ಗೃಹಸಚಿವರ ಊರಿನಲ್ಲಿ ಅಂತ್ಯ ಸಂಸ್ಕಾರಕ್ಕಿಲ್ಲ ಜಾಗ...!

Written by - Zee Kannada News Desk | Last Updated : Jul 16, 2022, 04:00 PM IST
  • ಹೌದು ಈ ದೃಶ್ಯಗಳ ಕಂಡುಬಂದದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹುಣಸವಳ್ಳಿ ಗ್ರಾಮದಲ್ಲಿ.
  • ಸರ್ಕಾರದ ಕಡ್ಡಾಯ ಆದೇಶಕ್ಕೂ ಕ್ಯಾರೆ ಎನ್ನದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಟಾರ್ಪಲ್‌ ಅಡಿಯಲ್ಲಿ ಅಮಾನವೀಯ ಅಂತ್ಯಸಂಸ್ಕಾರ ನಡೆಸಿದ ಘಟನೆ ಗೃಹಸಚಿವರ ತವರು ಕ್ಷೇತ್ರದಲ್ಲಿ ಕಂಡು ಬಂದಿದೆ.
ಗೃಹಸಚಿವರ ಊರಿನಲ್ಲಿ ಅಂತ್ಯ ಸಂಸ್ಕಾರಕ್ಕಿಲ್ಲ ಜಾಗ...! title=

ನಾಗರೀಕತೆ ಬೆಳೆದಂತೆ ಸಭ್ಯ ಸಮಾಜಕ್ಕೆ ಒದಗಿಸಬೇಕಾದ ಮೂಲಭೂತ ಸೌಕರ್ಯ ಕೊರತೆ ಜಿಲ್ಲೆಯಲ್ಲಿ ಎದ್ದು ಕಾಣಿಸುತ್ತಿದೆ. ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೂ ಸುಸೂತ್ರ ಜಾಗವಿಲ್ಲದೇ ಪರದಾಡುವಂತಾಗಿದ್ದು, ಮಳೆಯ ನಡುವೆ ಟಾರ್ಪಲ್‌ ಹಾಕಿಕೊಂಡು ಚಿತೆಗೆ ಬೆಂಕಿ ಇಟ್ಟ ಹೃದಯ ವಿದ್ರಾವಕ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಹುಣಸವಳ್ಳಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ- ನುಗ್ಗೆ ಸೊಪ್ಪಿನ ಸೇವನೆಯಿಂದ ಬಗೆಹರಿಯುತ್ತದೆ ಈ ಎಲ್ಲಾ ಸಮಸ್ಯೆಗಳು

ಮಳೆಯ ನಡುವೆ ಚಿತಗೆ ಕಟ್ಟಿಗೆ ಜೋಡಿಸುತ್ತಿರುವ ಜನ, ಚಿತೆಗೆ ಟಾರ್ಪಲ್ ಹಿಡಿದು ನಿಂತಿರುವ ಜನ, ಟಾರ್ಪಲ್ ಕೆಳಗೆ ಸಂಸ್ಕಾರದ ಶಾಸ್ತ್ರಗಳನ್ನ ಮಾಡುತ್ತಿರುವ ವ್ಯಕ್ತಿ. ಜಿಟಿ ಜಿಟಿ ಮಳೆಯಲ್ಲಿ ಅಂತ್ಯಸಂಸ್ಕಾರ ಮಾಡುವ ದೃಶ್ಯ, ಹೌದು ಈ ದೃಶ್ಯಗಳ ಕಂಡುಬಂದದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹುಣಸವಳ್ಳಿ ಗ್ರಾಮದಲ್ಲಿ.ಸರ್ಕಾರದ ಕಡ್ಡಾಯ ಆದೇಶಕ್ಕೂ ಕ್ಯಾರೆ ಎನ್ನದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಟಾರ್ಪಲ್‌ ಅಡಿಯಲ್ಲಿ ಅಮಾನವೀಯ ಅಂತ್ಯಸಂಸ್ಕಾರ ನಡೆಸಿದ ಘಟನೆ ಗೃಹಸಚಿವರ ತವರು ಕ್ಷೇತ್ರದಲ್ಲಿ ಕಂಡು ಬಂದಿದೆ. ನಿನ್ನೆ ಮೇಲಿನ ಕುರುವಳ್ಳಿ ಗ್ರಾಮಪಂಚಾಯತ್ ನ ಹುಣಸವಳ್ಳಿ ಗ್ರಾಮದ 70 ವರ್ಷದ ಮುನ್ನೂರು ಭವಾನಿಯಮ್ಮ ವಯೋಸಹಜದಿಂದ ಸಾವನ್ನಪ್ಪಿದ್ದರು. ಜಿಟಿ ಜಿಟಿ ಮಳೆಯ ನಡುವೆ ಗ್ರಾಮಸ್ಥರು ಟಾರ್ಪಲ್ ಹಿಡಿದುಕೊಂಡು ಅಂತ್ಯಸಂಸ್ಕಾರವನ್ನ‌ ನೆಡೆಸಿದ್ದಾರೆ.

