ಹನುಮನ ದೇವಾಲಯಕ್ಕೆ ಜಾಗ ನೀಡಿದ ಮುಸ್ಲಿಂ ವ್ಯಕ್ತಿ

ಹಿರಿಯರು ದಾನ ಮಾಡಿದನ್ನೂ ಬೀಡದ ಮಕ್ಕಳಿರುವ ಇಂದಿನ ಯುಗದಲ್ಲಿ ಹಿಂದೂ ದೇವಾಲಯಕ್ಕೆ  ಮುಸ್ಲಿಂ ಮುಖಂಡನೋರ್ವ ಲಕ್ಷಗಟ್ಟಲೆ ಬೆಲೆ ಬಾಳುವ ಭೂಮಿಯನ್ನು ಕೊಡುಗೆಯಾಗಿ ನೀಡಿ ಭಾವೈಕ್ಯತೆ ಮೆರೆದಿದ್ದಾರೆ.

Written by - Yashaswini V | Last Updated : Sep 6, 2022, 09:12 AM IST
  • ಹನುಮನ ದೇವಾಲಯಕ್ಕೆ ಜಮೀನು ಕೊಟ್ಟ ಮುಸ್ಲಿಂ ಮುಖಂಡ
  • ಭೂಮಿ ಕೊಡುಗೆ ಮೂಲಕ ಹಿಂದೂ ಮುಸ್ಲಿಂ ಎಲ್ಲರೂ ಒಂದೇ ಎನ್ನುವ ಸಂದೇಶ
  • ಲಕ್ಷಗಟ್ಟಲೆ ಬೆಲೆ ಬಾಳುವ ಭೂಮಿಯನ್ನು ಕೊಡುಗೆಯಾಗಿ ನೀಡಿ ಭಾವೈಕತೆ ಮೆರೆದ ಮುಸ್ಲಿಂ ವ್ಯಕ್ತಿ
ಹನುಮನ ದೇವಾಲಯಕ್ಕೆ ಜಾಗ ನೀಡಿದ ಮುಸ್ಲಿಂ ವ್ಯಕ್ತಿ title=
Hindu-Muslim

ಯಾದಗಿರಿ:  ಯಾದಗಿರಿ ನಗರದ ಮುಸ್ಲಿಂಪುರ ವಾರ್ಡಿನ  ಹಿರೇ ಅಗಸಿ ಪ್ರದೇಶದಲ್ಲಿರುವ ಹನುಮನ ದೇವಾಲಯ ಬಹಳ ಪುರಾತನ ಇತಿಹಾಸವನ್ನು ಹೊಂದಿದೆ. ಇದೀಗ ಈ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕಾಗಿ ಮುಸ್ಲಿಂ ಮುಖಂಡರೊಬ್ಬರು ತಮ್ಮ ಲಕ್ಷಗಟ್ಟಲೆ ಬೆಲೆಬಾಳುವ ಭೂಮಿಯನ್ನು ಕೊಡುಗೆಯಾಗಿ ನೀಡಿದ್ದು ಭಾವೈಕ್ಯತೆ ಮೆರೆದಿದ್ದಾರೆ. 

ವಿಶೇಷವೆಂದರೆ ದೇವಸ್ಥಾನದ ಪಕ್ಕದಲ್ಲಿಯೇ ಯಾಕೂಭ ಸಾಬ ದರ್ಗಾ ಕೂಡ ಇದೆ. ಹೀಗಾಗಿ ಹಿಂದೂ ಮುಸ್ಲಿಂ ಭಾಂದವರು ಒಂದೇ ಕಡೆ ತಮ್ಮ ಭಕ್ತಿ ಭಾವವನ್ನು ಸಮರ್ಪಿಸುತ್ತಾರೆ. ದೇವಸ್ಥಾನದ ಪಕ್ಕದಲ್ಲಿ ಖಾಲಿ ನಿವೇಶನ ಇದೆ. ಅದು ಮುಸ್ಲಿಂ ಮುಖಂಡನಿಗೆ ಸೇರಿದ ನೀವೆಶನದ ಸೈಟ್ ಆಗಿದೆ. ಹನುಮನ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳಿಗೆ ಅಡೆತಡೆಯಾಗಿದ್ದು ಅವರನ್ನು ನೀವೆಶನ ಕೊಡುವಿರಾ ಎಂದು ಕೇಳಿದಾಗ  ಮುಸ್ಲಿಂ ಮುಖಂಡ  ಅಜೀಜ್ ಅಹ್ಮದ ಶಾ   30* 40 ಇರುವ ಭೂಮಿಯನ್ನು ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಕೊಡುಗೆ ಕೊಟ್ಟಿದ್ದಾರಂತೆ. 

