'ವಿಧವೆ ಎಂದು ಸಂಸತ್ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕರೆಯಲಿಲ್ಲ' : ಸಾಹಿತಿ ಕುಂ.ವೀ 

ವಿಧವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಸತ್ ಉದ್ಘಾಟನೆಗೆ ಕರೆಯಲಿಲ್ಲ ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದ್ದಾರೆ.

Written by - Zee Kannada News Desk | Last Updated : Jun 8, 2023, 05:01 PM IST
  • ಕನ್ನಡ ಸಾಹಿತ್ಯ ಪ್ರಶ್ನಿಸುವ ಗುಣ ಹೊಂದಿದೆ, ನಮ್ಮಲ್ಲಿ ಎರಡು ರೀತಿಯ ಲೇಖಕರಿದ್ದಾರೆ
  • ಒಬ್ಬರು ಉಪದ್ರವಿ ಲೇಖಕರು ಮತ್ತೊಬ್ಬರು ನಿರುಪದ್ರವಿ ಲೇಖಕರು, ಸರ್ಕಾರವನ್ನು ಟೀಕಿಸುವರು
  • ಸರ್ಕಾರದ ತಪ್ಪನ್ನು ಪ್ರಶ್ನೆ ಮಾಡುವವರು ಉಪದ್ರವಿ ಸಾಹಿತಿಗಳು, ನಮಗೆ ಈಗ ಉಪದ್ರವಿ ಸಾಹಿತಿಗಳ ಅಗತ್ಯವಿದೆ,
'ವಿಧವೆ ಎಂದು ಸಂಸತ್ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕರೆಯಲಿಲ್ಲ' : ಸಾಹಿತಿ ಕುಂ.ವೀ  title=

ಚಾಮರಾಜನಗರ: ವಿಧವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಸತ್ ಉದ್ಘಾಟನೆಗೆ ಕರೆಯಲಿಲ್ಲ ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದ್ದಾರೆ.

ಚಾಮರಾಜನಗರದ ಡಾ.ರಾಜ್ ಕುಮಾರ್‌ ರಂಗಮಂದಿರದಲ್ಲಿ ಸಾಹಿತಿ ಕೆ.ಶ್ರೀದರ್ ಅವರ ಅವಳಿ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿ, ಸಂಸತ್ ಉದ್ಘಾಟನೆ ದೇಶದ ಶಕ್ತಿ ಕೇಂದ್ರ, ಅದನ್ನು ರಾಷ್ಟ್ರಪತಿಗಳು ಉದ್ಘಾಟಿಸಬೇಕಿತ್ತು. ಆದರೆ, ರಾಷ್ಟ್ರಪತಿ ಹಿಂದುಳಿದ ಜಾತಿಯವರಾದ್ದರಿಂದ, ಅವರು ವಿಧವೆಯಾದ್ದರಿಂದ ಶುಭ ಕಾರ್ಯಕ್ಕೆ ಅಮಂಗಲವೆಂದು ಅವರನ್ನು ಕಾರ್ಯಕ್ರಮದಿಂದ ಪ್ರಧಾನಿ ಹೊರಗಿಟ್ಟರು ಇದನ್ನು ಯಾರೂ ಪ್ರಶ್ನೆಯನ್ನೇ ಮಾಡಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Loksabha Election 2024: ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್ ತಪ್ಪಿದರೆ "ಕೈ" ಗಾಳ

