ಸಿಎಂ ಪತ್ನಿ ಸೈಟ್ ವಾಪಾಸ್ ಸಮರ್ಥಿಸಿದ ಸಿದ್ದು ಆಪ್ತ ಶಾಸಕ ಪುಟ್ಟರಂಗಶೆಟ್ಟಿ

ತನ್ನ ಪತಿ ಸಿದ್ದರಾಮಯ್ಯ 43 ವರ್ಷಗಳ ಕಾಲ ಪ್ರಾಮಾಣಿಕ ರಾಜಕೀಯ ಮಾಡಿದ್ದಾರೆ. ಪ್ರಾಮಾಣಿಕ ದೃಷ್ಠಿಯಿಂದ ಸೈಟನ್ನ ವಾಪಸ್ಸು ನೀಡಿದ್ದಾರೆ. ಇದು ವಿವಾದ ಆಗುತ್ತೆ ಅಂತ ಮೊದಲು ಗೊತ್ತಿರ್ಲಿಲ್ಲ. ಬಿಜೆಪಿಯವರು ಪ್ರಾಮಾಣಿಕ ಮುಖ್ಯಮಂತ್ರಿ ಮೇಲೆ ಈ ರೀತಿ ಮಾಡ್ತಾರೆ ಅಂತ ಯಾರಿಗೆ ಗೊತ್ತಿತ್ತು ಎಂದು ಕಿಡಿಕಾರಿದರು.

Written by - Yashaswini V | Last Updated : Oct 1, 2024, 02:32 PM IST
  • ಸಿಎಂ ಪತ್ನಿ ಪಾರ್ವತಮ್ಮರಿಂದ ಮುಡಾಗೆ ಪತ್ರ ಬರೆದ ಪ್ರಕರಣ
  • ಸಿಎಂ ಪತ್ನಿಯ ನಡೆಯನ್ನ ಸಮರ್ಥಿಸಿಕೊಂಡ ಸಿದ್ದು ಆಪ್ತ ಪುಟ್ಟರಂಗಶೆಟ್ಟಿ
  • ಪುಟ್ಟರಂಗಶೆಟ್ಟಿ ಚಾಮರಾಜನಗರ ಶಾಸಕ ಹಾಗೂ ಎಂ.ಎಸ್.ಐ.ಎಲ್ ನಿಗಮದ ಅದ್ಯಕ್ಷ
ಸಿಎಂ ಪತ್ನಿ ಸೈಟ್ ವಾಪಾಸ್ ಸಮರ್ಥಿಸಿದ ಸಿದ್ದು ಆಪ್ತ ಶಾಸಕ ಪುಟ್ಟರಂಗಶೆಟ್ಟಿ

ಚಾಮರಾಜನಗರ:  ಸಿಎಂ ಪತ್ನಿ ಪಾರ್ವತಮ್ಮರಿಂದ ಮುಡಾಗೆ ಪತ್ರ ಬರೆದದ್ದನ್ನು ಸಿದ್ದು ಆಪ್ತ   ಚಾಮರಾಜನಗರ ಶಾಸಕ ಹಾಗೂ ಎಂ.ಎಸ್.ಐ.ಎಲ್ ನಿಗಮದ ಅದ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಸಮರ್ಥಿಸಿಕೊಂಡರು.

Add Zee News as a Preferred Source

ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಸಿಎಂ ಪತ್ನಿ ಮುಗ್ದ ಮಹಿಳೆ ನಾನೇ ಇದುವರೆಗೂ ಅವರ ಮುಖ ನೋಡಿಲ್ಲ,  ಅವರಿಗೆ ನಿವೇಶನ ಪ್ರಾಮಾಣಿಕವಾಗಿ ಬಂದಿದೆ,   ಹಿಂದುಗಳಲ್ಲಿ ಅರಿಶಿಣ ಕುಂಕುಮ ಕೊಡುವ ಸಂಪ್ರದಾಯವಿದೆ ಅದರಂತೆ ಜಾಗ ಬಳುವಳಿಯಾಗಿ ಬಂದಿದೆ ಎಂದರು.

