ನಲಪಾಡ್ ಜಾಮೀನು ಅರ್ಜಿ ತಿರಸ್ಕರಿಸಿದ ಬೆಂಗಳೂರು ಕೋರ್ಟ್

    

Last Updated : Mar 2, 2018, 05:33 PM IST
ನಲಪಾಡ್ ಜಾಮೀನು ಅರ್ಜಿ ತಿರಸ್ಕರಿಸಿದ ಬೆಂಗಳೂರು ಕೋರ್ಟ್  title=

ಬೆಂಗಳೂರು: ಬೆಂಗಳೂರಿನ ರೆಸ್ಟೋರೆಂಟ್ ಒಂದರಲ್ಲಿ ವಿದ್ವತ್ ಮೇಲೆ ಹಲ್ಲೆ ಮಾಡಿದ ವಿಚಾರವಾಗಿ ನ್ಯಾಯಾಂಗ ಬಂಧನದಲ್ಲಿದ್ದ ಶಾಸಕ ಹ್ಯಾರಿಸ್ ಮಗ ನಲಪಾಡ್ ಗೆ ಬೆಂಗಳೂರು ಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ನಲಪಾಡ್ ಅರ್ಜಿಯನ್ನು ವಿಚಾರಣೆ ನಡೆಸಿದ ನಂತರ ಪ್ರತಿಕ್ರಯಿಸಿರುವ ಪಬ್ಲಿಕ್ ಕೋರ್ಟ್ ಪ್ರಾಸಿಕ್ಯೂಟರ್ ಆರೋಪಿಯು ತನಿಖೆಯ ಸಂಧರ್ಭದಲ್ಲಿ ತನ್ನ ಪ್ರಭಾವ ಬಿರುವ ಪ್ರಯತ್ನ ಮಾಡಿದ್ದಾರೆ, ಆದ್ದರಿಂದ ಅವರು ಯಾವುದೇ ರೀತಿಯಿಂದಲೂ ಕೂಡ ಜಾಮೀನಿಗೆ ಅರ್ಹನಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 

ನಲಪಾಡ್ ಫೆಬ್ರುವರಿ 17 ರಂದು ಯುಬಿ ಸಿಟಿ ಯ ರೆಸ್ಟೋರೆಂಟ್ ಒಂದರಲ್ಲಿ ವಿದ್ವತ್ ಮೇಲೆ ದಾಳಿ ಮಾಡಿ ಅವರನ್ನು ಗಂಭೀರವಾಗಿ ಗಾಯಗೊಳಿಸಿದ್ದರು. ಅಂದಿನಿಂದ ವಿದ್ವತ್ ನಗರದ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Trending News