ಪಿಂಚಣಿದಾರರಿಗೆ ಮನೆಬಾಗಿಲಿಗೆ ಸಿಗಲಿದೆ ಡಿಜಿಟಲ್ ಇ-ಜೀವಂತ ಪ್ರಮಾಣ ಪತ್ರ...!

ಪಿಂಚಣಿದಾರರು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಪ್ರಮಾಣಿಕರಿಸಿ ನೀಡಲಾಗುವ “ಜೀವಂತ ಪ್ರಮಾಣ ಪತ್ರ' ನೀಡುವ ಸೇವೆಯನ್ನು ರಾಜ್ಯ ಸರ್ಕಾರ ಸರಳೀಕರಿಸಿ ಎಲ್ಲರಿಗೂ ಸುಗಮವಾದ ವ್ಯವಹಾರವನ್ನು ನಡೆಸಲು ಅನುಕೂಲ ಕಲ್ಪಿಸಿದೆ ಎಂದು ಖಜಾನೆ ಇಲಾಖೆ ಅಪರ ನಿರ್ದೇಶಕಿ ಡಾ.ಭಾಗ್ಯಲಕ್ಷ್ಮಿ ತಿಳಿಸಿದ್ದಾರೆ.

Written by - Zee Kannada News Desk | Last Updated : Dec 24, 2022, 07:41 PM IST
  • ಪಿಂಚಣಿದಾರರು ಈ ಸೇವೆಯನ್ನು ನಿಗದಿತ 70 ರೂ.ಶುಲ್ಕ ಪಾವತಿಸಬೇಕಾಗುತ್ತದೆ.
  • ಈ ಪ್ರಕ್ರಿಯೆ ಪ್ರತಿವರ್ಷದ ನವೆಂಬರ್- ಡಿಸಂಬರ್ ತಿಂಗಳುಗಳಲ್ಲಿ ದಾಖಲೀಕರಣಗೊಳ್ಳುತ್ತದೆ.
  • ಪಿಂಚಣಿದಾರರಿಗೆ ಜೀವಂತ ಪ್ರಮಾಣ ಪತ್ರವನ್ನು ಸಲ್ಲಿಸಲು ಹತ್ತಿರದ ಅಂಚೆ ಕಛೇರಿಯನ್ನು ಸಂಪರ್ಕಿಸಬಹುದು.
ಪಿಂಚಣಿದಾರರಿಗೆ ಮನೆಬಾಗಿಲಿಗೆ ಸಿಗಲಿದೆ ಡಿಜಿಟಲ್ ಇ-ಜೀವಂತ ಪ್ರಮಾಣ ಪತ್ರ...! title=
file photo

ಕೊಪ್ಪಳ: ಪಿಂಚಣಿದಾರರು ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಪ್ರಮಾಣಿಕರಿಸಿ ನೀಡಲಾಗುವ “ಜೀವಂತ ಪ್ರಮಾಣ ಪತ್ರ' ನೀಡುವ ಸೇವೆಯನ್ನು ರಾಜ್ಯ ಸರ್ಕಾರ ಸರಳೀಕರಿಸಿ ಎಲ್ಲರಿಗೂ ಸುಗಮವಾದ ವ್ಯವಹಾರವನ್ನು ನಡೆಸಲು ಅನುಕೂಲ ಕಲ್ಪಿಸಿದೆ ಎಂದು ಖಜಾನೆ ಇಲಾಖೆ ಅಪರ ನಿರ್ದೇಶಕಿ ಡಾ.ಭಾಗ್ಯಲಕ್ಷ್ಮಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಖಜಾನೆ ಇಲಾಖೆ ಮತ್ತು ಭಾರತೀಯ ಅಂಚೆ ಇಲಾಖೆಯ ನಡುವೆ ಆಗಿರುವ ಒಪ್ಪಂದದಂತೆ ಜೀವಂತ ಪ್ರಮಾಣ ಪತ್ರವನ್ನು "ಇ ವಿದ್ಯುನ್ಮಾನ" ಆಡಳಿತ ಅಡಿಯಲ್ಲಿ ಕೇಂದ್ರೀಕೃತ ವ್ಯವಸ್ಥೆಯ ಮೂಲಕ 'ಪಿಂಚಣಿದಾರರಿಗೆ ಮನೆ ಬಾಗಿಲಿಗೆ ಸೇವೆ" ಒದಗಿಸಲು ಕ್ರಮವಹಿಸಲಾಗಿದೆ.

