ಅರಣ್ಯ ಅಧಿಕಾರಿಗಳ ದಬ್ಬಾಳಿಕೆ: ಸರ್ಕಾರದ ವಿರುದ್ಧ ಬಿಲ್ಲು-ಬಾಣದ ಹೋರಾಟದ ಎಚ್ಚರಿಕೆ ನೀಡಿದ ಕಾಡಿನ ಮಕ್ಕಳು

ಅರಣ್ಯ ಇಲಾಖೆ ಅಧಿಕಾರಿಗಳು ಸೌಜನ್ಯಕ್ಕೂ ಒಂದು ನೋಟೀಸ್ ನೀಡಿಲ್ಲ. ಇದ್ಯಾವ ಸೀಮೆ ಸರ್ಕಾರ. ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ. ಬಿಲ್ಲು-ಬಾಣ ಮತ್ತೆ ಹೊರಬಂದ್ರೆ ಸಂಘರ್ಷಕ್ಕೆ ನೀವೇ ಕಾರಣರಾಗ್ತೀರಾ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ ಕಾಡಿನ ಮಕ್ಕಳು. 

Written by - Yashaswini V | Last Updated : Oct 13, 2023, 12:01 PM IST
  • ರಾಜ್ಯದಲ್ಲಿರುವ 22% ಇರುವ ಅರಣ್ಯವನ್ನ 33% ಮಾಡಬೇಕೆಂದು ಹೊರಟಿರೋ ಸರ್ಕಾರದ ವಿರುದ್ಧ ಆದಿವಾಸಿಗಳು ಸಿಡಿದೆದ್ದಿದ್ದಾರೆ.
  • ನಾವು ಕಾಡಿನ ಮಕ್ಕಳು. ಕಾಡು ಉಳಿಸದವರು ನಾವೇ. ಅರಣ್ಯ ಅಧಿಕಾರಿಗಳಲ್ಲ.
  • ಕಾಡುಪ್ರಾಣಿ-ಮಾನವ ಸಂಘರ್ಷಕ್ಕೆ ಅರಣ್ಯ ಅಧಿಕಾರಿಗಳೇ ಕಾರಣ.
ಅರಣ್ಯ ಅಧಿಕಾರಿಗಳ ದಬ್ಬಾಳಿಕೆ:  ಸರ್ಕಾರದ ವಿರುದ್ಧ ಬಿಲ್ಲು-ಬಾಣದ ಹೋರಾಟದ ಎಚ್ಚರಿಕೆ ನೀಡಿದ ಕಾಡಿನ ಮಕ್ಕಳು  title=

ಕಾಫಿನಾಡ ಮಲೆನಾಡು ಭಾಗದ ಹರಿಜನ-ಗಿರಿಜನ ಸರ್ಕಾರದ ವಿರುದ್ಧ ಬಿಲ್ಲು-ಬಾಣದ ಹೋರಾಟಕ್ಕೆ ಸಜ್ಜಾಗಿದ್ದಾರೆ. ಶ್ರೀಮಂತರನ್ನ ಬಿಟ್ಟು ಬಡವರ ಮೇಲೆ ದಬ್ಬಾಳಿಕೆ ಮಾಡ್ತಿರೋ ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶಿತರಾಗಿರೋ ಕಾಡಿನ ಮಕ್ಕಳು ನಾವು ಕೈಕಟ್ಟಿ ಕೂತಿಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ. ಮಾನ-ಮರ್ಯಾದೆ ಇಲ್ಲದ ಸರ್ಕಾರದ ಆದೇಶಕ್ಕೆ ನಮ್ಮ ಧಿಕ್ಕಾರ ಎಂದು ಕಿಡಿಕಾರಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸೌಜನ್ಯಕ್ಕೂ ಒಂದು ನೋಟೀಸ್ ನೀಡಿಲ್ಲ. ಇದ್ಯಾವ ಸೀಮೆ ಸರ್ಕಾರ. ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ. ಬಿಲ್ಲು-ಬಾಣ ಮತ್ತೆ ಹೊರಬಂದ್ರೆ ಸಂಘರ್ಷಕ್ಕೆ ನೀವೇ ಕಾರಣರಾಗ್ತೀರಾ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕಾರಣ ಏನ್ ಗೊತ್ತಾ..... ಈ ಸ್ಟೋರಿ ನೋಡಿ...... 