ಇದನ್ನೂ ಓದಿ- ಮುಡಾ ಹಗರಣ: 14 ಸೈಟ್ ಹಿಂದಿರುಗಿಸಿದ ಸಿಎಂ ಪತ್ನಿ ಪಾರ್ವತಿ... ಸುದೀರ್ಘ ಪತ್ರದಲ್ಲಿ ಇರೋದೇನು?

ತನ್ನ ಪತಿ ಸಿದ್ದರಾಮಯ್ಯ 43 ವರ್ಷಗಳ ಕಾಲ ಪ್ರಾಮಾಣಿಕ ರಾಜಕೀಯ ಮಾಡಿದ್ದಾರೆ. ಪ್ರಾಮಾಣಿಕ ದೃಷ್ಠಿಯಿಂದ ಸೈಟನ್ನ ವಾಪಸ್ಸು ನೀಡಿದ್ದಾರೆ. ಇದು ವಿವಾದ ಆಗುತ್ತೆ ಅಂತ ಮೊದಲು ಗೊತ್ತಿರ್ಲಿಲ್ಲ. ಬಿಜೆಪಿಯವರು ಪ್ರಾಮಾಣಿಕ ಮುಖ್ಯಮಂತ್ರಿ ಮೇಲೆ ಈ ರೀತಿ ಮಾಡ್ತಾರೆ ಅಂತ ಯಾರಿಗೆ ಗೊತ್ತಿತ್ತು ಎಂದು ಕಿಡಿಕಾರಿದರು.

ಇದನ್ನೂ ಓದಿ- ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಕೀಳುಮಟ್ಟದ ಪದ ಬಳಕೆ: ಐಜಿಪಿ ಚಂದ್ರಶೇಖರ್‌ ವಿರುದ್ದ ಕ್ರಮಕ್ಕೆ ಸೂಚನೆ

ಇಡಿಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ಕೇಸ್ ದಾಖಲಾದ ಬಗ್ಗೆ ಮಾತನಾಡಿ, ಇಡಿಯವರು ಮಾಡಬಾರದನ್ನ ಮಾಡೋಕೆ ಆಗುತ್ತಾ..??
ವಾಪಸ್ಸು ಕೊಟ್ಟ ಮೇಲೆ ಪ್ರಕರಣ ಮುಗಿದೆ ಹೋಯ್ತಲ್ಲಾ, ಬಿಜೆಪಿಯವರು ರಾಜಕಾರಣವನ್ನ ಕಲುಷಿತ ಗೊಳಿಸಿದ್ದಾರೆ, ಇಡಿ ಎಂಟ್ರಿಯಾದ್ರೆ ಏನ್ ಮಾಡೋಕೆ ಆಗುತ್ತೆ ಏನ್ ಮಾಡಿಬಿಡ್ತಾರೆ,  ಅವರ ಪಕ್ಷದ ಯತ್ನಾಳ್ ಹೇಳ್ತಾರೆ ಸರ್ಕಾರ ಕೆಡುವೋಕೆ ಒಂದೂವರೆ ಸಾವಿರ ಕೋಟಿ ರೆಡಿ ಮಾಡ್ಕೊಂಡಿದ್ದಾರಂತಾ, ಯತ್ನಾಳರನ್ನ ಯಾರು ಯಾಕೆ ಪ್ರಶ್ನೆ ಮಾಡಲ್ಲ.
ಭ್ರಷ್ಟತನ ಇರುವುದೇ ಬರಿ ಬಿಜೆಪಿಯಲ್ಲಿ,  ಕುಮಾರಸ್ವಾಮಿ ಆಗ್ಲಿ ಯಾರೇ ಆಗ್ಲಿ ಇಲ್ಲಿ ಯಾರು ಶುದ್ಧವಾಗಿಲ್ಲ. ಎಲ್ರೂ ಮಾಡಬಾರದನ್ನ ಮಾಡಿರೋರೆ ಎಂದು ಮೈತ್ರಿ ಪಾಳೇಯದ ವಿರುದ್ಧ ಹರಿಹಾಯ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Yashaswini V

Yashaswini V

ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

...Read More

Trending News