ಬೆಂಗಳೂರು: ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇವರ ಮುತ್ತಾತ ಸನ್ಮಾನ್ಯ ದಿವಂಗತ ಜವಾಹರ ಲಾಲ್ ನೆಹರೂ ಅವರು ‘ನನ್ನನ್ನು ಕತ್ತೆ ಎಂದು ಬೇಕಾದರೂ ಕರೆಯಿರಿ. ಹಿಂದೂ ಎಂದು ಕರೆಯಬೇಡಿ’ ಎಂದಿದ್ದರು. ಆ ಡಿಎನ್ಎ ಪ್ರಭಾವವೂ ಇರಬಹುದು; ಅಥವಾ ಕನ್ವರ್ಷನ್ ಮಾಫಿಯದ ಕೈಗೊಂಬೆಯಾಗಿರುವ ಕಾರಣಕ್ಕೂ ಇರಬಹುದು. ವಿರೋಧ ಪಕ್ಷದ ನಾಯಕನಾಗಿ ಸಾಂವಿಧಾನಿಕ ಹುದ್ದೆಯಲ್ಲಿದ್ದು ಹಿಂದೂ ದ್ವೇಷವನ್ನು ತೋರಿಸಿದ್ದಾರೆ ಎಂದು ಟೀಕಿಸಿದರು.
1947ರಲ್ಲಿ ಭಾರತದ ವಿಭಜನೆಗೆ ಕಾರಣವಾದ ಸಿದ್ಧಾಂತ ಯಾವುದು? ಕೋಟ್ಯಂತರ ಜನರನ್ನು ನಿರ್ವಸಿತರನ್ನಾಗಿ ಮಾಡಿದ್ದು, ಲಕ್ಷಾಂತರ ಜನರ ಮಾರಣಹೋಮಕ್ಕೆ ಕಾರಣವಾದ ಸಿದ್ಧಾಂತ ಯಾವುದು? ತನ್ನ ರಾಜಕೀಯ ಲಾಭ, ಸ್ವಾರ್ಥಕ್ಕಾಗಿ ದೇಶ ವಿಭಜನೆಗೆ ಸಹಿ ಹಾಕಿದ ಪಾರ್ಟಿ ಯಾವುದು? ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆ ಬೆಳೆಯಲು ಪೂರಕ ವಾತಾವರಣ ಸೃಷ್ಟಿಸಿದ ಪಕ್ಷ ಯಾವುದು? ಅಲ್ಲಿನ ಮೂಲನಿವಾಸಿಗಳು ನಿರಾಶ್ರಿತರಾಗಲು ಕಾರಣರು ಯಾರು? ಪಂಜಾಬ್ನಲ್ಲಿ ಭಿಂದ್ರನ್ವಾಲೆಯನ್ನು ಬೆಳೆಸಿ, ಖಲಿಸ್ಥಾನ್ ಚಳವಳಿಗೆ ಶಕ್ತಿ ಕೊಟ್ಟ ವ್ಯಕ್ತಿ ಮತ್ತು ಪಕ್ಷ ಯಾವುದು? ದಕ್ಷಿಣದಲ್ಲಿ ಎಲ್ಟಿಟಿಇಯಂಥ ಭಯೋತ್ಪಾದಕ ಸಂಘಟನೆಗೆ ಶಕ್ತಿ ಕೊಟ್ಟು, ಅದನ್ನು ಬೆಳೆಸಿದ ಪಕ್ಷ ಯಾವುದು?- ಇದೆಲ್ಲದಕ್ಕೂ ಉತ್ತರ ಹುಡುಕಿದರೆ ಕಾಂಗ್ರೆಸ್ ಪಕ್ಷ, ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರು ಕಣ್ಮುಂದೆ ಬರುತ್ತಾರೆ. ಇವರೆಲ್ಲರೂ ನಿಮ್ಮ ಕಾಂಗ್ರೆಸ್ ಪಕ್ಷದವರು. ಇವರ್ಯಾರೂ ಆರೆಸ್ಸೆಸ್ನವರಲ್ಲ ಎಂದು ನುಡಿದರು.
