PSI Exam 2024 Updates: ಮತ್ತೆ ಮುಂದೂಡಿಕೆ ಆಗುತ್ತಾ ಪಿಎಸ್‌ಐ ಪರೀಕ್ಷೆ..?

PSI Exam 2024 update: UPSC ಪರೀಕ್ಷೆ ನಡೆಯುತ್ತಿರುವ ದಿನವೇ PSI ಪರೀಕ್ಷೆ ನಿಗದಿಯಾಗಿರುವುದರಿಂದ ಪರೀಕ್ಷೆ ಮುಂದೂಡುವ ಅಥವಾ ದಿನಾಂಕ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Written by - Puttaraj K Alur | Last Updated : Aug 31, 2024, 06:50 PM IST
  • UPSC ಪರೀಕ್ಷೆ ದಿನವೇ PSI ಪರೀಕ್ಷೆ ನಿಗದಿ
  • ಮತ್ತೆ ಮುಂದೂಡಿಕೆ ಆಗುತ್ತಾ ಪಿಎಸ್‌ಐ ಪರೀಕ್ಷೆ..?
  • ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದೇನು..?
PSI Exam 2024 Updates: ಮತ್ತೆ ಮುಂದೂಡಿಕೆ ಆಗುತ್ತಾ ಪಿಎಸ್‌ಐ ಪರೀಕ್ಷೆ..? title=
ಮುಂದೂಡಿಕೆ ಆಗುತ್ತಾ ಪಿಎಸ್‌ಐ ಪರೀಕ್ಷೆ..?

PSI Exam: ಇದೇ ಸೆಪ್ಟೆಂಬರ್ 22 ರಂದು ನಡೆಸಲು ಉದ್ದೇಶಿಸಲಾಗಿರುವ 402 Civil PSI ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಮುಂದೂಡುವ ಸಾಧ್ಯತೆ ಇದೆ ಎಂದು ವರದಯಾಗಿದೆ. UPSC ಪರೀಕ್ಷೆ ನಡೆಯುತ್ತಿರುವ ದಿನವೇ PSI ಪರೀಕ್ಷೆ ನಿಗದಿಯಾಗಿರುವುದರಿಂದ ಪರೀಕ್ಷೆ ಮುಂದೂಡುವ ಅಥವಾ ದಿನಾಂಕ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Daily GK Quiz: ಪ್ರಪಂಚದಲ್ಲಿಯೇ ಅತಿ ಹೆಚ್ಚು ದ್ವೀಪಗಳನ್ನು ಹೊಂದಿರುವ ದೇಶ ಯಾವುದು?

ಈ ಬಗ್ಗೆ ಸ್ವತಃ ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಸೆ.22ರಂದು UPSC ಪರೀಕ್ಷೆ ನಡೆಯುತ್ತಿದ್ದು, ಅದೇ ದಿನವೇ PSI ನೇಮಕ ಪರೀಕ್ಷೆ ನಿಗದಿಯಾಗಿದೆ. ನಾವು UPSCಗಿಂತ ಮೊದಲೇ PSI ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದ್ದೇವೆ. ಮುಂದೂಡುವ ಬಗ್ಗೆ ಹೆಚ್ಚಿನ ಮನವಿಗಳು ಬಂದಿದ್ದರೆ ಪರಿಗಣಿಸಬಹುದು. ಈ ಬಗ್ಗೆ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Daily GK Quiz: ಪ್ರಪಂಚದಲ್ಲಿ ಅತಿಹೆಚ್ಚು ಮಾತನಾಡುವ ಭಾಷೆ ಯಾವುದು?

ಈಗಾಗಲೇ PSI ಹುದ್ದೆಗಳ ನೇಮಕ ವಿಳಂಬವಾಗಿದೆ. ಈ ಹಿಂದೆ ಗೃಹ ಸಚಿವನಾಗಿದ್ದಾಗ ಯಾವುದೇ ಅಡೆತಡೆಯಿಲ್ಲದೇ ಸಾವಿರಾರು ಹುದ್ದೆಗಳ ನೇಮಕ ಸುಲಭವಾಗಿ ನಡೆದಿದೆ. PSI ಹಗರಣದ ಬಳಿಕ ವಿಳಂಬವಾಗುತ್ತಿದೆ. ಫಲಿತಾಂಶ ಪ್ರಕಟಿಸಲು ಸಹ ಕೋರ್ಟ್‌ಗೆ ಹೋಗುತ್ತಿದ್ದಾರೆ. ಆದರೂ ಫಲಿತಾಂಶ ಪ್ರಕಟಿಸಲು ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News