ರಾಜ್ಯದಲ್ಲಿ 5ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿದ್ದು, ಪ್ರತಿ ವರ್ಷ ನವಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಜೀವಂತ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.ಇನ್ನು ಮುಂದೆ ಜೀವಂತ ಪ್ರಮಾಣ ಪತ್ರಗಳನ್ನು ಡಿಜಿಟಲ್ ಆಗಿ (ಡಿಜಿಟಲ್ ಜೀವಂತ ಪ್ರಮಾಣ ಪತ್ರ) ಸಲ್ಲಿಸುವ ವ್ಯವಸ್ಥೆಯನ್ನು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಒದಗಿಸುತ್ತದೆ. ರಾಜ್ಯ ಸರ್ಕಾರದ ಪಿಂಚಣಿದಾರರಿಗೆ ಈ ಸೇವೆ ವಿಸ್ತರಿಸಲು ಖಜಾನೆ ಇಲಾಖೆ ಮತ್ತು ಭಾರತೀಯ ಅಂಚೆ ಇಲಾಖೆ ಸಹಯೋಗಯೊಂದಿಗೆ ಈ ಸೌಲಭ್ಯವನ್ನು ಒದಗಿಸಲು ಉದ್ದೇಶಿಸಲಾಗಿದೆ.

ಇದನ್ನೂ ಓದಿ : ನಕಲಿ ಭೂ ದಾಖಲೆ ಸೃಷ್ಟಿಸಿ ವಂಚನೆಗೆ ಯತ್ನ: ಬಿಬಿಎಂಪಿ ಕಚೇರಿ ಸಿಬ್ಬಂದಿ ಸಹಿತ ಐವರ ಬಂಧನ!

ಇ-ಜೀವಂತ ಪ್ರಮಾಣ ಪತ್ರ ಪಡೆಯಲು ಪಿಂಚಣಿದಾರರು ತಮ್ಮ ಹೆಸರು, ಪಿಪಿಓ ಸಂಖ್ಯೆ, ಬ್ಯಾಂಕು ಖಾತೆಯ ವಿವರ, ವಿಳಾಸ, ಪಿನ್ ಕೋಡ್ ಆಧಾರ್ ಸಂಖ್ಯೆ, ಮೊಬೈಲು ಸಂಖ್ಯೆಯ ವಿವರಗಳನ್ನು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿಗೆ ಒದಗಿಸಬೇಕು. ಜೀವನ್ ಪ್ರಮಾಣ್ ಪೋರ್ಟಲ್ ಮೂಲಕ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್' ತಂತ್ರಾಂಶದಲ್ಲಿ ಮೇಲ್ಕಂಡ ವಿವರಗಳನ್ನು ಒದಗಿಸಿದ ನಂತರ ಕಾಗದ ರಹಿತ ಟಿಜಿಟಲ್ ಜೀವಂತ ಪ್ರಮಾಣ ಪತ್ರವನ್ನು ಸೃಜನೆತಾಗುತ್ತದೆ. ಇ-ಜೀವನ್ ಪ್ರಮಾಣ ಐಡಿಯನ್ನು ಪಿಂಚಣಿದಾರರಿಗೆ ಎಸ್.ಎಮ್.ಎಸ್. ಮೂಲಕ ಕಳುಹಿಸಲಾಗುವುದು, ಈ ಅಧಿಕೃತ ಸಂಖ್ಯೆಯ ನೆರವಿನಿಂದ ಪಿಂಚಣಿದಾರರು ತಮ್ಮ ಜೀವಂತ ಪ್ರಮಾಣ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

