲಿಸುವ ಯತ್ನ ನಡೆಸಿದ್ದರು.

ಕಾಂಗ್ರೆಸ್‌ ಹಿರಿಯ ನಾಯಕನನ್ನು ಭೇಟಿಯಾಗಿ ಜೆಡಿಎಸ್‌ಗೆ‌ ಆಹ್ವಾನ ನೀಡಿದ ಹೆಚ್ ಡಿಕೆ..!

 

Trending News