ಶಿವಮೊಗ್ಗದಲ್ಲಿ ಕಾರಿನಲ್ಲಿದ್ದ ಮೊಬೈಲ್ ಸ್ಪೋಟ..!

ನಗರದಲ್ಲಿ ಇವತ್ತು ಕಾರೊಂದರಲ್ಲಿ ಇಟ್ಟಿದ್ದ ಮೊಬೈಲ್​ ಸ್ಫೋಟಗೊಂಡು ಕಾರಿನೊಳಗೆ ಬೆಂಕಿ ಹೊತ್ತಿಕೊಂಡಿದ್ದ ಘಟನೆ ಸಂಭವಿಸಿದೆ. ಶಿವಮೊಗ್ಗ ನಗರದ ದುರ್ಗಿಗುಡಿ ಸ್ಕೂಲ್​ನ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ಸ್ಕೂಲ್​ನ ಬಳಿಯಲ್ಲಿ ರೋಡ್​​ ಸೈಡ್​ನಲ್ಲಿದ್ದ ಕಾರಿನಲ್ಲಿ ಮೊಬೈಲ್​ ಸ್ಫೋಟಗೊಂಡಿದೆ.

Written by - Zee Kannada News Desk | Last Updated : Jan 2, 2023, 11:22 PM IST
  • ದುರ್ಗಿಗುಡಿ ಸರ್ಕಾರಿ ಶಾಲೆಯ ಬಳಿಯಲ್ಲಿ ಇವತ್ತು ಮಧ್ಯಾಹ್ನ ಘಟನೆ ಸಂಭವಿಸಿದೆ.
  • ರಿಪ್ಪನ್​ ಪೇಟೆ ಮೂಲದ ಕೃಷ್ಣ ಎಂಬವರ ಕಾರಿನಲ್ಲಿ ಮೊಬೈಲ್​ ಸ್ಫೋಟಗೊಂಡಿದೆ.
  • ಇಲ್ಲಿನ ಸರ್ಜಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಪೇಶೆಂಟ್ ಒಬ್ಬರ ಯೋಗಕ್ಷೇಮ ವಿಚಾರಿಸಲು ಕೃಷ್ಣರವರು ಬಂದಿದ್ದರು
ಶಿವಮೊಗ್ಗದಲ್ಲಿ ಕಾರಿನಲ್ಲಿದ್ದ ಮೊಬೈಲ್ ಸ್ಪೋಟ..! title=

ಶಿವಮೊಗ್ಗ:  ನಗರದಲ್ಲಿ ಇವತ್ತು ಕಾರೊಂದರಲ್ಲಿ ಇಟ್ಟಿದ್ದ ಮೊಬೈಲ್​ ಸ್ಫೋಟಗೊಂಡು ಕಾರಿನೊಳಗೆ ಬೆಂಕಿ ಹೊತ್ತಿಕೊಂಡಿದ್ದ ಘಟನೆ ಸಂಭವಿಸಿದೆ. ಶಿವಮೊಗ್ಗ ನಗರದ ದುರ್ಗಿಗುಡಿ ಸ್ಕೂಲ್​ನ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ಸ್ಕೂಲ್​ನ ಬಳಿಯಲ್ಲಿ ರೋಡ್​​ ಸೈಡ್​ನಲ್ಲಿದ್ದ ಕಾರಿನಲ್ಲಿ ಮೊಬೈಲ್​ ಸ್ಫೋಟಗೊಂಡಿದೆ.

ಇದನ್ನೂ ಓದಿ: ಸಿದ್ದೇಶ್ವರ ಶ್ರೀಗಳು ಬೆಳೆದು ಬಂದ ಹಾದಿ 

ದುರ್ಗಿಗುಡಿ ಸರ್ಕಾರಿ ಶಾಲೆಯ ಬಳಿಯಲ್ಲಿ ಇವತ್ತು ಮಧ್ಯಾಹ್ನ ಘಟನೆ ಸಂಭವಿಸಿದೆ. ರಿಪ್ಪನ್​ ಪೇಟೆ ಮೂಲದ ಕೃಷ್ಣ ಎಂಬವರ ಕಾರಿನಲ್ಲಿ ಮೊಬೈಲ್​ ಸ್ಫೋಟಗೊಂಡಿದೆ.ಇಲ್ಲಿನ ಸರ್ಜಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಪೇಶೆಂಟ್ ಒಬ್ಬರ ಯೋಗಕ್ಷೇಮ ವಿಚಾರಿಸಲು ಕೃಷ್ಣರವರು ಬಂದಿದ್ದರು.ಡ್ರೈವರ್​ ಸೀಟ್​ನ ಹಿಂಬದಿಯಲ್ಲಿ ಇರುವ ಕವರ್​ನಲ್ಲಿ ಮೊಬೈಲ್​ ಇಟ್ಟು ಅವರು ತೆರಳಿದ್ದಾರೆ.ಈ ನಡುವೆ ಹಿಂದಿನ ಕವರ್​ನಲ್ಲಿದ್ದ ಮೊಬೈಲ್​ ಸ್ಫೋಟಗೊಂಡು ಸೀಟಿಗೆ ಬೆಂಕಿ ಹೊತ್ತಿಕೊಂಡು, ಸುಟ್ಟುಹೋಗಿದೆ.

ಇದನ್ನೂ ಓದಿ: "ಅಮಿತ್ ಶಾ ಆಟ ನನ್ನ ಬಳಿ ನಡೆಯಲ್ಲ"

ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದರಾದರೂ, ಅಷ್ಟರಲ್ಲಿ ಕಾರಿನೊಳಗೆ ಸಾಕಷ್ಟು ಡ್ಯಾಮೇಜ್​ ಸಂಭವಿಸಿತ್ತು, ಅದೃಷ್ಟಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News