ಮುರುಘಾ ಶ್ರೀ ಲೈಂಗಿಕ ಕಿರುಕುಳ ಪ್ರಕರಣ: ಮಕ್ಕಳು ಮಾನಸಿಕವಾಗಿ ಕುಗ್ಗಿಲ್ಲ, ಧೈರ್ಯವಾಗಿದ್ದಾರೆ..!

ಮಕ್ಕಳು ಮಾನಸಿಕವಾಗಿ ಕುಗ್ಗಿಲ್ಲ, ಧೈರ್ಯವಾಗಿಯೇ ಇದ್ದಾರೆ ಎಂದು ಮುರುಘಾ ಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಮಕ್ಕಳ ಜೊತೆ ಚಿತ್ರದುರ್ಗಕ್ಕೆ ತೆರಳಿದ್ದ ಆಪ್ತ ಸಮಾಲೋಚಕಿ ಸರಸ್ವತಿ ತಿಳಿಸಿದ್ದಾರೆ.

Written by - Krishna N K | Last Updated : Sep 3, 2022, 03:40 PM IST
  • ಮುರುಘಾ ಶ್ರೀ ಲೈಂಗಿಕ ಕಿರುಕುಳ ಪ್ರಕರಣ
  • ಮಕ್ಕಳು ಮಾನಸಿಕವಾಗಿ ಕುಗ್ಗಿಲ್ಲ, ಧೈರ್ಯವಾಗಿಯೇ ಇದ್ದಾರೆ
  • ಮಕ್ಕಳ ಜೊತೆ ಚಿತ್ರದುರ್ಗಕ್ಕೆ ತೆರಳಿದ್ದ ಆಪ್ತ ಸಮಾಲೋಚಕಿ ಸರಸ್ವತಿ ಹೇಳಿಕೆ
ಮುರುಘಾ ಶ್ರೀ ಲೈಂಗಿಕ ಕಿರುಕುಳ ಪ್ರಕರಣ: ಮಕ್ಕಳು ಮಾನಸಿಕವಾಗಿ ಕುಗ್ಗಿಲ್ಲ, ಧೈರ್ಯವಾಗಿದ್ದಾರೆ..! title=

ಮೈಸೂರು: ಮಕ್ಕಳು ಮಾನಸಿಕವಾಗಿ ಕುಗ್ಗಿಲ್ಲ, ಧೈರ್ಯವಾಗಿಯೇ ಇದ್ದಾರೆ ಎಂದು ಮುರುಘಾ ಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಮಕ್ಕಳ ಜೊತೆ ಚಿತ್ರದುರ್ಗಕ್ಕೆ ತೆರಳಿದ್ದ ಆಪ್ತ ಸಮಾಲೋಚಕಿ ಸರಸ್ವತಿ ತಿಳಿಸಿದ್ದಾರೆ.

ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಹೈ ಪ್ರೋಫೈಲ್ ಕೇಸ್ ಆಗಿರೋದ್ರಿಂದ ಕೊಂಚ ಭಯ ಇತ್ತು. ಮಕ್ಕಳು ಮಾನಸಿಕವಾಗಿ ಕುಗ್ಗಿಲ್ಲ, ಧೈರ್ಯವಾಗಿಯೇ ಇದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: SB Vastramath : ಮುರುಘಾಮಠದ ನೂತನ ಆಡಳಿತಾಧಿಕಾರಿಯಾಗಿ ನಿವೃತ್ತ ನ್ಯಾ. ಎಸ್.ಬಿ. ವಸ್ತ್ರಮಠದ್!

ಅಲ್ಲದೆ, ಚಿತ್ರದುರ್ಗಕ್ಕೆ ಹೊದ ನಂತರ ಭಯ ಹೆಚ್ಚಾಯ್ತು. ಯುದ್ದ ರಂಗಕ್ಕೆ ಹೋದ ಅನುಭವ ರೀತಿಯಲ್ಲೇ ಇತ್ತು. ಅಲ್ಲಿ ಯಾವುದೇ ರೀತಿಯ ಒತ್ತಡ ಇರಲಿಲ್ಲ‌. ನಮಗೆ ನಾವೇ ಭಯದ ವಾತಾವರಣದಲ್ಲಿ ಇದ್ವಿ. ಮಕ್ಕಳ ರಕ್ಷಣೆ ನಮ್ಮ ಕರ್ತವ್ಯ. ಸಧ್ಯ ಅವರು ಚಿತ್ರದುರ್ಗ CWCಯಲ್ಲಿ ಚೆನ್ನಾಗಿ ಇದ್ದಾರೆ ಎಂದು ಸರಸ್ವತಿ ಅವರು ಮಾಹಿತಿ ನೀಡಿದ್ದಾರೆ.

ಮುರುಘಾಶ್ರೀಗಳ ಪುರುಷತ್ವ ಪರೀಕ್ಷೆ

ಸಧ್ಯ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ಬಂಧನದಲ್ಲಿರುವ ಮುರುಘಾ ಸ್ವಾಮೀಜಿಗಳ ಪರುಷತ್ವ ಪರೀಕ್ಷೆ ನಡೆಸಲಾಗಿದೆ. ಪರೀಕ್ಷಾ ವರದಿಯನ್ನು ವೈದ್ಯರು ಪೊಲೀಸರ ಸುಪರ್ದಿಗೆ ನೀಡಿದ್ದಾರೆ. ಅಲ್ಲದೆ, ವೈದ್ಯರು ಶ್ರೀಗಳ ರಕ್ತದ ಮಾದರಿ, ಕೂದಲು, ಉಗುರು ಸೇರಿ ಹಲವು ರೀತಿಯ ಸ್ಯಾಂಪಲ್ ಪಡೆದಿದ್ದು, ಮಾದರಿಗಳನ್ನ ಎಫ್ಎಸ್‌ಎಲ್‌ಗೆ ರವಾನಿಸಿದ್ದಾರೆ. ವರದಿ ಬಳಿಕ ಸ್ಪಷ್ಟ ಮಾಹಿತಿ ದೊರೆಯಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News