ಪಿಂಚಣಿದಾರರ ಮನೆ ಬಾಗಿಲಿಗೆ ಬಂದು, ಬಯೋಮೆಟ್ರಿಕ್ ಉಪಕರಣದ ಮೂಲಕ ವಿವರಗಳನ್ನು ಪಡೆದುಕೊಂಡು, ಇ-ಜೀವಂತ ಪ್ರಮಾಣ ಪತ್ರವನ್ನು ಗ್ರಾಮೀಣ ಅಂಚೆ ಸೇವಕರು ನೀಡುವರು. ಪಿಂಚಣಿದಾರರು ತಮ್ಮ ಜೀವಂತ ಪ್ರಮಾಣ ಪತ್ರ ಸಲ್ಲಿಸಲು ಯಾವುದೇ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿರುವುದಿಲ್ಲ. ಪಿಂಚಣಿಯನ್ನು ಪಾವತಿಸುವ ಬ್ಯಾಂಕು ಶಾಖೆಗಳಿಗೆ ವಿದ್ಯುನ್ಮಾನ ತಂತ್ರಾಂಶದ ಮೂಲಕ ನೇರವಾಗಿ ತಮ್ಮ ಜೀವಂತ ಪ್ರಮಾಣ ಪತ್ರಗಳನ್ನು ರವಾನಿಸಬಹುದು.

ಪಿಂಚಣಿದಾರರು ಈ ಸೇವೆಯನ್ನು ನಿಗದಿತ 70 ರೂ.ಶುಲ್ಕ ಪಾವತಿಸಬೇಕಾಗುತ್ತದೆ. ಈ ಪ್ರಕ್ರಿಯೆ ಪ್ರತಿವರ್ಷದ ನವೆಂಬರ್- ಡಿಸಂಬರ್ ತಿಂಗಳುಗಳಲ್ಲಿ ದಾಖಲೀಕರಣಗೊಳ್ಳುತ್ತದೆ. ಪಿಂಚಣಿದಾರರಿಗೆ ಜೀವಂತ ಪ್ರಮಾಣ ಪತ್ರವನ್ನು ಸಲ್ಲಿಸಲು ಹತ್ತಿರದ ಅಂಚೆ ಕಛೇರಿ ಅಥವಾ ಪೋಸ್ಟ್ಮ್ಯಾನ್ ಅವರನ್ನು ಸಂಪರ್ಕಿಸಬಹುದು.

ಇದನ್ನೂ ಓದಿ : Basavaraja Bommai : ಫೆಬ್ರವರಿ ತಿಂಗಳಲ್ಲಿ ರಾಜ್ಯ ಸರ್ಕಾರದ ಬಜೆಟ್ : ಸಿಎಂ ಬೊಮ್ಮಾಯಿ

ಪಿಂಚಣಿಯನ್ನು ಪಾವತಿಸುವ ನಾಲ್ಕು ಪ್ರಮುಖ ಬ್ಯಾಂಕುಗಳಾದ (Central Pension Processing Centres), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕುಗಳಲ್ಲಿ ಲಭ್ಯವಿರುವ ತಂತ್ರಾಂಶಗಳ ಮೂಲಕ ನೇರವಾಗಿ ಜೀವಂತ ಪ್ರಮಾಣ ಪತ್ರವನ್ನು ಸಲ್ಲಿಸುವ ಸೌಲಭ್ಯ ಮುಂದುವರೆಯಲಿವೆ.

ಕಂಪ್ಯೂಟರ್ ತಂತ್ರಾಂಶ ಮತ್ತು ಮೊಬೈಲ್ ಬಳಕೆ ಮಾಡಲು ಸಾಧ್ಯವಿಲ್ಲದ ಸಾಮಾನ್ಯ ಪಿಂಚಣಿದಾರರಿಗೂ ಕೂಡ ಅಂಚೆ ಕಚೇರಿಯ ಮೂಲಕ ಜೀವಂತ ಪ್ರಮಾಣಪತ್ರವನ್ನು ಒದಗಿಸಲು ಸರ್ಕಾರ ಮನೆ ಬಾಗಿಲಿಗೆ ಸೇವೆಯ ಅವಕಾಶ ಕಲ್ಪಿಸಿದೆ.

ಹೆಚ್ಚಿನ ಮಾಹಿತಿಗಾಗಿ: ರಾಜ್ಯ ಪಿಂಚಣಿ ಪಾವತಿ ಮತ್ತು ನಿರ್ವಹಣಾ ಖಜಾನೆ Ford Hood, 080-22215073/ 22132031 ಇ-ಮೇಲ್: adsppmt@karnataka.gov.in ಅಥವಾ ಅಂಚೆ ಕಚೇರಿಯ ದೂರವಾಣಿ ಸಂಖ್ಯೆ : 080-25597799 ಸಂಪರ್ಕಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News