ಇದನ್ನೂ ಓದಿ- POCSO Case: ಮುರುಘಾ ಶ್ರೀಗಳಿಗೆ 9 ದಿನಗಳ ನ್ಯಾಯಾಂಗ ಬಂಧನ

ಸೇಡಂ ಟು ಯಾದಗಿರಿ ರಸ್ತೆಯ ಪಕ್ಕದಲ್ಲಿ ಇರುವದರಿಂದ ಲಕ್ಷಗಟ್ಟಲೆ ಬೆಲೆ ಬಾಳುವ ಭೂಮಿ ಇದಾಗಿದ್ದು ಮುಸ್ಲಿ ಮುಖಂಡನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಿರಿಯರು ದಾನ ಮಾಡಿದನ್ನೂ ಬೀಡದ ಮಕ್ಕಳಿರುವ ಇಂದಿನ ಯುಗದಲ್ಲಿ ಹಿಂದೂ ದೇವಾಲಯಕ್ಕೆ  ಮುಸ್ಲಿಂ ಮುಖಂಡನೋರ್ವ ಲಕ್ಷಗಟ್ಟಲೆ ಬೆಲೆ ಬಾಳುವ ಭೂಮಿಯನ್ನು ಕೊಡುಗೆಯಾಗಿ ನೀಡಿ ಭಾವೈಕತೆ ಮೆರೆದಿರುವುದು ಎಲ್ಲರಿಗೂ ಆದರ್ಶವಾಗಿದೆ.

ದಿನ ಕಳೆದಂತೆ ಭೂಮಿ ಬೆಲೆ ಗಗನಕ್ಕೆ ಏರುತ್ತಿದೆ ಒಂದಿಚೂ ಜಾಗವನ್ನು ಬಿಟ್ಟುಕೊಡಬೇಕಾದ್ರೆ ಹಿಂದೆ-ಮುಂದೆ ನೋಡುವ ಇಂದಿನ ದಿನಗಳಲ್ಲಿ ಮುಸ್ಲಿಂ ವ್ಯಕ್ತಿಯೋರ್ವ ದೇವಸ್ಥಾನಕ್ಕೆ ಉಚಿತವಾಗಿ ಭೂಮಿಯನ್ನು ದಾನ ಮಾಡಿರುವುದು ನಿಜಕ್ಕೂ ಮೆಚ್ಚಲೇ ಬೇಕಾದ ವಿಷಯ. ಇದೀಗ ಈ ಪ್ರದೇಶದಲ್ಲಿ ಅಜೀಜ್ ಶಾ ಅವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

ಇದನ್ನೂ ಓದಿ- ಮಳೆ ಅವಾಂತರ: ಮನೆಗೋಡೆ ಕುಸಿದು ಯುವಕ ಸಾವು, ಕೆರೆಯಂತಾದ ಬೇಗೂರು ಠಾಣೆ

ಹನುಮನ ದೇವಸ್ಥಾನದ ಆವರಣಕ್ಕೆ ಉಚಿತವಾಗಿ ಭೂಮಿ ನೀಡಿದ  ಅಜೀಜ್ ಶಾ ಅವರನ್ನು ಕರೆದು ಆಡಳಿತ ಮಂಡಳಿ  ಸನ್ಮಾನ ಮಾಡಿ ಅಭಿನಂದಿಸಿ ಹಿಂದೂ ಮುಸ್ಲಿಂ ಭಾಂದವರು ಒಟ್ಟಾಗಿ ಬಾಳೋಣ ಎನ್ನುವ ಸಂದೇಶ ನೀಡಿದರು. ಒಟ್ಟಿನಲ್ಲಿ ದಿನ ಬೆಳಗಾದ್ರೆ ಹಿಂದೂ-ಮುಸ್ಲಿಂ  ಎಂದು ಹೊಡೆದಾಡುವ ಜನರ ನಡುವೆ   ನಾವೆಲ್ಲರೂ ಒಂದೇ ಎನ್ನುವ   ಸಾಮರಸ್ಯದ ಜೀವನ ಎಲ್ಲರಿಗೂ ದಾರಿದೀಪವಾಗಬೇಕಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News