ಶಿವಮೊಗ್ಗ: ರಾಜ್ಯ ರಾಜಕೀಯದ ಶಕ್ತಿಕೇಂದ್ರವಾಗಿದ್ದ ಶಿವಮೊಗ್ಗ ಜಿಲ್ಲೆ ಈಗ ರಾಜಕೀಯವಾಗಿ ಅನಾಥವಾದಂತ ಸ್ಥಿತಿಗೆ ಬಂದು ತಲುಪಿದೆ. ರಾಜ್ಯಕ್ಕೆ ನಾಲ್ಕು ಮುಖ್ಯಮಂತ್ರಿಗಳನ್ನು ನೀಡಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಭವಿಷ್ಯದಲ್ಲಿ ಮಾಸ್ ಲೀಡರ್ ಗಳ ಕೊರತೆ ಎದ್ದು ಕಾಣುತ್ತಿದೆ.
ರಾಜ್ಯದ ಮಾಸ್ ಲೀಡರ್ ಗಳೆಂದೇ ಖ್ಯಾತಿ ಪಡೆದಿದ್ದ ಶಿವಮೊಗ್ಗ ಜಿಲ್ಲೆಯ ಸಾರೆಕೊಪ್ಪ ಬಂಗಾರಪ್ಪ ಹಾಗೂ ಬಿ.ಎಸ್ .ಯಡಿಯೂರಪ್ಪರ ನಂತರ ಜಿಲ್ಲೆಯಲ್ಲಿ ಅಂತ ಒಬ್ಬ ನಾಯಕ ಉದಯವಾಗಲು ಸಾಧ್ಯವಾಗಲಿಲ್ಲ. ಈಗ ಕಾಂಗ್ರೇಸ್ ಬಿಜೆಪಿ ಪಕ್ಷಗಳಲ್ಲಿ ಪ್ರಭಾವಿ ಹಿರಿಯ ನಾಯಕರುಗಳೇ ರಾಜಕೀಯ ನಿವೃತ್ತಿ ಘೋಷಿಸಿದ ನಂತರ ಜಿಲ್ಲೆ ಬಡವಾದಂತೆ ಭಾಸವಾಗುತ್ತಿದೆ.
ಸೊರಬದ ಕುಬಟೂರಿನಲ್ಲಿ ಕೂತು ರಾಜ್ಯ ರಾಜಕೀಯವನ್ನು ತಮ್ಮ ಮೂಗಿನ ನೇರಕ್ಕೆ ನಿಯಂತ್ರಿಸುತ್ತಿದ್ದ ಎಸ್ ಬಂಗಾರಪ್ಪ ಹಿಂದುಳಿದ ವರ್ಗಗಳ ಪ್ರಶ್ನಾತೀತ ನಾಯಕರಾಗಿದ್ದರು. ಹಲವು ಪಕ್ಷ ತೊರೆದು ಹಲವು ಪಕ್ಷ ಕಟ್ಟಿದರೂ ಕ್ಷೇತ್ರದ ಜನತೆ ಅವರನ್ನು ಕಿಂದರಜೋಗಿಯಂತೆ ಫಾಲೋ ಮಾಡುತ್ತಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸಿ ಕ್ಷೇತ್ರ ತೊರೆದು ರಾಜ್ಯಾದ್ಯಂತ ಪ್ರವಾಸ ಕೈಗೊಂಡಾಗಲೂ ಜನತೆ ಬಂಗಾರಪ್ಪರ ಕೈ ಹಿಡಿದಿದ್ದರು. ಮುಂದೆ ಬಂಗಾರಪ್ಪ ರಾಜ್ಯದ ಮುಖ್ಯಮಂತ್ರಿಯಾದರು. ರಾಜ್ಯಾದ್ಯಂತ ಮನೆ ಮಾತಾಗಿದ್ದ ಬಂಗಾರಪ್ಪ ಶಿವಮೊಗ್ಗದ ಹೆಮ್ಮೆಯಾಗಿದ್ದರು.