ಕನ್ನಡ ಸಾಹಿತ್ಯ ಪ್ರಶ್ನಿಸುವ ಗುಣ ಹೊಂದಿದೆ, ನಮ್ಮಲ್ಲಿ ಎರಡು ರೀತಿಯ ಲೇಖಕರಿದ್ದಾರೆ, ಒಬ್ಬರು ಉಪದ್ರವಿ ಲೇಖಕರು ಮತ್ತೊಬ್ಬರು ನಿರುಪದ್ರವಿ ಲೇಖಕರು, ಸರ್ಕಾರವನ್ನು ಟೀಕಿಸುವರು, ಸರ್ಕಾರದ ತಪ್ಪನ್ನು ಪ್ರಶ್ನೆ ಮಾಡುವವರು ಉಪದ್ರವಿ ಸಾಹಿತಿಗಳು, ನಮಗೆ ಈಗ ಉಪದ್ರವಿ ಸಾಹಿತಿಗಳ ಅಗತ್ಯವಿದೆ, ಕೆಲವರು ಇರುತ್ತಾರೆ  500 ಕೊಟ್ಟರೆ ಇತ್ತ ಕಡೆ, ಜಾಸ್ತಿ ಕೊಟ್ಟರೇ ಅತ್ತ ಕಡೆ ಎಂಬತವರು, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಳಸಮುದಾಯದ ಲೇಖಕರು ಹೆಚ್ಚು ಬರಬೇಕು, ಅಂದ-ಚೆಂದದ ಭಾಷೆಯಲ್ಲಿ ಬರೆಯುವವರಿಗಿಂತ ದೇಸಿ ಸಾಹಿತಿಗಳು ಬರಬೇಕು, ಒಂದು ಗಾದೆ ಮಾತಿದೆ 8 ಹೋಳಿಗೆ ತಿನ್ನುವ ಬದಲು 1 ಎಲುಬು ಕಡಿ ಅಂತಾ ಆ ರೀತಿ ಎಲುಬು ಎಂದರೆ ತಳಸಮುದಾಯಯವರ ಕೃತಿ, ಹೋಳಿಗೆ ಎಂದರೆ ಪರಿಶುದ್ಧ ಭಾಷೆಯಲ್ಲಿ ಬರೆಯುವವರು ಎಂದರು.

ಬಿಜೆಪಿ ಸೋಲಿಸುವ ಮೂಲಕ ಸಾಮಾಜಿಕ ಮೌಲ್ಯ ಎತ್ತಿಹಿಡಿದ ಜನ

ಮೊನ್ನೆ ಚುನಾವಣೆಯಲ್ಲಿ ಯಾರನ್ನೂ ಸೋಲಿಸಬೇಕೆಂದು ಕೊಂಡಿದ್ದೆವೀ ಅವರು ಸೋತಿದ್ದಾರೆ, ಯಾರು ಗೆಲ್ಲಬೇಕಿತ್ತೋ ಅವರಿಗೆ 130ಕ್ಕೂ ಅಧಿಕ ಸ್ಥಾನ ಕೊಟ್ಟು ಜನರು ಗೆಲ್ಲಿಸಿದ್ದಾರೆ. ದೆಹಲಿಯಿಂದ ಬಂದರು, ನಟ-ನಟಿಯರನ್ನು ಕರೆತಂದರೂ ಜನರು ಯಾವುದೇ ಮೋಡಿಗೆ ಒಳಗಾಗಲಿಲ್ಲ ಎಂದು ಬಿಜೆಪಿ ವಿರುದ್ಧ ವ್ಯಂಗ್ಯ ಮಾಡಿದರು.

ಹಣ ಪಡೆದ ಜನರು ಮೋಸ ಮಾಡಿದರು ಎಂದು ಕೆಲವರು ಹೇಳುತ್ತಿದ್ದರು, ಅವರು ಅಧಿಕಾರ ಹಿಡಿದದ್ದೇ ಮೋಸದಿಂದ ಆದ್ದರಿಂದ ಜನರು ಅವರಿಗೆ ಮೋಸ ಮಾಡಲಿಲ್ಲ, ಸಾಮಾಜಿಕ ಮೌಲ್ಯ ತೋರಿದರು, ಗೆಲ್ಲಿಸುವ ಜನರಿಗೆ ಸೋಲಿಸುವುದು ಗೊತ್ತು ಎಂಬುದನ್ನು ಈ ಬಾರಿ ತೋರಿಸಿಕೊಟ್ಟರು ಎಂದು ಹೇಳಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News