ಕರ್ನಾಟಕದಲ್ಲಿ ಈಗ 20 ಪರ್ಸೆಂಟ್ ಸರ್ಕಾರವಿದೆ -ಪ್ರಧಾನಿ ಮೋದಿ

ಕರ್ನಾಟಕದಲ್ಲಿ ಹಿಂದೆ 10 ಪರ್ಸೆಂಟ್ ಸರಕಾರವಿತ್ತು ಆದರೆ ಈಗ ಇಬ್ಬರು ಸೇರಿ 20 ಪರ್ಸೆಂಟ್ ಸರ್ಕಾರ ನಡೆಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು.

Last Updated : Apr 12, 2019, 04:19 PM IST
ಕರ್ನಾಟಕದಲ್ಲಿ ಈಗ 20 ಪರ್ಸೆಂಟ್ ಸರ್ಕಾರವಿದೆ -ಪ್ರಧಾನಿ ಮೋದಿ  title=
Photo courtesy: Twitter

ಬೆಂಗಳೂರು: ಕರ್ನಾಟಕದಲ್ಲಿ ಹಿಂದೆ 10 ಪರ್ಸೆಂಟ್ ಸರಕಾರವಿತ್ತು ಆದರೆ ಈಗ ಇಬ್ಬರು ಸೇರಿ 20 ಪರ್ಸೆಂಟ್ ಸರ್ಕಾರ ನಡೆಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಗಂಗಾವತಿಯಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಮೋದಿ ಮೊದಲು ಕನ್ನಡದಲ್ಲಿ ಭಾಷಣ ಆರಂಭಿಸಿ ಈ ಭೂಮಿಯಲ್ಲಿ ಶ್ರೀರಾಮನ ಸೇವಾ ಶಬರಿಯ ಭಕ್ತಿ ಭಾವ ಇದೆ ಎಂದು ಹೇಳಿದರು.ಇನ್ನು ಮುಂದುವರೆದು ಈ ಬಾರಿಯ ಚುನಾವಣೆ ರಾಷ್ಟ್ರವಾದ ಮತ್ತು ವಂಶವಾದದ ನಡುವೆ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.

ದೇವೇಗೌಡರ ಪುತ್ರನೊಬ್ಬ ಹೇಳುತ್ತಿದ್ದಾನೆ. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಬಂದರೆ ರಾಜಕೀಯ ನಿವೃತ್ತಿ ನೀಡುವುದಾಗಿ  ಹೇಳುತ್ತಿದ್ದಾರೆ.ಅವರನ್ನು ನೀವು ನಂಬುತ್ತಿರಾ? 2014 ರಲ್ಲಿ ದೇವೇಗೌಡರು  ಒಂದು ವೇಳೆ  ಮೋದಿ  ಪ್ರಧಾನಿಯಾದರೆ ನಿವೃತ್ತಿಯಾಗುವುದಾಗಿ ಹೇಳಿದ್ದರು.ಆದರೆ ನಿರೀಕ್ಷೆಯಂತೆ ಅವರು ನಿವೃತ್ತಿ ಘೋಷಿಸಲಿಲ್ಲ. ಅವರು ರಾಜೀನಾಮೆ ನೀಡುವುದು ದೂರದ ಮಾತು ಅದರ ಬದಲು ತಮ್ಮ ಕುಟುಂಬ ಸದಸ್ಯರನ್ನು ರಾಜಕೀಯದಲ್ಲಿ ತುಂಬುತ್ತಿದ್ದಾರೆ.ಆದ್ದರಿಂದ ಅವರ ಮಿಶನ್ ಒಂದೇ ಅದು ಕಮಿಷನ್.ಈ ಹಿಂದಿನ ಸರ್ಕಾರ 10 ಪರ್ಸೆಂಟ್ ಸರ್ಕಾರವಾಗಿತ್ತು, ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡಿದ್ದರಿಂದ  20 ಪರ್ಸೆಂಟ್ ಸರಕಾರವಾಗಿದೆ ಎಂದು ಪ್ರಧಾನಿ  ಮೋದಿ ವಾಗ್ದಾಳಿ ನಡೆಸಿದರು.

 

Trending News