ಹೌದು.... ಸರ್ಕಾರದ ನಡೆ ವಿರುದ್ಧ ಕಿಡಿಕಾರಿರೋ ಚಿಕ್ಕಮಗಳೂರು ಜಿಲ್ಲೆ ಮಲೆನಾಡು ತಾಲೂಕಿನ ಹರಿಜನ-ಗಿರಿಜನ ಹಾಗೂ ಕಾಡಿನ ಮಕ್ಕಳು ಸರ್ಕಾರದ ವಿರುದ್ಧ ಬಿಲ್ಲು-ಬಾಣದ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಯಾಕಂದ್ರೆ, ಅರಣ್ಯ ಅಧಿಕಾರಿಗಲು ಉತ್ತರ ಕುಮಾರನ ಪೌರುಷ ಒಲೆ ಮುಂದೆ ಅನ್ನಂಗೆ ಅರಣ್ಯ ಅಧಿಕಾರಿಗಳು ಮಲೆನಾಡಲ್ಲಿ ಬದುಕಿಗಾಗಿ ಬಡಜನರು ಮಾಡಿದ ಒಂದು-ಎರಡು ಎಕರೆ ಒತ್ತುವರಿ ಭೂಮಿಯನ್ನ ತೆರವಿಗೆ ಮುಂದಾಗಿದ್ದಾರೆ. ಆದ್ರೆ, ಯಾವುದೇ ಒತ್ತುವರಿ ಭೂಮಿಯನ್ನ ತೆರವು ಮಾಡಬೇಕಾದ್ರೆ 90 ದಿನಗಳ ಮುಂಚೆ ನೋಟೀಸ್ ನಿಡೋದು ಸರ್ಕಾರದ ಕಾನೂನು. ಆದಾಗ್ಯೂ, ಕಾಫಿನಾಡ ಅರಣ್ಯ ಅಧಿಕಾರಿಗಳು ಹಕ್ಕುಪತ್ರ ಇರುವ ಭೂಮಿಗೂ ಯಾವುದೇ ನೋಟೀಸ್ ನೀಡದೆ, ಏಕಾಏಕಿ ರೌಡಿ-ಗೂಂಡಾಗಳಂತೆ ಬಂದು ಹೇಳದೆ-ಕೇಳದೆ ಖುಲ್ಲಾ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದರ ವಿರುದ್ಧ ಆಕ್ರೋಶ ಹೊರಹಾಕಿರುವ ಜನರು ಈ ಆದೇಶ ಮಾಡಿದ್ದು ಯಾರು? ಈ ಸರ್ಕಾರಕ್ಕೆ ಮಾನ-ಮರ್ಯದೆ ಇದ್ಯಾ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 

ಮಲೆನಾಡು ಭಾಗದಲ್ಲಿ ರಾಜಕಾರಣಿಗಳೇ ನೂರಾರು ಎಕರೆ ಒತ್ತುವರಿ ಮಾಡಿ, ಬಿಲ್ಡಿಂಗ್ ಕಟ್ಟಿದ್ದಾರೆ. ನಿಮಗೆ ತಾಕತ್ ಇದ್ದರೆ ಅಂತವರ ಒತ್ತುವರಿಯನ್ನ ತೆರವು ಮಾಡಿ ಕಾಡನ್ನ ಉಳಿಸಿ-ಬೆಳೆಸಿ. ಬದುಕಿಗಾಗಿ ಒಂದು-ಎರಡು ಒತ್ತುವರಿ ಮಾಡಿರೋ ಬಡವರ ಮೇಲಲ್ಲ ನಿಮ್ಮ ಬ್ರಹ್ಮಾಸ್ತ ಎಂದು ಆಕ್ರೋಶ ಹೊರಹಾಕಿದ್ದಾರೆ. ಹಕ್ಕುಪತ್ರ ಇದ್ರೆ ಖುಲ್ಲಾ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶವಿದೆ. ನೀವು ಅದನ್ನೂ ಉಲ್ಲಂಘನೆ ಮಾಡ್ತಿದ್ದೀರಾ. ನಮ್ಮ ತಾಳ್ಮೆ ಪರೀಕ್ಷೆ ಮಾಡ್ಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. 

ಇದನ್ನೂ ಓದಿ- ಕಚೇರಿಯಲ್ಲಿ ಕುಡಿದು ಕುಣಿದು ಕುಪ್ಪಳಿಸಿದ ಸಿಬ್ಭಂದಿ

ರಾಜ್ಯದಲ್ಲಿರುವ 22% ಇರುವ ಅರಣ್ಯವನ್ನ 33% ಮಾಡಬೇಕೆಂದು ಹೊರಟಿರೋ ಸರ್ಕಾರದ ವಿರುದ್ಧ ಆದಿವಾಸಿಗಳು ಸಿಡಿದೆದ್ದಿದ್ದಾರೆ. ನಾವು ಕಾಡಿನ ಮಕ್ಕಳು. ಕಾಡು ಉಳಿಸದವರು ನಾವೇ. ಅರಣ್ಯ ಅಧಿಕಾರಿಗಳಲ್ಲ. ಕಾಡುಪ್ರಾಣಿ-ಮಾನವ ಸಂಘರ್ಷಕ್ಕೆ ಅರಣ್ಯ ಅಧಿಕಾರಿಗಳೇ ಕಾರಣ. ಅವರು ಬೆಳೆಸೋದು ಕೃತಕ ಅರಣ್ಯ. ಅವರ ಅರಣ್ಯದಿಂದ ಒಂದು ಪಕ್ಷಿ ಕೂಡ ಬದುಕಲ್ಲ. ಆದರೆ, ಅರಣ್ಯವನ್ನ ಉಳಿಸಿ-ಬೆಳೆಸಿದ ಕಾಡಿನ ಮಕ್ಕಳನ್ನೇ ಕಾಡಿನಿಂದ ಹೊರಗಟ್ಟುವ ಹುನ್ನಾರ ನಡೆಸಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 