ಇದನ್ನೂ ಓದಿ- Loan: ಯಾವ ರೀತಿಯ ಸಾಲಗಳು ಪ್ರಯೋಜನಕಾರಿ? ಯಾವುದು ಅಪಾಯಕಾರಿ
ಸರ್ವಾಧಿಕಾರದ ಕಾರಣಕ್ಕೆ ತುರ್ತು ಪರಿಸ್ಥಿತಿ..
1975ರಲ್ಲಿ ತುರ್ತು ಪರಿಸ್ಥಿತಿ ಹೇರಿ, 1.20 ಲಕ್ಷಕ್ಕೂ ಹೆಚ್ಚು ಜನರನ್ನು ಮೀಸಾ ಬಂಧಿಗಳನ್ನಾಗಿ ಮಾಡಿ, ಮೂರೂವರೆ ಸಾವಿರಕ್ಕೂ ಹೆಚ್ಚು ಪತ್ರಕರ್ತರನ್ನು ಮೀಸಾ ಬಂಧಿಗಳನ್ನಾಗಿ ಮಾಡಿ, ನಾಗರಿಕ ಹಕ್ಕುಗಳನ್ನು ದಮನ ಮಾಡಿ, ಸಂವಿಧಾನವನ್ನು ಬುಡಮೇಲು ಮಾಡಿ, ಸರ್ವಾಧಿಕಾರ ಹೇರಿದ ಪಕ್ಷ ಯಾವುದು ಎಂದು ಸಿ.ಟಿ.ರವಿ ಅವರು ಪ್ರಶ್ನೆಯನ್ನು ಮುಂದಿಟ್ಟರು.
ಇದಕ್ಕೆ ಆರೆಸ್ಸೆಸ್ ಕಾರಣವೇ ಅಥವಾ ನಿಮ್ಮ ಮುತ್ತಜ್ಜಿಯ ಸ್ವಾರ್ಥ, ದುರಾಸೆ, ಸರ್ವಾಧಿಕಾರದ ಕಾರಣಕ್ಕೆ ತುರ್ತು ಪರಿಸ್ಥಿತಿ ಹೇರಿದರೇ? ಎಂದು ಕೇಳಿದರು. ಹುಡುಕಿದಾಗ ಇದಕ್ಕೆ ನಿಮ್ಮ ಅಜ್ಜಿಯೇ (ಇಂದಿರಾ ಗಾಂಧಿ), ನಿಮ್ಮ ಪಾರ್ಟಿಯೇ ಕಾರಣ ಎಂಬ ಉತ್ತರ ಲಭಿಸುತ್ತದೆ ಎಂದು ತಿಳಿಸಿದರು.
1984ರಲ್ಲಿ ದೆಹಲಿ ಮತ್ತು ದೇಶದ ಅನೇಕ ಕಡೆ ನಡೆದ ಸಿಕ್ಖರ ಮೇಲಿನ ದೌರ್ಜನ್ಯವನ್ನು ಆರೆಸ್ಸೆಸ್ ಮಾಡಿದ್ದಲ್ಲ. ನಿಮ್ಮ ಪಾರ್ಟಿಯ ಇಂದಿರಾ ಬ್ರಿಗೇಡ್ನವರು, ಯೂತ್ ಕಾಂಗ್ರೆಸ್ಸಿನವರು, ಎನ್ಎಸ್ಯುಐ ನವರು, ನಿಮ್ಮ ಕುಟುಂಬದ ಗುಲಾಮರಂತೆ ವರ್ತಿಸುವ ಜನರ ದಬ್ಬಾಳಿಕೆ ಅದು. ಆರೆಸ್ಸೆಸ್ ಮಾಡಿದ್ದಲ್ಲ ಎಂದು ವಿಶ್ಲೇಷಿಸಿದರು.
ಇದನ್ನೂ ಓದಿ- Loan: ಯಾವ ರೀತಿಯ ಸಾಲಗಳು ಪ್ರಯೋಜನಕಾರಿ? ಯಾವುದು ಅಪಾಯಕಾರಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.