ಇದನ್ನೂ ಓದಿ: ಅಭಿನಯ ಚಕ್ರವರ್ತಿ ಸುದೀಪ್‌ 13 ವರ್ಷಗಳ ನಂತರ ರಾಜಧಾನಿ ದೆಹಲಿಗೆ ಹೋಗಿದ್ದೇಕೆ..?

No description available.

ಇನ್ನು ಮೇಲಿನ ಕುರುವಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಗೆ ಬರುವ ಹುಣಸವಳ್ಳಿ ಗ್ರಾಮದಲ್ಲಿ ಸ್ಮಶಾಣಕ್ಕಾಗಿ ಎರಡು ಎಕರೆ ಜಮೀನು ಗುರುತಿಸಿದ್ದಾರೆ, ಆದರೆ ಗ್ರಾಮಪಂಚಾಯತ್ ನವರು ಅಲ್ಲಿ ಯಾವುದೇ ಸೌಲಭ್ಯವನ್ನು ಕಲ್ಪಿಸಿಲ್ಲ. ಇತ್ತ ಮಳೆಗಾಲದಲ್ಲಿ ಗ್ರಾಮದಲ್ಲಿ ಯಾರೋಬ್ಬರು ಮೃತಪಟ್ಟರು ಇದೇ ಗೋಳು. ಮಳೆಯ ನಡುವೆಯೂ ಟಾರ್ಪಲ್ ನ್ನು ಹಿಡಿದು ಅಂತ್ಯಸಂಸ್ಕಾರವನ್ನ ನಡೆಸಲಾಗುತ್ತೆ, ಈ ಬಗ್ಗ ಸ್ಥಳಿಯ ಶಾಸಕರು ಹಾಗೂ ಸಂಬಂಧಪಟ್ಟವರಿಗೆ ತಿಳಿಸಿದ್ರು ಯಾವುದೇ ಪ್ರಯೋಜನವಾಗಿಲ್ಲ..

ಇದನ್ನೂ ಓದಿ: Vikrant Rona: ರಾ ರಾ ರಕ್ಕಮ್ಮ ಹುಕ್ ಸ್ಟೆಪ್ ಹಿಂದಿನ ಮಾಸ್ಟರ್‌ ಇವರೇ ನೋಡಿ..

ಒಟ್ಟಾರೆ ರಾಜ್ಯದಲ್ಲಿ 29,438 ಗ್ರಾಮಗಳಿದ್ದು ಶೇಕಡಾ 40 ರಷ್ಟು ಗ್ರಾಮಗಳಿಗೆ ಸ್ಮಶಾನ ಜಾಗವೇ ಇಲ್ಲ ಎಂಬುದನ್ನು ಸರ್ಕಾರವೇ ಕೋರ್ಟ್‌ ಮುಂದೆ ಒಪ್ಪಿಕೊಂಡಿದೆ. ಆದ್ರೆ ಇಲ್ಲಿ ಭೂಮಿ ಇದ್ದರು ಸ್ಮಶಾನ ನಿರ್ಮಾಣಕ್ಕೆ ಯಾಕೆ ಮುಂದಾಗುತ್ತಿಲ್ಲ, ಕೂಡಲೇ ಸಂಬಂದಪಟ್ಟವರು ಇತ್ತ ಗಮನ ಹರಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೆಕೆಂಬುದು ನಮ್ಮ ಒತ್ತಾಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

Trending News