ಎಸ್ ಬಂಗಾರಪ್ಪ ಅವರ ನಂತರದಲ್ಲಿ ಮಂಚೂಣಿಗೆ ಬಂದು ನಿಂತವರು ಬಿ.ಎಸ್.ಯಡಿಯೂರಪ್ಪ. ಹಲವು ಹೋರಾಟ, ಪ್ರತಿಭಟನೆಗಳಿಂದ ರಾಜಕೀಯ ಉತ್ತುಂಗಕ್ಕೇರಿಂದ ಯಡಿಯೂರಪ್ಪ ಲಿಂಗಾಯಿತ ಸಮುದಾಯದ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿದರು. ನಾಲ್ಕು ಬಾರಿ ಮುಖ್ಯಮಂತ್ರಿಯಾದ ಬಿ.ಎಸ್.ಯಡಿಯೂರಪ್ಪ ಅವರು ಶಿವಮೊಗ್ಗಕ್ಕೆ ಕಿರೀಟ ಪ್ರಾಯರಾಗಿದ್ದರು. ರಾಜಕೀಯ ವಿಷಯಗಳು ಜನಮಾನಸದಲ್ಲಿ ಮುನ್ನಲೆಗೆ ಬಂದಾಗಲೆಲ್ಲಾ ಜಿಲ್ಲೆಯ ರಾಜಕೀಯ ನಾಯಕರಲ್ಲಿ ಪ್ರಥಮರಾಗಿ ಪ್ರಸ್ಥಾಪವಾಗುತ್ತಿದ್ದರು. ನೀವು ಶಿವಮೊಗ್ಗದವರಾ.. ಹಾಗಾದ್ರೆ ಬಂಗಾರಪ್ಪ ಯಡಿಯೂರಪ್ಪ ಜಿಲ್ಲೆಯವರು ಎಂದು ಜನರು ಉಬ್ಬೇರುವಂತೆ ಮಾಡುತ್ತಿದ್ರು.
ಎಸ್. ಬಂಗಾರಪ್ಪ ಯಡಿಯೂರಪ್ಪ, ಡಿ.ಹೆಚ್ ಶಂಕರಮೂರ್ತಿ, ಕಾಗೋಡು ತಿಮ್ಮಪ್ಪ ಹೆಸರುಗಳು ಚರ್ಚೆಗಳಾಗುತ್ತಿದ್ದವು. ಡಿ.ಹೆಚ್ ಶಂಕರಮೂರ್ತಿ ಸಭಾಪಾತಿಯಾಗಿದ್ದಾಗ ಜಿಲ್ಲೆಗೆ ಹೆಮ್ಮೆಯಾಗಿದ್ದರು. ಅವರು ರಾಜಕೀಯ ನಿವೃತ್ತಿ ಘೋಷಣೆ ನಂತರ ಬಿಜೆಪಿಯಿಂದ ಕೆ.ಎಸ್ ಈಶ್ವರಪ್ಪ, ಬಿ.ಎಸ್.ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದರು. ಕಾಂಗ್ರೇಸ್ ನಿಂದ ಕಾಗೋಡು ತಿಮ್ಮಪ್ಪರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ವಿಧಾನಸೌಧ ಪಡೆಸಾಲೆಯಲ್ಲಿ ಇರಬೇಕಾದ ನಾಯಕರುಗಳೆಲ್ಲಾ ಈಗ ನಿವೃತ್ತಿ ಘೋಷಿಸಿರುವುದರಿಂದ ಜಿಲ್ಲೆಯಲ್ಲಿ ಶೂನ್ಯ ಆವರಿಸಿದಂತಾಗಿದೆ.
ಇದನ್ನೂ ಓದಿ- Karnataka Election Results 2023: ಕರ್ನಾಟಕ ಚುನಾವಣೆ ಮೇಲೆ BSY ಮೊದಲ ಪ್ರತಿಕ್ರಿಯೆ, ಹೇಳಿದ್ದೇನು?
ಪ್ರಸ್ತುತ ಜಿಲ್ಲೆಯಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷದಿಂದ ಮುನ್ನಲೆಯಲ್ಲಿರುವುದು ಆರಗಾ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಬೇಳೂರು ಗೋಪಾಲಕೃಷ್ಣ, ಮಧು ಬಂಗಾರಪ್ಪ, ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಬಿ.ವೈ ವಿಜಯೇಂದ್ರ ಬಿ.ವೈ ರಾಘವೇಂದ್ರ ಶಾರದ ಪೂರ್ಯನಾಯಕ್ ಸಂಗಮೇಶ್ ಹೆಸರುಗಳು ರಾಜ್ಯದ ಜನತೆಗೆ ಚಿರಪರಿಚಿತವಾಗಿದೆ. ಇವರುಗಳಲ್ಲಿ ಯಾರು ಜಿಲ್ಲೆಯನ್ನು ರಾಜಕೀಯವಾಗಿ ಶಕ್ತಿಯುತ ಮಾಡುತ್ತಾರೆ ಎಂಬುದು ಕುತೂಹಲವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