ಸರ್ಕಾರ ಹರಿಜನ-ಗಿರಿಜನ-ಕಾಡಿನಮಕ್ಕಳನ್ನ ಕಾಡಿನಿಂದ ಹೊರಗಟ್ಟಿದರೆ ಜಿಲೆಯಲ್ಲಿ ಕನಿಷ್ಠ ಪಕ್ಷ 15-20 ಸಾವಿರ ಜನ ಬೀದಿಗೆ ಬೀಳ್ತಾರೆ. ಅವರೆಲ್ಲಾ ಎಲ್ಲಿ ಹೋಗಬೇಕು. ಏಕಾಏಕಿ ರೌಡಿಗಳಂತೆ ಬಂದು ವರ್ಷಗಟ್ಟಲೇ ಬೆಳೆದ ಗಿಡಗಳನ್ನ ಕಡಿದು ಹಾಕುವ ಅಧಿಕಾರಿಗಳು ನಾವು ಎಲ್ಲಿಗೆ ಹೋಗಬೇಕು ಎಂದು ಕೇಳಿದರೆ ಅವರ ಬಳಿ ಉತ್ತರವಿಲ್ಲ. ಪುನರ್ವಸತಿಯನ್ನೂ ಕಲ್ಪಿಸಿಲ್ಲ. ಸುಮ್ಮನೆ ಹಕ್ಕುಪತ್ರ-ದಾಖಲೆ ಇರುವ ಜಮೀನುಗಳನ್ನೂ ಖುಲ್ಲಾ ಮಾಡುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಬಿಲ್ಲು-ಬಾಣ ಹೊರಬರುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. 

ಇದನ್ನೂ ಓದಿ- ರಾಜ್ಯದಲ್ಲಿ ನೀರಿನ ವಿವಾದ, ರೈತರು ಸಂಕಷ್ಟದಲ್ಲಿದ್ದಾರೆ

ಒಟ್ಟಾರೆ, ಸರ್ಕಾರ ಅರಣ್ಯ ಪ್ರದೇಶವನ್ನ ಹೆಚ್ಚು ಮಾಡಬೇಕು ಅನ್ನೋದು ಸಂತೋಷ. ಹಾಗಂತ, ಸಾವಿರಾರು ಜನರನ್ನ ಬೀದಿಗೆ ತಂದರೆ ಅವರು ಎಲ್ಲಿಗೆ ಹೋಗಬೇಕು. ಸರ್ಕಾರ ಒತ್ತುವರಿ ಮಾಡಲೇಬೇಕು ಅನ್ನೋದಾದ್ರೆ ಮಲೆನಾಡಲ್ಲಿ 11 ಲಕ್ಷ ಹೆಕ್ಟೇರ್ ಒತ್ತುವರಿಯಾಗಿದೆ ಎಂಬ ಮಾತಿದೆ. ಅದರಲ್ಲಿ ಸಿಂಹಪಾಲು ರಾಜಕಾರಣಿಗಳದ್ದೇ. ಒಬ್ಬೊಬ್ಬರದ್ದು ನೂರು-ಇನ್ನೂರು ಅಲ್ಲ. ಸಾವಿರ-ಸಾವಿರ ಎಕರೆ ಒತ್ತುವರಿ ಇದೆ. ಅಧಿಕಾರಿಗಲು ಒತ್ತುವರಿ ತೆರವು ಮಾಡಿ ಸರ್ಕಾರ ಆದೇಶ ಪಾಲನೆ ಮಾಡ್ತೀವಿ ಅಂದ್ರೆ ಶ್ರೀಮಂತರು-ರಾಜಕಾರಣಿಗಳು ಮಾಡಿರೋ ಸಾವಿರಾರು ಎಕರೆ ಒತ್ತುವರಿಯನ್ನೂ ತೆರವು ಮಾಡಲಿ. ಸರ್ಕಾರ ಅಧಿಕಾರ ಇದೆ ಎಂದು ಬದುಕಿಗಾಗಿ ಒಂದು-ಎರಡು ಎಕರೆ ಒತ್ತುವರಿ ಮಾಡಿದ ಬಡವರ ಮೇಲೆ ದಬ್ಬಾಳಿಕೆ ಮಾಡೋದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಸ್ಥಳೀಯರು ತಮ್ಮ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News