ಆಪರೇಷನ್ ಚೀತಾ ಸಕ್ಸಸ್: ಕೊನೆಗೂ ಬೋನಿಗೆ ಬಿತ್ತು ರೇಡಿಯೋ ಕಾಲರ್ ಚಿರತೆ!

Operation Cheetah Success: ಕಳೆದ ತಿಂಗಳು ರೇಡಿಯೋ ಕಾಲರ್ ಅಳವಡಿಸಿರುವ ಈ ಚಿರತೆಯು ರೈತರ ಜಮೀನುಗಳಿಗೆ ನುಗ್ಗಿ ದಾಳಿ ನಡೆಸಿ ಹತ್ತಕ್ಕೂ ಹೆಚ್ಚು ಮೇಕೆ ಮತ್ತು ಕೋಳಿಗಳನ್ನು ತಿಂದು ತೇಗಿತ್ತು.

Written by - Puttaraj K Alur | Last Updated : Jun 21, 2024, 07:19 PM IST
  • ಕೊನೆಗೂ‌ ಬೋನಿಗೆ ಬಿದ್ದ ರೇಡಿಯೋ ಕಾಲರ್ ಅಳವಡಿಸಿದ್ದ ಚಿರತೆ!
  • 15 ದಿನಗಳಿಂದ ಕಾರ್ಯಾಚರಣೆ ಕೈಗೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ
  • 5 ಫೈಬರ್ ಬೋನ್, 2 ಕೇಜ್ & 35 ಕ್ಯಾಮರಾ ಅಳವಡಿಸಲಾಗಿತ್ತು
ಆಪರೇಷನ್ ಚೀತಾ ಸಕ್ಸಸ್: ಕೊನೆಗೂ ಬೋನಿಗೆ ಬಿತ್ತು ರೇಡಿಯೋ ಕಾಲರ್ ಚಿರತೆ!  title=
ಬೋನಿಗೆ ಬಿದ್ದ ಚಿರತೆ!

ಚಾಮರಾಜನಗರ: ಕಳೆದ 15 ದಿನಗಳಿಂದ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಶ್ರಮ ಕೊನೆಗೂ ಫಲ ಕೊಟ್ಟಿ̧ದ್ದು ರೇಡಿಯೋ ಕಾಲರ್ ಅಳವಡಿಸಿದ್ದ ಚಿರತೆ ಕೊನೆಗೂ‌ ಬೋನಿಗೆ ಬಿದ್ದಿದೆ.

ಕೊಳ್ಳೇಗಾಲ ತಾಲೂಕಿನ ಬಿಆರ್‌ಟಿ ವ್ಯಾಪ್ತಿಗೆ ಒಳಪಡುವ ಗುಂಡಾಲ್ ಜಲಾಶಯ ಸಮೀಪದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಈ ಚಿರತೆಯನ್ನು ಮೈಸೂರು ಚಿರತೆ ಕಾರ್ಯಪಡೆಗೆ ಕೊಡಲಾಗಿದೆ.

ಇದನ್ನೂ ಓದಿ: ಭಾರತಕ್ಕೆ ಇಂಧನ ಭದ್ರತೆ ಕಲ್ಪಿಸಲು ಬದ್ಧ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಕಳೆದ ತಿಂಗಳು ರೇಡಿಯೋ ಕಾಲರ್ ಅಳವಡಿಸಿರುವ ಈ ಚಿರತೆಯು ರೈತರ ಜಮೀನುಗಳಿಗೆ ನುಗ್ಗಿ ದಾಳಿ ನಡೆಸಿ ಹತ್ತಕ್ಕೂ ಹೆಚ್ಚು ಮೇಕೆ ಮತ್ತು ಕೋಳಿಗಳನ್ನು ತಿಂದು ತೇಗಿತ್ತು. ಹಗಲಿನಲ್ಲಿಯೂ ಕೂಡ ಮೇಕೆ ಮೇಲೆ ದಾಳಿ ಮಾಡಿ ರೈತರಿಗೆ ಆತಂಕವನ್ನು ಉಂಟುಮಾಡಿತ್ತು.

ಹೀಗಾಗಿ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯು 5 ಫೈಬರ್ ಬೋನ್, 2 ತುಮಕೂರು ಕೇಜ್, 35 ಕ್ಯಾಮೆರಾ ಅಳವಡಿಸಿತ್ತು. 50ಕ್ಕೂ ಅಧಿಕ ಸಿಬ್ಬಂದಿ ಕಳೆದ 15 ದಿನಗಳಿಂದ ನಿರಂತರ ಕಾರ್ಯಾಚರಣೆ ಕೈಗೊಂಡಿದ್ದರು. ಚಿರತೆ ಕಾರ್ಯಪಡೆ ಕೂಡ ಸೆರೆ ಹಿಡಿಯಲು ಸತತವಾಗಿ ಶ್ರಮಿಸಿತ್ತು.

ಇದನ್ನೂ ಓದಿಮಶೀನ್ ಟೂಲ್ ವಲಯದ ಉತ್ಕರ್ಷಕ್ಕೆ ಒತ್ತು: ರಾಜ್ಯ ಸರ್ಕಾರದ ಮಹತ್ವದ ಸಭೆ

ಗುಂಡಾಲ್ ಜಲಾಶಯದ ಕೋಳಿ ಫಾರಂ ಹಿಂಭಾಗದ ಜಮೀನಿನಲ್ಲಿ ಇಡಲಾಗಿದ್ದ ಬೋನಿಗೆ ಚಿರತೆ ಬಿದ್ದಿದೆ. ಮೈಸೂರಿನ ಚಿರತೆ ಕಾರ್ಯಪಡೆಯ ವಶಕ್ಕೆ ಚಿರತೆಯನ್ನು ನೀಡಲಾಗಿದೆ. ಇದರಿಂದ ರೈತರ ಆತ‌ಂಕವೂ ದೂರವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News